I.N.D.I.A: ಟೇಕಾಫ್‌ಗೆ ಮೊದಲೇ ವಿಪಕ್ಷಗಳ “ಇಂಡಿಯಾ” ಒಕ್ಕೂಟ ಲ್ಯಾಂಡಿಂಗ್‌?

ಬಂಗಾಲ, ಪಂಜಾಬ್‌ ಹಿನ್ನಡೆ ಬಳಿಕ ಈಗ ನಿತೀಶ್‌ ಕೂಡ ಔಟ್‌ | ಬಿಜೆಪಿ ಸೋಲಿಸಲು ಹೊರಟಿದ್ದ ಒಕ್ಕೂಟ ಪತನದ ಹಾದಿಯಲ್ಲಿ

Team Udayavani, Jan 28, 2024, 11:17 PM IST

india opposirion

ಪಟ್ನಾ: “ವಿಪಕ್ಷಗಳ ಇಂಡಿಯಾ ಒಕ್ಕೂಟವು ಒಂದಾದ ಮೇಲೆ ಒಂದರಂತೆ ನೋ ಬಾಲ್‌ ಹಾಕುತ್ತಿದೆ’ ಎಂದು ಕೆಲವು ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳು ಹಾಗೂ ಈಗ ಬಿಹಾರದಲ್ಲಿ ನಡೆದ ಹೈಡ್ರಾಮ ಮೋದಿಯವರ ಈ ಹೇಳಿಕೆಗೆ ಪುಷ್ಟಿ ನೀಡಿದೆ. ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗಲೇ, ವಿಪಕ್ಷಗಳ ಒಕ್ಕೂಟಕ್ಕೆ ಸಿಡಿಲು ಬಡಿದಿದ್ದು, ಟೇಕಾಫ್ಗೆ ಮುನ್ನವೇ ಲ್ಯಾಂಡ್‌ ಆಗಿದೆ. ಹೀಗೇ ಮುಂದುವರಿದರೆ ಚುನಾವಣೆ ವೇಳೆಗೆ ಒಕ್ಕೂಟ ಹೇಳಹೆಸರಿಲ್ಲದಂತೆ ಚದುರಿಹೋಗುವ ಸಾಧ್ಯತೆ ಇದೆ.

ಬಿಜೆಪಿಯನ್ನು ಸೋಲಿಸಬೇಕೆಂದರೆ ವಿಪಕ್ಷಗಳೆಲ್ಲ ಒಂದಾಗಬೇಕು ಎಂಬ ಧ್ಯೇಯದೊಂದಿಗೆ “ಇಂಡಿಯಾ ಒಕ್ಕೂಟ’ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿ ಇದ್ದಿದ್ದೇ ನಿತೀಶ್‌ ಕುಮಾರ್‌. ವಿವಿಧ ಪಕ್ಷಗಳ ನಾಯಕರ ಸರಣಿ ಸಭೆಗಳನ್ನೂ ಅವರು ನಡೆಸಿದ್ದರು. ಅದರಂತೆ, ಒಕ್ಕೂಟ ಸ್ಥಾಪನೆಯೂ ಆಯಿತು. ಆದರೆ, ಒಬ್ಬೊಬ್ಬರು ಒಂದೊಂದು ದಿಕ್ಕಿನ ಕಡೆಗೆ ಮುಖ ಮಾಡಿದ್ದರಿಂದ ದಿನೇ ದಿನೆ ಬಿರುಕುಗಳೇ ಹೆಚ್ಚಾಗತೊಡಗಿತು.

ಎಲ್ಲೆಲ್ಲೂ ಅಪಸ್ವರ: ಲೋಕಸಭೆ ಸೀಟು ಹಂಚಿಕೆ ವಿಚಾರದಲ್ಲಿ ಈಗಾಗಲೇ ಪಶ್ಚಿಮ ಬಂಗಾಲದಲ್ಲಿ ಟಿಎಂಸಿ, ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷವು ಕಾಂಗ್ರೆಸ್‌ ಜತೆ ಮುನಿಸಿಕೊಂಡಿದ್ದು, ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿವೆ. ಮಹಾರಾಷ್ಟ್ರದಲ್ಲೂ ಶಿವಸೇನೆಯ ಉದ್ಧವ್‌ ಬಣವು, ತಾವು ಕೇಳಿದಷ್ಟು ಕ್ಷೇತ್ರ ಬಿಟ್ಟುಕೊಡದಿದ್ದರೆ ಏಕಾಂಗಿ ಸ್ಪರ್ಧೆ ಖಚಿತ ಎಂಬ ಸುಳಿವು ನೀಡಿದೆ. ಉ.ಪ್ರದೇಶದಲ್ಲಿ ಎಸ್ಪಿ ನಾಯಕ ಅಖೀಲೇಶ್‌ ಇಂತಿಷ್ಟು ಕ್ಷೇತ್ರಗಳಲ್ಲಿ ಟಿಕೆಟ್‌ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿ ರಾಜ್ಯದಲ್ಲೂ “ಅಪಸ್ವರ’ಗಳೇ ಕಂಡುಬರುತ್ತಿರುವುದು ವಿಪಕ್ಷಗಳ ಒಕ್ಕೂಟದ ಪ್ರಮುಖ ಉದ್ದೇಶವನ್ನೇ ಮರೆಮಾಚಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಈಗ ಬಿಹಾರದಲ್ಲಿ ನಿತೀಶ್‌ ಅವರು ಇಂಡಿಯಾ ಒಕ್ಕೂಟದಿಂದ ನಿರ್ಗಮಿಸಿ, ಎನ್‌ಡಿಎ ತೆಕ್ಕೆಗೆ ಜಾರಿದ್ದಾರೆ. ಇದು ಒಕ್ಕೂಟಕ್ಕೆ ಅತಿದೊಡ್ಡ ಹೊಡೆತವೇ ಸರಿ. ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳಿದ್ದು, ನಿತೀಶ್‌ ಘರ್‌ ವಾಪ್ಸಿಯು ಬಿಜೆಪಿಗೆ ಭಾರೀ ಲಾಭವಾಗಿ ಪರಿಣಮಿಸಲಿದೆ.

ಮತ್ತೂಂದೆಡೆ, ಬಿಹಾರದ ಬೆಳವಣಿಗೆಯನ್ನೇ ಅಸ್ತ್ರವಾಗಿಸಿಕೊಂಡು ಉಳಿದ ಪ್ರಾದೇಶಿಕ ಪಕ್ಷಗಳು ಕೂಡ ಹೆಚ್ಚಿನ ಸೀಟುಗಳಿಗೆ ಪಟ್ಟು ಹಿಡಿಯುವ ಸಾಧ್ಯತೆಯಿದ್ದು, ಇಂದು ಕಾಂಗ್ರೆಸ್‌ಗೆ “ಉಗುಳಲೂ ಆಗದ, ನುಂಗಲೂ ಆಗದ ಸ್ಥಿತಿ’ಯನ್ನು ತಂದಿಡಲಿದೆ. ಕಾಂಗ್ರೆಸ್‌ ಪಟ್ಟು ಸಡಿಲಿಸದಿದ್ದರೆ, ಒಕ್ಕೂಟವು ಪತನಗೊಳ್ಳುವ ಸಾಧ್ಯತೆಯೇ ಹೆಚ್ಚು.

“ಇಂಡಿಯಾ’ ಸ್ಥಿತಿ ಸರಿಯಿಲ್ಲ: ನಿತೀಶ್‌

ಸಿಎಂ ಹುದ್ದೆಗೆ ರಾಜೀನಾಮೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ನಿತೀಶ್‌, “ಮಹಾಘಟಬಂಧನ್‌ ಕಥೆ ಮುಗಿದಿದೆ. ಇಂಡಿಯಾ ಒಕ್ಕೂಟದ ಪರಿಸ್ಥಿತಿ ಸರಿಯಿಲ್ಲ. ಅಲ್ಲಿ ಯಾರೂ ಕೆಲಸ ಮಾಡುತ್ತಿಲ್ಲ. ಒಕ್ಕೂಟವನ್ನು ಬೆಳೆಸಲು ನಾನು ಪ್ರಯತ್ನಿಸಿದೆ, ಆದರೆ ಅದು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.

ಜೆಡಿಯು ಕಥೆ ಮುಗಿಯಲಿದೆ: ತೇಜಸ್ವಿ

ಬಿಹಾರ ಬೆಳವಣಿಗೆ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, “ನಿತೀಶ್‌ ಗೌರವಾನ್ವಿತ ನಾಯಕ. ಆದರೆ, ಒಂದಂತೂ ಸತ್ಯ- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಕಥೆ ಮುಗಿಯಲಿದೆ’ ಎಂದಿದ್ದಾರೆ.

ಇಂಡಿಯಾಗೆ ಹಿನ್ನಡೆ: ವಿದೇಶಿ ಮಾಧ್ಯಮಗಳು!

ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ನಿತೀಶ್‌ ಕುಮಾರ್‌ ಒಕ್ಕೂಟ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಾದ ಈ ಬೆಳವಣಿಗೆ ಇಂಡಿಯಾ ಒಕ್ಕೂಟಕ್ಕೆ ಭಾರೀ ಹಿನ್ನಡೆಯಾದಂತಾಗಿದೆ ಎಂದು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅರಬ್‌ ನ್ಯೂಸ್‌, ಪ್ರಸಕ್ತ ಬೆಳವಣಿಗೆ ಒಕ್ಕೂಟದ ರಾಜಕೀಯಕ್ಕೆ ತಿರುವು ಎಂದಿದ್ದರೆ, ಅಲ್‌ ಅರೇಬಿಯಾ ಮತ್ತು ರಾಯಿಟರ್ಸ್‌ ಸಂಸ್ಥೆಗಳೂ “ಈ ಬೆಳವಣಿಗೆ ಬಿಜೆಪಿಗೆ ಲಾಭ ಮತ್ತು ಒಕ್ಕೂಟಕ್ಕೆ ನಷ್ಟತರುವಂಥದ್ದು’ ಎಂದು ಹೇಳಿವೆ.  ಸಿಂಗಾಪುರ ಮೂಲದ ಏಷ್ಯಾ ನ್ಯೂಸ್‌ ನೆಟ್‌ವರ್ಕ್‌, “ನಿತೀಶ್‌ ನಿರ್ಣಯ ಒಕ್ಕೂಟದ ಶಕ್ತಿಯನ್ನು ಕುಂದಿಸಿ ದುರ್ಬಲಗೊಳಿಸುತ್ತದೆ’ ಎಂದು ವರದಿ ಮಾಡಿದ್ದರೆ, ಮಲೇಷ್ಯಾ ಮೂಲದ ದಿ ಸ್ಟಾರ್‌ ವೆಬ್‌ಸೈಟ್‌, “ಮೋದಿ ಸರ್ಕಾರಕ್ಕೆ ಸವಾಲೆಸೆದವರಿಗೆ ಇದು ದೊಡ್ಡ ಆಘಾತ’ ಎಂದು ವರದಿ ಮಾಡಿದೆ.

 

 

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.