ನಮ್ಮ ಆಶಯ ನಿಮ್ಮ ಆರೋಗ್ಯ ಕಾಳಜಿ

ಕೋವಿಡ್‌ ತಡೆಗೆ ಶ್ರಮಿಸುತ್ತಿದ್ದಾರೆ ಆರೋಗ್ಯ ಕಾರ್ಯಕರ್ತೆಯರು

Team Udayavani, Apr 27, 2020, 6:10 AM IST

ನಮ್ಮ ಆಶಯ ನಿಮ್ಮ ಆರೋಗ್ಯ ಕಾಳಜಿ

ನೀವೆಲ್ಲ ಮನೆಯಲ್ಲಿಯೇ ಇರಿ. ಆರೋಗ್ಯವಾಗಿರಿ ಎನ್ನುತ್ತಾ ಮನೆ ಮನೆ ಭೇಟಿ ನೀಡುವ ಆರೋಗ್ಯ ಯೋಧರ ಪರಿಶ್ರಮಕ್ಕೆ ಎಲ್ಲರೂ ಸಲಾಂ ಹೇಳಲೇಬೇಕು.

ಜಗತ್ತಿಗೇ ಸವಾಲಾಗಿ ನಿಂತಿರುವ ಕೋವಿಡ್ 19  ತಡೆಗಟ್ಟಲು ಸರಕಾರದೊಂದಿಗೆ ಆರೋಗ್ಯ ಕಾರ್ಯಕರ್ತೆಯರು ಇನ್ನಿಲ್ಲದ ಶ್ರಮ ಪಡುತ್ತಿದ್ದಾರೆ. ಸುಡು ಬಿಸಿಲಿನಲ್ಲಿ ಮನೆ ಮನೆ ಸುತ್ತಿ ಮಾಹಿತಿ ನೀಡುತ್ತಿರುವುದು ನಮ್ಮೆಲ್ಲರ ಆರೋಗ್ಯ ಕಾಳಜಿಗಾಗಿಯೇ. ಆದುದರಿಂದ ಅವರ ಪ್ರಶ್ನೆಗಳಿಗೆ ಉತ್ತರಿಸಿ ಸಹಕರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಒಂದು ವೇಳೆ ಯಾವುದೇ ಮನೆಯ ವರು ಮಾಹಿತಿ ನೀಡಲು ನಿರಾಕರಿಸಿದರೆ ಆ ಮನೆಯ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುವುದು ಕಡ್ಡಾಯ ವಾಗಿರುತ್ತದೆ. ಅನಂತರ ಹಿರಿಯ ಅಧಿಕಾರಿಗಳು ಈ ಮನೆಗೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿ ಹೇಳುವರು.

ಏನು ಸಲಹೆ ನೀಡುವರು
1 ಅನಾವಶ್ಯವಾಗಿ ಮನೆಯಿಂದ ಹೊರಗೆ ಬರಬೇಡಿ
2 ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುತ್ತಿರಿ
3 ಹೊರಗೆ ಬರುವಾಗ ಪ್ರತಿಯೊಬ್ಬರೂ ಮುಖಗವಸು ಧರಿಸಿ
4 ಜ್ವರ ಕೆಮ್ಮು ಇದ್ದರೆ ತತ್‌ಕ್ಷಣವೇ ವೈದ್ಯರ ಗಮನಕ್ಕೆ ತನ್ನಿ
5 ಶರೀರ‌ ಮತ್ತು ಪರಿಸರ ಸ್ವತ್ಛತೆಯ ಕಡೆ ಹೆಚ್ಚಿನ ಗಮನ ನೀಡಿ.
6 ಕೈಯನ್ನು ಆಗಾಗ್ಗೆ ಸ್ಯಾನಿಟೈಸರ್‌ ಅಥವಾ ಸಾಬೂನಿನಿಂದ ತೊಳೆಯಿರಿ

ಯಾವ ಮಾಹಿತಿ ಬಯಸುವರು
1 ಮನೆಯ ಯಜಮಾನರ ಹೆಸರು ಮತ್ತು ಫೋನ್‌ ನಂಬರ್‌
2 ಮನೆಯಲ್ಲಿ ಒಟ್ಟು ಎಷ್ಟು ಮಂದಿ ವಾಸವಾಗಿರುವಿರಿ
3 ಹಿರಿಯ ನಾಗರಿಕರು ಮತ್ತು ಪುಟ್ಟ ಮಕ್ಕಳ ಬಗ್ಗೆ ಮಾಹಿತಿ
4 ಗರ್ಭಿಣಿಯರು ಮತ್ತು ಬಾಣಂತಿಯರಿದ್ದರೆ ಅವರ ಆರೋಗ್ಯ ಸ್ಥಿತಿಗತಿ
5 ಮನೆಯಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಬಿಪಿ, ಶುಗರ್‌, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆಗಳಿದ್ದರೆ ಮಾಹಿತಿ
6 ಯಾರಾದರೂ ವಿದೇಶದಲ್ಲಿ ಇದಾರೆಯೇ, ಬಂದಿದ್ದಾರೆಯೇ, ಅಂತರ್‌ ರಾಜ್ಯ ಪ್ರವಾಸ ಕೈಗೊಂಡಿದ್ದರೆ ಮಾಹಿತಿ, ನಿಮ್ಮ ಪರಿಸರದಲ್ಲಿ ಯಾರಾ ದರೂ ಹೀಗೆ ಬಂದವರಿದ್ದರೆ ಮಾಹಿತಿ

ಸ್ವಚ್ಛತೆಗೆ ಆದ್ಯತೆ
ಮನೆಯವರಿಗೆ ಸ್ವತ್ಛತೆಯ ಅರಿವು ಮೂಡಿಸುವ ಆರೋಗ್ಯ ಕಾರ್ಯಕರ್ತೆಯರು ಕೂಡ ಸ್ವತಃ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುತ್ತಾರೆ. ದಿನಕ್ಕೆ 20-25 ಮನೆಗಳಿಗೆ ಭೇಟಿ ನೀಡುವ ಅವರು ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್‌ ಧರಿಸುವರು. ಪ್ರತಿ ಮನೆಗೆ ಭೇಟಿ ನೀಡಿದ ಬಳಿಕ ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸುವರು. ಮನೆಗೆ ಭೇಟಿ ನೀಡುವ ಸಂದರ್ಭವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವರು. ಮನೆಯ ಅಂಗಳದಲ್ಲಿ ನಿಂತುಕೊಂಡೇ ಹೆಚ್ಚಾಗಿ ಮಾಹಿತಿ ಪಡೆಯುವರು.

ನಾವೇನು ಮಾಡಬೇಕು
1 ಮಾಹಿತಿ ಬಯಸಿ ಮನೆಗೆ ಬರುವ ಆರೋಗ್ಯ ಕಾರ್ಯಕರ್ತೆಯರನ್ನು ಗೌರವದಿಂದ ಕಾಣುವುದು.
2 ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಮಾಹಿತಿ ನೀಡುವುದು.
3 ಪರಿಸರದವರು ಯಾರಾದರೂ ಹೊರಗಿನ ಪ್ರದೇಶಗಳಿಗೆ ಹೋಗಿದ್ದರೆ, ಆ ಬಗ್ಗೆ ಮಾಹಿತಿ ಒದಗಿಸುವುದು.
4 ಏನಾದರೂ ಸಂಶಯಗಳಿದ್ದರೆ ಮಾಹಿತಿ ಕೇಳಿ ಪಡೆದು ನಿವಾರಿಸಿಕೊಳ್ಳುವುದು.

ಸಂಪರ್ಕ ಕೊಂಡಿಯಾಗಿ ಕರ್ತವ್ಯ
ಅಂಗನವಾಡಿ ಕಾರ್ಯಕರ್ತೆಯರು ಗ್ರಾ.ಪಂ. ಮಟ್ಟದ ಟಾಸ್ಕ್ ಸಮಿತಿಯಲ್ಲಿ ಇದ್ದುಕೊಂಡು ಆರೋಗ್ಯ ಇಲಾಖೆಗಳ ಜತೆಯೂ ಸಂಪರ್ಕ ಇರಿಸಿಕೊಂಡು ಸೋಂಕು ತಡೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.
– ಆರ್‌. ಶೇಷಪ್ಪ , ಉಪನಿರ್ದೇಶಕರು, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಉಡುಪಿ

ಜನರಿಗಾಗಿ ಶ್ರಮ
ಕೋವಿಡ್ 19 ತಡೆಗಟ್ಟಲು ನಾವು ಸಾಕಷ್ಟು ಶ್ರಮ ಪಡುತ್ತಿದ್ದೇವೆ. ಒಂದು ಮನೆಯನ್ನೂ ಬಿಡದೆ ಸಂಪರ್ಕಿಸುತ್ತಿದ್ದೇವೆ. ಮನೆ ಮನೆ ಭೇಟಿ ಕಾರ್ಯದಲ್ಲಿ ತೊಡಗಿರುವ ಎಲ್ಲ ವಲಯಗಳ ಕಾರ್ಯಕರ್ತೆಯರಿಗೆ ಸರಕಾರವೇ ಎಲ್ಲ ಸವಲತ್ತು ಒದಗಿಸಲು ಕ್ರಮವಹಿಸಬೇಕು.
– ಸುಶೀಲಾ ನಾಡ,
ಅಂಗನವಾಡಿ ಕಾರ್ಯಕರ್ತೆ

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

fraud-2

ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್‌ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

2

Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ

balli

Padubidri: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.