ಇನ್ನು ಕೋವಿಡ್ ರೋಗಿ ಅನಾಥ ಅಲ್ಲ !
ಪಿಪಿಇ ಕಿಟ್ ಧರಿಸಿ ಭೇಟಿ ಅವಕಾಶ, ಮನೆ ಊಟಕ್ಕೆ ಒಪ್ಪಿಗೆ ಸಾಧ್ಯತೆ
Team Udayavani, Oct 1, 2020, 6:34 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಇನ್ನು ಕೋವಿಡ್ ರೋಗಿ ಅನಾಥ ಅಲ್ಲ! ಕುಟುಂಬಸ್ಥರನ್ನು ಭೇಟಿ ಮಾಡಬಹುದು, ಮನೆ ಊಟ ಸೇವಿಸ ಬಹುದು. “ಒಂಟಿ’ತನ ನಿವಾರಣೆಯಾಗಿ ಮನೋ ಸ್ಥೆ „ರ್ಯ ಹೆಚ್ಚಿ ಬೇಗ ಗುಣ ಮುಖನಾಗಲು ಅವಕಾಶ ಸೃಷ್ಟಿಯಾಗಲಿದೆ. ಸೋಂಕು ಪೀಡಿತರ ಮಾನಸಿಕ ಆರೋಗ್ಯ ಮುಖ್ಯ ಎಂಬು ದನ್ನು ತಜ್ಞರು ಮನಗಂಡಿದ್ದಾರೆ. ಆಸ್ಪತ್ರೆ ಯಲ್ಲಿರುವವರನ್ನು ಕುಟುಂಬಸ್ಥರು ಪಿಪಿಇ ಕಿಟ್ ಧರಿಸಿ ಭೇಟಿ ಮಾಡಲು ಮತ್ತು ಆರೋಗ್ಯ ಸ್ಥಿರ ವಾಗಿರು ವವರಿಗೆ ಮನೆ ಊಟ ನೀಡಲು ಶಿಫಾರಸು ಮಾಡಿದ್ದಾರೆ. ಸರ ಕಾರ ಅನುಮತಿಸಿದರೆ ಮಾರ್ಗ ಸೂಚಿ ರೂಪಿಸಲಿದ್ದಾರೆ.
ಮನೆಯವರ ಭೇಟಿಗೆ ಹಂಬಲ
ಸೋಂಕುಪೀಡಿತರ ಆಪ್ತಸಮಾಲೋಚನೆ ವೇಳೆ ಶೇ. 50 ಮಂದಿ ಮನೆಯವರ ಭೇಟಿಗೆ ಹಂಬಲಿಸುವುದು ಕಂಡುಬಂದಿದೆ. ಹೀಗಾಗಿ ರೋಗಿಗಳಿಗೆ ಮಾನಸಿಕ ಬಲ ತುಂಬುವುದಕ್ಕಾಗಿ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವಂತೆ ಸರಕಾರಕ್ಕೆ ಮನವಿ ಪತ್ರ ಬರೆಯಲಾಗಿತ್ತು ಎಂದು ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ಉಪ ನಿರ್ದೇಶಕಿ ಡಾ| ರಜನಿ ಹೇಳಿದ್ದಾರೆ.
ಮಾನಸಿಕವಾಗಿ ಏನು ದುಷ್ಪರಿಣಾಮ?
– ಸೋಂಕುಪೀಡಿತ ಆಸ್ಪತ್ರೆಗೆ ದಾಖಲಾಗಿ ಸುಮಾರು 15 ದಿನ ಚಿಕಿತ್ಸೆ ಪಡೆಯಬೇಕಾಗುತ್ತದೆ.
– ನರ್ಸ್‌ಗಳು ಪರೀಕ್ಷೆ, ಮಾತ್ರೆ, ಚುಚ್ಚುಮದ್ದು ನೀಡುವುದು, ಊಟ -ಉಪಾಹಾರ ಒದಗಿಸುತ್ತಾರೆ. ವೈದ್ಯರು ರೌಂಡ್ಸ್‌ಗೆ ಬಂದು ಹೋಗುತ್ತಾರೆ. ಬೇರ್ಯಾರೂ ಇರುವುದಿಲ್ಲ.
– ಇದರಿಂದ ಸೋಂಕುಪೀಡಿತನನ್ನು ಬಂಧಿಸಿ ದಂತಾಗು ತ್ತದೆ. ಒಂಟಿತನ ಕಾಡಲಾರಂಭಿಸುತ್ತದೆ.
– ಆಸ್ಪತ್ರೆಯ ವಾತಾವರಣ, ಒಂಟಿತನಗಳಿಂದ ಮಾನಸಿಕವಾಗಿ ಕುಗ್ಗುತ್ತಾರೆ. ಭಯ ಆವರಿಸುತ್ತದೆ.
ಪ್ರಮುಖ ಶಿಫಾರಸುಗಳು
– ನಿತ್ಯ ಒಬ್ಬರು ಅಥವಾ ಇಬ್ಬರಿಗೆ ಒಮ್ಮೆ ಭೇಟಿಯ ಅವಕಾಶ.
– ಕುಟುಂಬಸ್ಥರು ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸಬೇಕು.
– ಸ್ಥಿರ ಆರೋಗ್ಯ ಹೊಂದಿರುವ ಸೋಂಕುಪೀಡಿತರಿಗೆ ಮನೆ ಊಟ ನೀಡಬಹುದು.
ಕುಟುಂಬಸ್ಥರ ಭೇಟಿ ಯಿಂದ ಗೊಂದಲ ಗಳು ನಿವಾರಣೆ ಯಾಗಿ ಆತನ ಆರೋಗ್ಯ ಸುಧಾರಿಸಲು ನೆರವಾಗುತ್ತದೆ.
– ಡಾ| ಪ್ರದೀಪ್ ಬಾನಂದೂರು, ನಿಮ್ಹಾ ನ್ಸ್‌ನ ತಜ್ಞರ ಸಮಿತಿ ಸದಸ್ಯ
ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.