Elephant: ಆನೆಯ ದಾರಿಗೆ ನಮ್ಮದೇ ಅಡ್ಡಿ !

ಶಿರಾಡಿ ಹೆದ್ದಾರಿಯ ರಿಟೇನಿಂಗ್‌ ವಾಲ್‌ನಿಂದ ಆನೆ ಕಾರಿಡಾರ್‌ಗೆ ಸಂಚಕಾರ

Team Udayavani, Dec 10, 2023, 1:00 AM IST

ELEPHANT HINDU

ಮಂಗಳೂರು: ಚಾರ್ಮಾಡಿಯಿಂದ ಶಿರಾಡಿ, ಬಿಸಿಲೆ, ಪುಷ್ಪಗಿರಿ ಮೂಲಕ ಕೇರಳದ ವರೆಗೆ ಬಹಳ ಹಿಂದಿನ ಕಾಲದಿಂದಲೂ ಆನೆಗಳು ಸಂಚ ರಿಸುವ “ಆನೆ ಕಾರಿಡಾರ್‌”ಗೆ ಮನುಷ್ಯ ಚಟುವಟಿಕೆಯಿಂದಲೇ ಅಡ್ಡಿ ಉಂಟಾಗಿರುವುದು ಇತ್ತೀಚೆಗೆ ಕಾಡಾನೆ ದಾಂಧಲೆ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಹಲವು ದಿನಗಳಿಂದೀಚೆಗೆ ಪಶ್ಚಿಮ ಘಟ್ಟದ ಸೆರಗಿನ ಹಲವು ಕಡೆ ಆನೆಗಳ ಸಂಚಾರ, ತೋಟ ಗಳಿಗೆ ನುಗ್ಗಿ ಬೆಳೆ ಹಾನಿ ವರದಿಯಾಗುತ್ತಿದೆ. ಆನೆಗಳಿಂದ ಮಾನವ -ಪ್ರಾಣಿಗಳ ಜೀವ ಹಾನಿಯೂ ಆಗುತ್ತಿರುವುದು ಕಳವಳಕ್ಕೆ ಕಾರಣ.

ಇದರ ಹಿಂದೆ ಇರುವ ಕಾರಣಗಳನ್ನು ವಿಶ್ಲೇಷಿಸಿದರೆ ಮುಖ್ಯವಾಗಿ ಶಿರಾಡಿ ಘಾಟಿ ಹೆದ್ದಾರಿ ಸುಧಾರಣೆಯಾಗಿದ್ದು, ಹೆದ್ದಾರಿಯ ಇಕ್ಕೆಲ-ಎಂದರೆ ಕಣಿವೆ ಭಾಗ ಹಾಗೂ ಗುಡ್ಡದ ಭಾಗ ಎರಡೂ ಕಡೆಗೂ ರಿಟೇನಿಂಗ್‌ ವಾಲ್‌ ನಿರ್ಮಿಸಲಾಗುತ್ತಿದೆ.

ಹೆದ್ದಾರಿಯ ಸುರಕ್ಷೆಗಾಗಿ ಇದನ್ನು ಕೈಗೊಂಡಿದ್ದರೂ ಇದು ವಾಸ್ತವವಾಗಿ ಆನೆ ಕಾರಿಡಾರ್‌ನಲ್ಲಿ ಅವುಗಳ ಮುಕ್ತ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆಯವರು.

ಮೂರೇ ಕಡೆ ಆ್ಯನಿಮಲ್‌ ಅಂಡರ್‌ಪಾಸ್‌
ಶಿರಾಡಿ ಘಾಟಿಯುದ್ದಕ್ಕೂ ಅರಣ್ಯ ಭಾಗದಲ್ಲಿ ಈ ರೀತಿಯ ರಿಟೇನಿಂಗ್‌ ವಾಲ್‌ ನಿರ್ಮಾಣ ಮಾಡಲಾಗಿದೆ. ಪೆರಿಯಶಾಂತಿ, ರೆಖ್ಯ, ಅಡ್ಡಹೊಳೆ- ಈ ಮೂರು ಕಡೆ ಮಾತ್ರವೇ ಕಾಡುಪ್ರಾಣಿಗಳು ರಸ್ತೆ ದಾಟುವುದಕ್ಕಾಗಿ 10 ಅಡಿ ಎತ್ತರದ ಆ್ಯನಿಮಲ್‌ ಅಂಡರ್‌ಪಾಸ್‌ ನಿರ್ಮಿಸಲಾಗಿದೆ. ಆದರೆ ಸುಮಾರು 50 ಕಿ.ಮೀ. ಉದ್ದದ ಕಾಡಿನ ದಾರಿಗೆ ಈ ಮೂರು ಅಂಡರ್‌ಪಾಸ್‌ ಸಾಲದು. ನೂರಾರು ವರ್ಷಗಳಿಂದಲೇ ಆನೆಗಳ ಪಾರಂಪರಿಕ ಕಾರಿಡಾರ್‌ ಈ ಪ್ರದೇಶದಲ್ಲಿದೆ. ಆನೆಗಳು ಆಹಾರವನ್ನು ಅರಸಿ ಹಾಗೂ ದೈನಂದಿನ ಚಟುವಟಿಕೆಯಾಗಿ ಹಿಂಡು ಹಿಂಡಾಗಿ ಚಾರ್ಮಾಡಿ ಭಾಗದಿಂದ ಕೇರಳ ಗಡಿಭಾಗಕ್ಕೆ ಈ ಮೂಲಕ ಸಂಚರಿಸುವುದು ಸಾಮಾನ್ಯ.

50 ಚ.ಕಿ.ಮೀ. ಸುತ್ತಾಟ
ಆರೋಗ್ಯವಂತ ಆನೆ ದಿನಕ್ಕೆ ಕನಿಷ್ಠ 50 ಚದರ ಕಿ.ಮೀ. ಪ್ರದೇಶದಲ್ಲಿ ಸುತ್ತಾಡುತ್ತದೆ. ಆನೆಗಳ ಈ ಮುಕ್ತ ಸಂಚಾರ ಮಾನವನಿಗೂ ಕ್ಷೇಮಕರ. ಆದರೆ ನಾಲ್ಕೈದು ವರ್ಷಗಳಲ್ಲಿ ಶಿರಾಡಿಯಲ್ಲಿ ಹೆದ್ದಾರಿ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿವೆ. ಬಂಡೆ ಒಡೆಯುವುದು, ರಿಟೇನಿಂಗ್‌ ವಾಲ್‌ ನಿರ್ಮಾಣ, ಭೂಮಿ ಸಮತಟ್ಟು ಮಾಡುವ ಕೆಲಸ ನಡೆದಿದೆ. ಇದು ನಾಚಿಕೆ ಸ್ವಭಾವದ ಆನೆಗಳಿಗೆ ಹೆದ್ದಾರಿ ದಾಟುವುದಕ್ಕೆ ಅಡೆತಡೆಯುಂಟು ಮಾಡುತ್ತಿದೆ.

10 ಅಡಿಯಷ್ಟು ಎತ್ತರದ ರಿಟೇನಿಂಗ್‌ ವಾಲ್‌ ಏರಿಕೊಂಡು, ದಾಟಿಕೊಂಡು ಬರುವುದು ಸಾಧ್ಯವಾಗದೆ ಆನೆಗಳು ಒಂದೇ ಬದಿಗೆ ಸೀಮಿತವಾಗಿ ಸಂಚರಿಸಬೇಕಾಗುತ್ತಿದೆ. ಚಾರ್ಮಾಡಿ ಭಾಗದಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿರುವ ಕಾರಣ ಹೇಗೋ ಒಂದಷ್ಟು ಹೊಂದಾಣಿಕೆಯಾಗಬಹುದು. ಆದರೆ ಶಿರಾಡಿ, ಕೆಂಪುಹೊಳೆ ಭಾಗದಲ್ಲಿ ಮಾತ್ರ ಮಾನವನ ಚಟುವಟಿಕೆ ಹೆಚ್ಚಿರುವುದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಬಫರ್‌ ಝೋನ್‌ನಲ್ಲೂ ಮಾನವ ವಾಸ
ಹಿಂದೆ ಬಹುತೇಕ ಅರಣ್ಯದ ಹೊರಭಾಗದಲ್ಲಿರುವ ಬಫರ್‌ ವಲಯಗಳಲ್ಲಿ ಕಾಡು ಇತ್ತು, ಮಾನವ ವಾಸ ಇರಲಿಲ್ಲ. ಆದರೆ ಈಗ ಅಲ್ಲೂ ಜನವಸತಿ ತಲೆಯೆತ್ತಿದೆ. ಇದರಿಂದಾಗಿಯೂ ಮಾನವ-ಆನೆ ಸಂಘರ್ಷ ಹೆಚ್ಚಿರುವುದು ಗಮನಾರ್ಹ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಆನೆ ನಿಯಂತ್ರಣ ಕಾಮಗಾರಿಗಳು
ಜಿಲ್ಲೆಯಲ್ಲಿ ಆನೆ ನಿಯಂತ್ರಣಕ್ಕಾಗಿ ಆನೆ ನಿರೋಧಕ ಕಂದಕ, ಸೋಲಾರ್‌ ತಂತಿಬೇಲಿ, ಸೋಲಾರ್‌ ಡಬಲ್‌ ಲೈನ್‌ ಟೆಂಟಕಲ್‌ ಫೆನ್ಸಿಂಗ್‌ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಸಹಾಯ ಒದಗಿಸುತ್ತದೆ. 2020-21ರಲ್ಲಿ 23 ಕಿ.ಮೀ. ಕಂದಕ ನಿರ್ಮಿಸಲಾಗಿದೆ. 2021-22ರಲ್ಲಿ 28 ಕಿ.ಮೀ. ಕಂದಕ, 2022-23ರಲ್ಲಿ 90 ಕಿ.ಮೀ. ಕಂದಕ, 11.37 ಕಿ.ಮೀ. ಸೋಲಾರ್‌ ತಂತಿಬೇಲಿ, 60 ಕಿ.ಮೀ. ಸೋಲಾರ್‌ ಡಬಲ್‌ ಲೈನ್‌, 2022-23ರಲ್ಲಿ 34.20 ಕಿ.ಮೀ. ಕಂದಕ, 46 ಕಿ.ಮೀ. ಸೋಲಾರ್‌ ಡಬ್ಬಲ್‌ ಲೈನ್‌ ನಿರ್ಮಿಸಲಾಗಿದೆ.

ದೈನಂದಿನ ಸಂಚಾರದ ಪಥಕ್ಕೆ
ತಡೆಯಾದಾಗ ಆನೆಗಳು ದಾರಿ ಬದ ಲಾಯಿಸಲು ಯತ್ನಿಸುತ್ತವೆ. ಆಗ ತೋಟಗಳಿಗೆ ನುಗ್ಗುವುದು, ಬೇರೆ ಬೇರೆ ದಾರಿಗಳಲ್ಲಿ ಓಡಾಡು ವುದು ಸಾಮಾನ್ಯ. ಕಾಡಿನಲ್ಲಿ ಆಹಾರ ಕಡಿಮೆ ಯಾದ ಕಾರಣ ಈ ರೀತಿ ನಾಡಿಗೆ ಬರುತ್ತದೆ ಎನ್ನುವಂತಿಲ್ಲ.
- ಆ್ಯಂಟನಿ ಮರಿಯಪ್ಪ,ಡಿಸಿಎಫ್‌, ಮಂಗಳೂರು ವಿಭಾಗ

ಇಲ್ಲೇ ಇರುವ ಆನೆಗಳಿಲ್ಲ, ಕಾರಿಡಾರ್‌ನಲ್ಲಿ ಓಡಾಡುವ ವೇಳೆ ಕೆಲವೊಮ್ಮೆ ಹತ್ತಿರದ ತೋಟಗಳಿಗೆ ನುಗ್ಗುವುದಿದೆ. ಆದಷ್ಟೂ ಅವುಗಳನ್ನು ನಮ್ಮ ಸಿಬಂದಿ ಓಡಿಸುವ ಕೆಲಸ ಮಾಡುತ್ತಾರೆ.-ಡಾ| ಕರಿಕಾಳನ್‌,
ವೃತ್ತ ಅರಣ್ಯಾಧಿಕಾರಿ, ಮಂಗಳೂರು

 ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.