Health:ಬೆಳಗ್ಗೆ ಬೇಗ, ರಾತ್ರಿಯೂ “ನಮ್ಮ ಕ್ಲಿನಿಕ್” ಲಭ್ಯ- ಚಿಕಿತ್ಸೆ ಸಮಯ ಕಾರ್ಮಿಕಸ್ನೇಹಿ!
Team Udayavani, Oct 4, 2023, 12:41 AM IST
ಮಂಗಳೂರು: “ನಮ್ಮ ಕ್ಲಿನಿಕ್’ ಜನ ಸಾಮಾನ್ಯರ ಚಿಕಿತ್ಸಾಲಯಗಳ ಕಾರ್ಯಾ ಚರಣೆ ವೇಳಾಪಟ್ಟಿಯನ್ನು ಬದಲಾಯಿಸುವ ಮೂಲಕ ಅವುಗಳನ್ನು ಇನ್ನಷ್ಟು ಕಾರ್ಮಿಕ ಸ್ನೇಹಿಯನ್ನಾಗಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಪ್ರಾಯೋಗಿಕವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಐದು ಕ್ಲಿನಿಕ್‌ಗಳು ಕಾರ್ಮಿಕರು ಬೆಳಗ್ಗೆ ಬೇಗನೆ ಮತ್ತು ಸಂಜೆ ಕೆಲಸ ಬಿಟ್ಟ ಬಳಿಕ ಚಿಕಿತ್ಸೆ ಪಡೆಯಲು ಅನುವಾಗುವಂತೆ ಕಾರ್ಯ ನಿರ್ವಹಿಸಲಿವೆ.
“ನಮ್ಮ ಕ್ಲಿನಿಕ್’ಗಳು ಈವರೆಗೆ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಕಾರ್ಯ ನಿರ್ವಹಿಸುತ್ತಿದ್ದವು. ಈಗ ಪ್ರಾಯೋಗಿಕವಾಗಿ ಮಂಗಳೂರಿನ ಬೋಳೂರು, ಕೆರೆಬೈಲ್ ಮತ್ತು ಕೋಡಿಕಲ್, ಉಡುಪಿ ಜಿಲ್ಲೆಯ ಬೀಡಿನಗುಡ್ಡೆಯ “ನಮ್ಮ ಕ್ಲಿನಿಕ್’ಗಳನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 12 ಮತ್ತು ಸಂಜೆ 4ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. ಕುಂದಾ ಪುರದ “ನಮ್ಮ ಕ್ಲಿನಿಕ್’ಗೆ ಸದ್ಯ ವೈದ್ಯರ ಕೊರತೆ ಇದ್ದು, ಭರ್ತಿಯಾದ ಬಳಿಕ ಇದರ ವೇಳಾಪಟ್ಟಿಯೂ ಬದಲಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
“ನಮ್ಮ ಕ್ಲಿನಿಕ್’ನಲ್ಲಿ ತಾಯಿ ಮತ್ತು ಮಗುವಿನ ಆರೈಕೆ ಸಹಿತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತವೆ. ಜತೆಗೆ ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಸಿಗುವ ಎಲ್ಲ ಆರೋಗ್ಯ ಸೌಲಭ್ಯಗಳು ಲಭ್ಯ. ಮಲೇರಿಯ ಸಹಿತ ಸಾಂಕ್ರಾಮಿಕ ರೋಗಗಳ ತಪಾಸಣೆಯನ್ನೂ ಇಲ್ಲಿ ನಡೆಸಲಾಗುತ್ತದೆ.
ಇಲ್ಲಿಯ ಸಿಬಂದಿ ಶುಶ್ರೂಷೆಗೆಂದು ಮನೆ ಮನೆಗೆ ಭೇಟಿ ನೀಡುವಂತಿಲ್ಲ. ಉಚಿತ ಔಷಧ ಸೇವೆ ಎಲ್ಲ ಸಾರ್ವಜನಿಕರಿಗೂ ಸಿಗಲಿದೆ.
ಎಲ್ಲೆಲ್ಲಿದೆ ನಮ್ಮ ಕ್ಲಿನಿಕ್?
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸೂಟರ್ ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್, ಕುಂಜತ್ತಬೈಲ್, ಮೀನಕಳಿಯ ಸುಳ್ಯದ ದುಗ್ಗಲಡ್ಕ, ಮೂಡುಬಿದಿರೆಯ ಗಂಟಾಲ ಕಟ್ಟೆ, ಉಳ್ಳಾಲದ ಕೆರೆಬೈಲು, ಕಡಬದ ಕೋಡಿಂಬಾಳ, ಪುತ್ತೂರಿನ ಬನ್ನೂರುಗ್ರಾಮದಲ್ಲಿ “ನಮ್ಮ ಕ್ಲಿನಿಕ್’ ಆರಂಭಗೊಂಡಿದೆ. ಉಡುಪಿಯ ಬೀಡಿನ ಗುಡ್ಡೆ, ಕಕ್ಕುಂಜೆ, ನಿಟ್ಟೂರು, ಕುಂದಾ ಪುರದ ಖಾರ್ವಿಕೇರಿ, ಟಿ.ಟಿ. ರಸ್ತೆ, ಕಾರ್ಕಳದ ಮರೀನಾಪುರದಲ್ಲಿ ಇವೆ.
ಸಮಯ ಬದಲಾವಣೆ ಏಕೆ?
ದುಡಿಯುವ ಮತ್ತು ದಿನಗೂಲಿ ನೌಕರ ರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗ ಬೇಕು ಎಂಬ ಉದ್ದೇಶದಿಂದ ಸಮಯ ಬದ ಲಾವಣೆ ಮಾಡಲಾಗಿದೆ. ಸಾಮಾನ್ಯ ವಾಗಿ ಕಾರ್ಮಿಕರು ಬೆಳಗ್ಗಿ ನಿಂದ ಸಂಜೆಯವರೆಗೆ ಕೆಲಸ ದಲ್ಲಿರು ತ್ತಾರೆ. ಈ ಅವಧಿಯಲ್ಲಿ ಕ್ಲಿನಿಕ್‌ಗೆ ತೆರಳು ವುದು ಕಷ್ಟ. ಹೀಗಾಗಿ “ನಮ್ಮ ಕ್ಲಿನಿಕ್’ಗಳ ಸಮಯ ಬದಲಾಯಿಸಲಾಗುತ್ತಿದೆ.
ದಿನಗೂಲಿ ನೌಕರರನ್ನು, ದುಡಿಯುವ ವರ್ಗದವರನ್ನು ಗಮನದಲ್ಲಿ ಇರಿಸಿಕೊಂಡು “ನಮ್ಮ ಕ್ಲಿನಿಕ್’ ಸಮಯವನ್ನು ಪರಿಷ್ಕರಣೆ ಮಾಡಲು ರಾಜ್ಯ ಸರಕಾರದ ನಿರ್ದೇಶನ ನೀಡಿದೆ. ಅದರಂತೆ ಪ್ರಾಯೋಗಿಕವಾಗಿ ಸಮಯ ಬದಲಾವಣೆ ನಡೆಸಲಾಗಿದೆ. ಕೆಲಸಕ್ಕೆ ತೆರಳುವವರಿಗೆ ಬೆಳಗ್ಗೆ ಬೇಗ ಅಥವಾ ಸಂಜೆ ಬಳಿಕ ಚಿಕಿತ್ಸೆಗೆ ಆಗಮಿಸಲು ಇದರಿಂದ ಸಾಧ್ಯವಾಗಲಿದೆ.
– ಡಾ| ಎಚ್.ಆರ್. ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.