10ನೇ ತರಗತಿ ಬಳಿಕ ಸಿಎ ಅಭ್ಯಾಸಕ್ಕೆ ಅವಕಾಶ
Team Udayavani, Oct 21, 2020, 1:46 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತೀಯ ಲೆಕ್ಕಪರಿಶೋಧಕರ ಮಂಡಳಿ (ಐಸಿಎಐ)ಯು ನಡೆಸುವ ಚಾರ್ಟರ್ಡ್ ಅಕೌಂಟೆಂಟ್‌ನ ಫೌಂಡೇಶನ್ ಕೋರ್ಸ್‌ಗೆ ಇನ್ನು ಮುಂದೆ ಆಸಕ್ತ ವಿದ್ಯಾರ್ಥಿಗಳು 10ನೇ ತರಗತಿ ತೇರ್ಗಡೆಯಾದ ಕೂಡಲೇ ತಾತ್ಕಾಲಿಕ ಪ್ರವೇಶ ಪಡೆಯಬಹುದಾಗಿದೆ.
ಇದನ್ನು ಸಾಧ್ಯವಾಗಿಸುವಂಥ ನಿಯಮ ಬದಲಾ ವಣೆ ಯನ್ನು ಮಂಡಳಿಯು ಅಳವಡಿಸಿಕೊಂಡಿದೆ. ಆದರೆ ತಾತ್ಕಾಲಿಕ ಪ್ರವೇಶ ಪಡೆದ ವಿದ್ಯಾರ್ಥಿಗಳು 12ನೇ ತರಗತಿ ಉತ್ತೀರ್ಣರಾದ ಬಳಿಕವಷ್ಟೇ ಅವರ ಪ್ರವೇಶ ಅಧಿಕೃತವಾಗುತ್ತದೆ. ಈ ನೂತನ ನಿಯಮದಿಂದಾಗಿ ಅಭ್ಯರ್ಥಿಗಳು ಸಿಎ ಕೋರ್ಸ್ ಪೂರೈಸಲು ಪ್ರಸ್ತುತ ತೆಗೆದುಕೊಳ್ಳುವ ಸಮಯಕ್ಕಿಂತ 6 ತಿಂಗಳು ಮುಂಚಿತವಾಗಿ ಕೋರ್ಸ್ ಪೂರೈಸಲು ಸಾಧ್ಯವಾಗಲಿದೆ.
ಈ ಸಂಬಂಧ ಚಾರ್ಟರ್ಡ್ ಅಕೌಂಟೆಂಟ್ಸ್ ರೆಗ್ಯುಲೇಶನ್ಸ್ 1988ರ 25ಇ, 25 ಎಫ್ ಮತ್ತು 28 ಎಫ್ಗಳಿಗೆ ತಿದ್ದುಪಡಿ ತರುವುದಕ್ಕೆ ಸರಕಾರವು ಅನುಮತಿ ನೀಡಿದೆ ಎಂದು ಐಸಿಎಐಯ ಅಧ್ಯಕ್ಷ ಅತುಲ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.