ಆಚಾರವಿರಲಿ ನಮ್ಮ ನಾಲಗೆಯಲಿ..

Team Udayavani, Apr 6, 2021, 7:00 AM IST

ಆಚಾರವಿರಲಿ ನಮ್ಮ ನಾಲಗೆಯಲಿ..

ನಮ್ಮ ದೈನಂದಿನ ಬದುಕಿನಲ್ಲಿ ನಾವು ಅತ್ಯಂತ ಜಾಗರೂಕತೆ ಯಿಂದ ಬಳಸಬೇಕಾದ ಅಂಶಗಳೆಂದರೆ ಒಂದು ನಮ್ಮ ಬುದ್ಧಿ, ಇನ್ನೊಂದು ನಮ್ಮ ನಾಲಗೆ. ಇವೆರಡನ್ನು ಬೇಕಾಬಿಟ್ಟಿ ಯಾಗಿ ವಿವೇಚನೆಯಿಲ್ಲದೆ ಬಳಸಿದರೆ ಅನಾಹುತ ಖಂಡಿತ.

“ಎಲುಬಿಲ್ಲದ ನಾಲಗೆ’ ಎಂದು ಸಾಮಾ ನ್ಯವಾಗಿ ಟೀಕೆಗೊಳಗಾಗುವ, ನಾವು ಅತೀ ಜಾಗರೂಕತೆಯಿಂದ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾದ ನಾಲಗೆ ನಮ್ಮ ದೇಹದ ಬಹು ಮುಖ್ಯ ವಾದ ಅಂಗ. ನಾಲಗೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳದಿದ್ದರೆ ನಮ್ಮ ಬದುಕಿನಲ್ಲಿ ಅದೆಷ್ಟೋ ನೋವು, ಮನಸ್ತಾಪ, ಅನಾಹುತಗಳನ್ನು ಎದುರಿಸ ಬೇಕಾಗುವುದು ಖಚಿತ.

“ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ..’ ಅಂತ ಪುರಂದರದಾಸರು ಅಂದೇ ಎಚ್ಚರಿಸಿದ್ದಾರೆ. ಯಾವುದೆಲ್ಲ ನೀಚ ಬುದ್ಧಿ ಅಂತಲೂ ಹೇಳಿದ್ದಾರೆ. ಪೂರ್ವಾಪರ ವಿವೇಚನೆ ಯನ್ನು ಮಾಡದೆ ಪರರನ್ನು ವಿನಾಕಾರಣ ನಿಂದಿಸುವುದು ನೀಚತನ.

ಅವರಿವರ ಬಗ್ಗೆ ಚಾಡಿ ಹೇಳುವುದು, ತನ್ನನ್ನು ತಾನು ಅತಿಯಾಗಿ ಬಣ್ಣಿಸುವುದು, ಕೆಟ್ಟ ಕೆಟ್ಟ ಶಬ್ದಗಳ ಪ್ರಯೋಗ, ಸುಳ್ಳುಗಳನ್ನೇ ಹೇಳಿ ವಂಚಿಸುತ್ತ ಬದುಕುವುದು ನೀಚ ತನ. ಎದುರಿನಲ್ಲಿ ಬಣ್ಣದ ಮಾತುಗಳನ್ನಾಡಿ ಹಿಂದಿನಿಂದ ಹಳಿಯುವ ನೀಚ ಬುದ್ಧಿಯ ಅನೇಕ ಮಂದಿ ನಮ್ಮ ನಡುವೇ ಇದ್ದಾರೆ. ಯಾವಾಗ ಯಾರಲ್ಲಿ ಏನನ್ನು ಮಾತನಾ ಡಬೇಕು ಎಂಬ ಪರಿಜ್ಞಾನವಿಲ್ಲದೆ ಮಾತ ನಾಡುವುದು ಅವಿವೇಕತನ. ತಾನು ಬದು ಕುವುದಕ್ಕಾಗಿ ಇತರರ ಕುರಿತ ಅವಹೇಳನ ಮಾಡುವುದು ನೀಚತನ. ಅಹಂಕಾರದ, ದರ್ಪದ ನುಡಿಗಳು ಅಪಾಯಕಾರಿ.

“ನಾಲ್ಗೆಯುಂ ಕುಲವಂ ತೋರ್ಪದು’ ಎಂದು ಪ್ರಾಜ್ಞರು ಹೇಳಿದ್ದಾರೆ. ಅಂದರೆ ನಾವಾಡುವ ಮಾತುಗಳಿಂದ ನಮ್ಮ ವ್ಯಕ್ತಿತ್ವವನ್ನು, ನಮ್ಮ ಹಿನ್ನೆಲೆಯನ್ನು ಅಳೆಯ ಬಹುದು. ಒಳ್ಳೆಯ ಮಾತುಗಳಿಂದ ಒಳ್ಳೆಯ ಸ್ನೇಹಿತರನ್ನು ಗಳಿಸಬಹುದು. ಬಾಯಿ ತಪ್ಪಿ ನುಡಿದ ಮಾತುಗಳು ಅದೆಷ್ಟೋ ಉತ್ತಮ ಸಂಬಂಧಗಳನ್ನು ಮುರಿದು ಬಿಡಬಹುದು. ಯೋಚಿ ಸದೆ ನುಡಿಯುವ ನುಡಿಗಳು ಕಲಹಕ್ಕೆ ಕಾರಣವಾಗಬಹುದು. ನೆಮ್ಮದಿ ಕೆಡಿಸಿ ಅಶಾಂತಿ ಉಂಟುಮಾಡಬಹುದು. ಅದ ಕ್ಕಾಗಿಯೇ ನಾವಾಡುವ ಮಾತುಗಳು ಸವಿಯಾಗಿರಬೇಕು, ಹಿತವಾಗಿರಬೇಕು, ನಯವಾಗಿರಬೇಕು.

ಮಾತಿನಿಂದ ಒಳ್ಳೆಯ ಗೆಳೆತನವನ್ನು ಸಾಧಿಸಬಹುದು. ಮಾತಿನಿಂದಲೇ ದ್ವೇಷ, ಹಗೆತನವೂ ಸೃಷ್ಟಿಯಾಗಬಹುದು. ಕೊಲೆ, ಕಲಹಗಳಾಗಬಹುದು. “ಮಾತೇ ಮುತ್ತು, ಮಾತೇ ಮೃತ್ಯು’ ಎಂದು ಹಿರಿಯರು ಹೇಳಿದ್ದಾರೆ. ನಾಲಗೆಯಿಂದ ಜಾರಿಬಿದ್ದ ಮಾತುಗಳನ್ನು ಹಿಂದೆ ಪಡೆಯಲಾಗದು. ಮಾತುಗಳು ಉಂಟುಮಾಡುವ ಗಾಯವನ್ನು ಅಳಿಸಲಾಗದು. ಅದು ದೀರ್ಘ‌
ಕಾಲದ ಪರಿಣಾಮವನ್ನು ಬೀರುತ್ತದೆ. ಆದುದರಿಂದ ಬುದ್ಧಿವಂತನಾದವನು ಪರಿಣಾಮವನ್ನು ಯೋಚಿಸಿ ಮಾತ ನಾಡುವುದನ್ನು ರೂಢಿಸಿಕೊಂಡರೆ ಸಂಬಂಧಗಳನ್ನು ಉತ್ತಮವಾಗಿ ಇರಿಸಿ ಕೊಳ್ಳಬಹುದು. ನಮ್ಮ ಎಲ್ಲ ವ್ಯವಹಾರ ಗಳು ನಾವಾಡುವ ಮಾತುಗಳನ್ನು ಅವ ಲಂಬಿಸಿಕೊಂಡಿವೆ. ಮಾತು ಬಲ್ಲವನಿಗೆ ಜಗಳವಿಲ್ಲ. ಅಂದರೆ ಯಾವಾಗ, ಯಾರಲ್ಲಿ ಏನನ್ನು ಮಾತನಾಡಬೇಕು ಎಂದು ತಿಳಿದರೆ ಜಗಳವಾಗದು ಎಂದರ್ಥ.

ಇದು ನಾವು ನಾಲಗೆಯಿಂದಾಡುವ ಮಾತಿನಿಂದ ಉಂಟಾಗುವ ಪರಿಣಾಮ ವಾದರೆ ಕೇವಲ ಜಿಹ್ವಾ ಚಾಪಲ್ಯಕ್ಕೆ ಶರಣಾಗಿ ಕಂಡ ಕಂಡದ್ದನ್ನೆಲ್ಲ ತಿನ್ನುವ ಚಟದಿಂದ ಆರೋಗ್ಯ ಹಾಳು. ನಾಲಗೆಗೆ ಹಿತಕರವಾದದ್ದೆಲ್ಲ ಆರೋಗ್ಯಕ್ಕೆ ಹಿತಕರವಲ್ಲ. ಆಹಾರ ಸೇವನೆಯ ವಿಚಾರದಲ್ಲೂ ಮುಂದಾಲೋಚನೆ ಇಲ್ಲ ವಾದರೆ ನಾಲಗೆಯೇ ನಮ್ಮ ದೇಹದ ಶತ್ರುವಾಗಬಹುದು. ಅನಾರೋಗ್ಯಕ್ಕೆ ತುತ್ತಾಗಿ ದುಃಖದ ದಿನಗಳನ್ನು ಎದುರಿಸ ಬೇಕಾಗಬಹುದು. ಕ್ಷಣಿಕವಾದ ಬಾಯಿ ರುಚಿ ನೀಡುವ, ಆರೋಗ್ಯಕ್ಕೆ ಹಾನಿಕರ ವಾದ ಆಹಾರ ಸೇವನೆಯಿಂದ ದೂರ ವಿದ್ದಷ್ಟು ಕ್ಷೇಮ.

ಒಟ್ಟಿನಲ್ಲಿ ನಾಲಗೆಯ ಮೇಲೆ ನಿಯಂತ್ರಣವಿಲ್ಲದೇ ಹೋದರೆ ಅಪಾಯ ಖಚಿತ. ಅದು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳುಮಾಡುವ ನಮ್ಮೊಳಗಿನ ಶತ್ರು. ನಿಯಂತ್ರಿಸಿಕೊಂಡು ಉಪಯೋಗಿಸಿದರೆ ಯಶಸ್ಸಿಗೆ ಸಾಧನ. ನಾವಾಡುವಾ ಮಾತು ವಿವೇಕದಿಂದ ಕೂಡಿರಲಿ. ಮಾತು ಮನ ಮತ್ತು ಮನೆಗಳನ್ನು ಬೆಳಗುವಂತಿರಲಿ.

- ವಿದ್ಯಾ ಅಮ್ಮಣ್ಣಾಯ, ಕಾಪು

ಟಾಪ್ ನ್ಯೂಸ್

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.