ಮಣಿಪಾಲ,ಮಂಗಳೂರು ಅತ್ತಾವರ ಆಸ್ಪತ್ರೆ: ಹೆಚ್ಚುವರಿ ಆನ್‌ಸೈಟ್‌ ಆಕ್ಸಿಜನ್‌ ಜನರೇಟರ್‌ ಸ್ಥಾಪನೆ


Team Udayavani, May 24, 2021, 3:00 AM IST

ಮಣಿಪಾಲ, ಮಂಗಳೂರು ಅತ್ತಾವರ ಆಸ್ಪತ್ರೆ: ಹೆಚ್ಚುವರಿ ಆನ್‌ಸೈಟ್‌ ಆಕ್ಸಿಜನ್‌ ಜನರೇಟರ್‌ ಸ್ಥಾಪನೆ

ಉಡುಪಿ: ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ದೇಶ ಅನುಭವಿಸುತ್ತಿದೆ. ಕೋವಿಡ್‌ ಸಾಂಕ್ರಾಮಿಕ ಮತ್ತು ಸಂಭವನೀಯ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ 1,500 ಎಲ್‌ಟಿಎಂ (ಲೀಟರ್‌ ಪರ್‌ ಮಿನಿಟ್‌) ಮತ್ತು ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ 500 ಎಲ್‌ಟಿಎಂ ಪ್ಲಾಂಟ್‌ ಆನ್‌-ಸೈಟ್‌ ಆಕ್ಸಿಜನ್‌ ಜನರೇಟರ್‌ ಸ್ಥಾಪಿಸಲಾಗುತ್ತಿದೆ.

ಇದರಿಂದ ತುರ್ತು ಸಂದರ್ಭಗಳಲ್ಲಿ ಅನಿಯಂತ್ರಿತ ವೈದ್ಯಕೀಯ ಆಕ್ಸಿಜನ್‌ ಪೂರೈಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮಣಿಪಾಲದ ಆಸ್ಪತ್ರೆಯಲ್ಲಿನ ಮರು ಪೂರಣದ ಲಾಜಿಸ್ಟಿಕ್‌ ವ್ಯವಸ್ಥೆಯನ್ನು ಪರೀಕ್ಷಿಸಲಾಯಿತು. ಮಣಿಪಾಲ ಮತ್ತು ಅತ್ತಾವರ ಆಸ್ಪತ್ರೆಗಳು ಕೋವಿಡ್‌ ರೋಗಿ ಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಬೇಡಿಕೆಯನ್ನು ಆದ್ಯತೆಯ ಮೇಲೆ ನೋಡಿ ಕೊಳ್ಳುವ ಆವಶ್ಯಕತೆ ಇದೆ ಎಂದು ಆಸ್ಪತ್ರೆಗಳ ಪ್ರಾದೇಶಿಕ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ ಅವರು ತಿಳಿಸಿದ್ದಾರೆ.

ಮಣಿಪಾಲ: 2,200 ಲೀ. ಅಗತ್ಯ
ಮಣಿಪಾಲ ಆಸ್ಪತ್ರೆಯು 2,032 ಹಾಸಿಗೆ ಗಳ ಆಸ್ಪತ್ರೆಯಾಗಿದ್ದು ಸಣ್ಣ ಶಸ್ತ್ರಚಿಕಿತ್ಸೆ ಕೊಠಡಿಗಳು ಸೇರಿದಂತೆ 26 ಶಸ್ತ್ರಚಿಕಿತ್ಸೆ ಕೊಠಡಿಗಳು, 250 ಐಸಿಯು ಹಾಸಿಗೆ, 900 ಇತರ ಹಾಸಿಗೆಗಳಿಗೆ ಮತ್ತು ಎರಡು ಅಂಗ ಸಂಸ್ಥೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಸುತ್ತಿದೆ. ಪ್ರಸ್ತುತ ಹಠಾತ್‌ ಬೇಡಿಕೆ ಹೆಚ್ಚಳದಿಂದಾಗಿ ಆಮ್ಲಜನಕದ ದೈನಂದಿನ ಬಳಕೆ 2,200 ಲೀ.ಗೆ ಏರಿಕೆಯಾಗಿದೆ. ಇಲ್ಲದಿದ್ದರೆ ಸಾಮಾನ್ಯ ದಿನಗಳಲ್ಲಿ ದೈನಂದಿನ ಬಳಕೆ 1,600 ಲೀ. ಆಗಿರುತ್ತದೆ. ಆಸ್ಪತ್ರೆಯು 20,000 ಲೀ.ಗಳಷ್ಟು ವೈದ್ಯಕೀಯ ಆಮ್ಲಜನಕದ ಶೇಖರಣ ಸಾಮರ್ಥ್ಯದ ಟ್ಯಾಂಕ್‌ ಹೊಂದಿದೆ. ಇದನ್ನು ವಾರಕ್ಕೆ ಎರಡು ಬಾರಿ ಬಳ್ಳಾರಿಯ ಕ್ರಯೋಜೆನಿಕ್‌ ಟ್ಯಾಂಕರ್‌ನಿಂದ (ಸುಮಾರು 380 ಕಿ.ಮೀ.) ತರಿಸಲಾಗುತ್ತದೆ.

ಎಲ್ಎಂಒ ಟ್ಯಾಂಕ್‌ನ ಒತ್ತಡದ ಕುಸಿತ ದಿಂದಾಗಿ ಕೇವಲ 15,400 ಲೀ. ಮಾತ್ರ ಬಳಸಬಹುದಾಗಿದೆ. ಇದು ಏಳು ದಿನಗಳ ಆವಶ್ಯಕತೆಗಳನ್ನು ಪೂರೈಸುತ್ತದೆ. ಅಲ್ಲದೆ ಮೀಸಲು ಆಗಿ 7 ಕ್ಯೂ.ಮೀ. ಸಾಮರ್ಥ್ಯದ 121 ಜಂಬೊ ಸಿಲಿಂಡರ್‌ಗಳಿವೆ. ಅವುಗಳನ್ನು ಸ್ಥಳೀಯವಾಗಿ (ಮೂಲ್ಕಿ, ಕಾಪು) ಮರುಪೂರಣ ಮಾಡಲಾಗುತ್ತಿದೆ ಎಂದು ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ತಿಳಿಸಿದ್ದಾರೆ.

ಅತ್ತಾವರ ಆಸ್ಪತ್ರೆ: 600 ಲೀ. ಅಗತ್ಯ
ಅತ್ತಾವರ ಆಸ್ಪತ್ರೆ 610 ಹಾಸಿಗೆಗಳನ್ನು ಒಳಗೊಂಡಿದೆ. ಸಣ್ಣ ಶಸ್ತ್ರಚಿಕಿತ್ಸೆ ಕೊಠಡಿ ಸೇರಿದಂತೆ 10 ಶಸ್ತ್ರ ಚಿಕಿತ್ಸೆ ಕೊಠಡಿಗಳು, 44 ಐಸಿಯು ಹಾಸಿಗೆಗಳು, 113 ಇತರ ಹಾಸಿಗೆಗಳಿಗೆ ಮತ್ತು ಎರಡು ಅಂಗಸಂಸ್ಥೆಗ ಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆಯಾ ಗುತ್ತಿದೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ 300 ಲೀ. ಆಮ್ಲಜನಕ ಸಾಕಾಗುತ್ತದೆ. ಆದರೆ ಈಗ ದಿನಕ್ಕೆ 600 ಲೀ. ಅವಶ್ಯವಿದೆ.
ಆಸ್ಪತ್ರೆಯು 6,000 ಲೀ. ಎಲ…ಎಂಒ ಸಾಮರ್ಥ್ಯದ ಶೇಖರಣಾ ಟ್ಯಾಂಕ್‌ ಹೊಂದಿದೆ. ಇದನ್ನು ವಾರಕ್ಕೆ ಎರಡು ಬಾರಿ ಮರುಪೂರಣಗೊಳಿಸಲಾಗುತ್ತಿದೆ. 42 ಜಂಬೋ ಸಿಲಿಂಡರ್‌ ಮೀಸಲು ಇದೆ ಎಂದು ವೈದ್ಯಕೀಯ ಅಧೀಕ್ಷಕ ಡಾ| ಜಾನ್‌ ಟಿ. ರಾಮ್‌ಪುರೆ ಅವರು ತಿಳಿಸಿದರು.

3.6 ಕೋ.ರೂ. ವೆಚ್ಚ
1,500 ಎಲ್‌ಪಿಎಂ ಸ್ಥಾವರ ಸ್ಥಾಪನೆಗೆ 400 ಚದರ ಅಡಿ ಜಾಗ ಅಗತ್ಯ. ಇದಕ್ಕಾಗಿ ಅಸ್ತಿತ್ವದಲ್ಲಿರುವ ಸಿಲಿಂಡರ್‌ ಶೇಖರಣೆ ಪ್ರದೇಶದ ಪಕ್ಕದಲ್ಲಿಯೇ ಜಾಗ ಗುರುತಿಸಲಾಗಿದೆ. ಪ್ಲಾಂಟ್‌ ವೆಚ್ಚ ಮತ್ತು ಸಂಬಂಧಿತ ಸಿವಿಲ್‌ ವರ್ಕ್ಸ್,
ಎಲೆಕ್ಟ್ರಿಕಲ್‌ ಪ್ಯಾನಲ್‌ ವರ್ಕ್‌, ಇತರ ವೆಚ್ಚಗಳು ಸೇರಿದಂತೆ ಒಟ್ಟು 2.5 ಕೋ.ರೂ. ವೆಚ್ಚ ಆಗಲಿದೆ. 500 ಎಲ್‌ಪಿಎಂ ಸ್ಥಾವರ ಸ್ಥಾಪನೆಗೆ 100 ಚದರ ಅಡಿ ಬೇಕಾಗುತ್ತದೆ. ಪ್ಲಾಂಟ್‌ ವೆಚ್ಚ ಮತ್ತು ಸಂಬಂಧಿತ ಸಿವಿಲ್‌ ವರ್ಕ್ಸ್, ಎಲೆಕ್ಟ್ರಿಕಲ್‌ ಪ್ಯಾನಲ್‌ ವರ್ಕ್‌ ಇತ್ಯಾದಿಗಳಿಗೆ 1.10 ಕೋ.ರೂ. ವೆಚ್ಚ ಆಗಲಿದೆ.

ಮೂಲಸೌಕರ್ಯಕ್ಕೆ ಆದ್ಯತೆ
ಮಾಹೆ ಮಣಿಪಾಲವು ಯಾವಾಗಲೂ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಮತ್ತು ಸಮಾಜಕ್ಕೆ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಈ ಸಾಂಕ್ರಾಮಿಕ ರೋಗದ ಕಾಲದಲ್ಲಿಯೂ ಉತ್ತಮ ಆರೈಕೆಯನ್ನು ಒದಗಿಸಲು ತನ್ನದೇ ಆದ ಆಮ್ಲಜನಕ ಜನರೇಟರ್‌ ಸ್ಥಾಪಿಸಲು ಮುಂದಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.