ನಮ್ಮ ಪ್ರಾರ್ಥನೆ ಈಗಾಗಲೇ ಈಡೇರಿದೆ!


Team Udayavani, Feb 26, 2021, 5:55 AM IST

ನಮ್ಮ ಪ್ರಾರ್ಥನೆ ಈಗಾಗಲೇ ಈಡೇರಿದೆ!

ಒಂದಾನೊಂದು ಕಾಲದಲ್ಲಿ ಸ್ವರ್ಗದಲ್ಲಿದ್ದ ಒಬ್ಬ ಗಂಧರ್ವನಿಗೆ ಭೂಮಿಯನ್ನೊಮ್ಮೆ ನೋಡಿಬರಬೇಕು ಎಂಬ ಬಯಕೆ ಯಾಯಿತು. ಮರ್ತ್ಯಲೋಕದ ಬಗ್ಗೆ ಅವನು ಬಹಳಷ್ಟು ವಿಷಯಗಳನ್ನು ಕೇಳಿ ತಿಳಿದಿದ್ದ. ಮನುಷ್ಯರ ಬಗ್ಗೆ ಅವನಲ್ಲಿ ಅಪಾರ ಕುತೂಹಲ ಇತ್ತು. ಹೀಗಾಗಿ ತಡೆಯದಾದ; ದೇವರಲ್ಲಿ ಅನುಮತಿ ಕೇಳಿ ಭೂಮಿಗೆ ಇಳಿದುಬಂದ.

ತಾನು ಕೇಳಿ ತಿಳಿದದ್ದು ನಿಜ ಎಂಬುದು ಗಂಧರ್ವನಿಗೆ ಭೂಮಿಗೆ ಬಂದೊಡನೆ ಅರಿವಿಗೆ ಬಂತು. ಸೂರ್ಯ ರಶ್ಮಿ ಮುತ್ತಿಕ್ಕುವ ಗಿರಿ ಶಿಖರಗಳು, ವಿಶಾಲ ವಾದ ಹುಲ್ಲುಗಾವಲು ಗಳು, ಕಡು ಹಸುರಿನ ದಟ್ಟಾರಣ್ಯ, ಉಗ್ರ ಮತ್ತು ಸೌಮ್ಯ ವನ್ಯಜೀವಿಗಳು, ಮಳೆಹನಿಗಳು ಬಿದ್ದಾಗ ಉಕ್ಕುವ ಮಣ್ಣಿನ ಮಧುರ ಕಂಪು… ಎಲ್ಲೆಲ್ಲೂ ಅಪೂರ್ವ ಸೌಂದರ್ಯ ಗಂಧರ್ವನನ್ನು ಸೆರೆಹಿಡಿಯಿತು. ಇವೆಲ್ಲವುಗಳಿಗೆ ಶಿಖರಪ್ರಾಯ ಎಂಬಂತೆ ಮನುಷ್ಯನನ್ನು ಕಂಡು ಆತ ಮಾರು ಹೋದ. ಮನುಷ್ಯನ ಹೃದಯದ ನೃತ್ಯ ಮತ್ತು ಆತ್ಮದ ಸಂಗೀತ ಅವನನ್ನು ಆನಂದ ತುಂದಿಲನನ್ನಾಗಿಸಿದವು. ಸೃಷ್ಟಿಯ ಅತ್ಯದ್ಭುತ ಚೆಲುವನ್ನು ಮನುಷ್ಯ ನಲ್ಲಿ ಕಂಡು ಗಂಧರ್ವ ನಿಬ್ಬೆರಗಾದ.

ಸಂಜೆಯಾಯಿತು. ಗಂಧರ್ವ ಸ್ವರ್ಗಕ್ಕೆ ಹಿಂದಿರುಗುವ ಸಮಯ. ಆದರೆ ಅವನಿಗೆ ಮನಸ್ಸೇ ಬಾರದು. ಅಂತಿಮ ವಾಗಿ ಒಲ್ಲದ ಮನಸ್ಸಿನಿಂದ ಹೊರಡಲು ಸಿದ್ಧನಾದಾಗ ತನ್ನನ್ನು ಇಷ್ಟು ಸೆರೆಹಿಡಿದ ಮನುಷ್ಯನಿಗೆ ಏನಾದರೂ ಕೊಡಬೇಕಲ್ಲ ಎಂದು ಆಲೋಚಿಸಿದ. ಅಷ್ಟರಲ್ಲಿ ನಾಲ್ವರು ಮನುಷ್ಯರು ಅವನಿಗೆ ಕಾಣಿಸಿ ದರು. ಗಂಧರ್ವ ಅವರೆದುರು ಪ್ರತ್ಯಕ್ಷ ನಾಗಿ ಒಂದೊಂದು ವರ ಬೇಡಿ ಕೊಳ್ಳುವಂತೆ ಹೇಳಿದ.

ಮನುಷ್ಯರಲ್ಲಿ ಒಬ್ಬ ಹೇಳಿದ, “ಸಂಸಾರದ ಜಂಜಡಗಳಿಂದ ರೋಸಿ ಹೋಗಿದ್ದೇನೆ. ಮನಃಶಾಂತಿ ಒದಗಿಸು’.
“ಸಂಸಾರ, ಜಂಜಡ, ಹೊರಾಟಗಳೇ ಬದುಕಿನ ತಿರುಳಲ್ಲವೇ?’ ಎಂದು ಪ್ರಶ್ನಿಸಿದ ಗಂಧರ್ವ. ಆದರೆ ಮನುಷ್ಯ ಕೇಳಲಿಲ್ಲ. ಗಂಧರ್ವ ಅವನನ್ನು ಒಂದು ಹಸುವಾಗಿ ರೂಪಾಂತರಿಸಿದ. ಹಸು ದೂರದ ಹುಲ್ಲುಗಾವಲಿನಲ್ಲಿ ಹುಲ್ಲು ಮೇಯತೊಡಗಿತು.
ಎರಡನೆಯ ಮನುಷ್ಯ “ನಾನು ಕಳಂಕಪೂರಿತನಾಗಿದ್ದೇನೆ. ನನ್ನನ್ನು ದೇವರಂತೆ ಪರಿಶುದ್ಧಗೊಳಿಸು’ ಎಂದು ಕೇಳಿದ. “ಕಾಮನೆಗಳು, ರಸಗಳು, ಆಸೆಗಳೇ ಬದುಕಿನ ರಸದೂಟೆಗಳಲ್ಲವೇ’ ಎಂದ ಗಂಧರ್ವ. ಆ ಮನುಷ್ಯ ಕೇಳಲಿಲ್ಲ. ಗಂಧರ್ವ ಅವನನ್ನು ದೂರದ ದೇವಸ್ಥಾನದಲ್ಲಿ ಒಂದು ಅಮೃತಶಿಲೆಯ ಮೂರ್ತಿಯನ್ನಾಗಿಸಿದ.

ಮೂರನೆಯವನು “ನನ್ನನ್ನು ಪರಿಪೂರ್ಣ ನನ್ನಾಗಿಸು’ ಎಂದು ಕೇಳಿ ಕೊಂಡ. ಕ್ಷಣಾರ್ಧದಲ್ಲಿ ಆತ ಅದೃಶ್ಯನಾದ. ಭೂಮಿಯ ಮೇಲೆ ಯಾವುದು ಕೂಡ ಪರಿ ಪೂರ್ಣವಾಗಿ ಇರಲು ಸಾಧ್ಯವಿಲ್ಲ.

ನಾಲ್ಕನೆಯ ಮನುಷ್ಯ ಮಾತ್ರ “ನಾನು ಈಗಿರುವುದರಲ್ಲೇ ಸಂತೃಪ್ತನಾಗಿದ್ದೇನೆ. ಉತ್ತಮ ಮನುಷ್ಯನಾಗಿ ಬಾಳುವುದಕ್ಕೆ ಅನುಗ್ರಹ ಮಾಡು’ ಎಂದ. ಗಂಧರ್ವನ ಮುಖದಲ್ಲಿ ಖುಷಿಯ ನಗು ಮಿಂಚಿತು, ಆ ಮನುಷ್ಯನನ್ನು ಬಾಚಿ ತಬ್ಬಿಕೊಂಡ, ಬಳಿಕ ಸ್ವರ್ಗಕ್ಕೆ ಹೊರಟು ಹೋದ.

ಬದುಕು ಬಹಳ ಸುಂದರ, ಈ ಭೂಮಿಯ ಮೇಲಿನ ನಮ್ಮ ಜನ್ಮ ಬಲು ದೊಡ್ಡದು ಎಂಬುದನ್ನು ಸಾರುವ ಕಥೆ ಇದು. ಪ್ರತೀಕ್ಷಣವೂ ಸಂತಸವಾಗಿರುತ್ತ, ಬದುಕು ತೆರೆದುಕೊಂಡ ಹಾಗೆ ಜೀವಿಸ ಬೇಕಿರುವ ಅದೃಷ್ಟವಂತರು ನಾವು.
ಕಥೆ ಇಲ್ಲಿಗೆ ಮುಗಿಯಲಿಲ್ಲ. ಗಂಧರ್ವ ಸ್ವರ್ಗಕ್ಕೆ ಹೋಗಿ ದೇವರನ್ನು ಕಂಡ. “ಅಲ್ಲಿ ಹೋಗಿ ಏನು ಮಾಡಿದೆ? ಸೃಷ್ಟಿಗೇನಾದರೂ ಭಂಗ ತಂದೆಯಾ?’ ಎಂದು ದೇವರು ಪ್ರಶ್ನಿಸಿದರು. “ಇಲ್ಲ. ನಿಜವಾಗಿ ನಿಮ್ಮ ಸೃಷ್ಟಿಗೆ ಮಾರು ಹೋದೆ. ಕೆಲವರ ಬೇಡಿಕೆಗಳನ್ನು ಈಡೇರಿಸಿದೆ’ ಎಂದು ವಿವರಿಸಿದ ಗಂಧರ್ವ.

ದೇವರು ಪ್ರಶ್ನಿಸಿದರು, “ಈಗ ನಿನಗೇನಾದರೂ ವರ ಬೇಕೇ?’
“ಆ ನಾಲ್ಕನೆಯವನಂತಹ ಮನುಷ್ಯ ಜನ್ಮವನ್ನು ನನಗೆ ಕರುಣಿಸು’ ಎಂದು ಪ್ರಾರ್ಥಿಸಿಕೊಂಡ ಗಂಧರ್ವ!
ಪುಣ್ಯವಶಾತ್‌, ನಾವು ಹಾಗೆ ಪ್ರಾರ್ಥಿಸಬೇಕಿಲ್ಲ. ಏಕೆಂದರೆ ನಾವೀಗಾ ಗಲೇ ಇಲ್ಲಿ ಜನಿಸಿದ್ದೇವೆ. ಹಾಗಾಗಿ ಅವಕಾಶವನ್ನು ಪೂರ್ಣ ಸದುಪಯೋಗ ಪಡಿಸಿಕೊಂಡು ಬದುಕೋಣ.

( ಸಾರ ಸಂಗ್ರಹ)

ಟಾಪ್ ನ್ಯೂಸ್

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.