![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 12, 2023, 10:03 PM IST
ನವದೆಹಲಿ: ಐದು ಸಾವಿರ ವರ್ಷಗಳ ಕಾಲದ ಇತಿಹಾಸ ಇರುವ ನಮ್ಮ ದೇಶದ ಸಂಸ್ಕೃತಿ ಜಾತ್ಯತೀತವೇ ಆಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನವದೆಹಲಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶವಾಸಿಗಳೆಲ್ಲರೂ ಒಗ್ಗಟ್ಟಾಗಿ ಜಗತ್ತಿಗೇ ಮಾದರಿಯಾಗಬೇಕಿದೆ.
ನಮ್ಮ ಜನರು ಮಾತೃಭೂಮಿ ಬಗ್ಗೆ ಹೆಚ್ಚಿನ ಒಲವು, ಭಕ್ತಿ ಹೊಂದಬೇಕಾದ ಅಗತ್ಯವಿದೆ ಎಂದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಜತೆಗಿನ ಸಂಭಾಷಣೆಯನ್ನು ನೆನಪಿಸಿದ ಭಾಗವತ್, ದೇಶ ಸದ್ಯ ಹೊಂದಿರುವ ಸಂವಿಧಾನ ಜಾತ್ಯತೀತ ಮೌಲ್ಯಗಳನ್ನು ಹೊಂದಿದೆ. ನಮ್ಮ ಸಂವಿಧಾನವನ್ನು ರಚಿಸಿದವರೂ ಜಾತ್ಯತೀತ ನಿಲುವಿನವರೇ ಆಗಿದ್ದಾರೆ ಎಂದು ಮುಖರ್ಜಿ ಹೇಳಿದರು ಎಂದು ಪ್ರತಿಪಾದಿಸಿದ್ದಾರೆ.
ಈ ನಡುವೆ, ಚಂಡೀಗಡದ ಕಾರ್ಯಕ್ರಮವೊಂದರಲ್ಲಿ ಗುರುವಾರ ಮಾತನಾಡುತ್ತಾ ಸನಾತನ ಧರ್ಮ ವಿವಾದದ ಕುರಿತು ಪ್ರಸ್ತಾಪಿಸಿದ ಭಾಗವತ್, ಸನಾತನ ಧರ್ಮವು ಭಾರತದ ಸಮಾನಾರ್ಥಕ ಪದ. ದೇಶದ ಸಂಸ್ಕೃತಿಯೇ ಸನಾತನ ಧರ್ಮವನ್ನು ಆಧರಿಸಿದೆ. ಅದನ್ನು ನಾಶ ಮಾಡಬೇಕು ಎಂದರೆ ನಮ್ಮನ್ನು ನಾವೇ ನಾಶ ಮಾಡಿದಂತೆ ಎಂದಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.