ಆಸ್ಪತ್ರೆಗಳಲ್ಲಿ ಆಮ್ಲಜನಕದ ಅಭಾವ : ದರವೂ ಏಕಾಏಕಿ ಹೆಚ್ಚಳ
Team Udayavani, Jun 25, 2020, 3:47 PM IST
ಕೊನಾಕ್ರೈ(ಗಿನಿ): ಆಫ್ರಿಕಾ, ದ.ಅಮೆರಿಕ ದೇಶದ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಬಾಧಿಸುತ್ತಿರುವಂತೆ, ವಿಶ್ವದ ಇತರ ಆಸ್ಪತ್ರೆಗಳೂ ಕಷ್ಟ ಕಾಲ ಎದುರಿಸುತ್ತಿವೆ.
ಈ ಮೊದಲು ಬಡ ರಾಷ್ಟ್ರಗಳ ಆಸ್ಪತ್ರೆಗಳಲ್ಲಿ ಪೂರೈಕೆ ಕೊರತೆಯಿಂದ ಇಂತಹ ಸಮಸ್ಯೆ ಇದೆ ಎಂದು ಹೇಳಲಾಗಿತ್ತು. ಆದರೆ ಈಗ ಯುರೋಪ್, ಅಮೆರಿಕದಂತಹ ಮುಂದುವರಿದ ದೇಶಗಳಲ್ಲೇ ಆಮ್ಲಜನಕದ ಕೊರತೆ ತೀವ್ರವಾಗಿ ಕಾಡುತ್ತಿದೆ.
ಆಮ್ಲಜನಕ ಆಸ್ಪತ್ರೆಗಳಲ್ಲಿ ಸಾಮಾನ್ಯ ಅಗತ್ಯವಾಗಿದ್ದು, ವಿದ್ಯುತ್, ನೀರಿನಂತೆ ಬೇಡಿಕೆ ಹೊಂದಿದೆ. ಇದನ್ನು ದ್ರವ ರೂಪದಲ್ಲಿ ಟ್ಯಾಂಕರ್ ಟ್ರಕ್‌ಗಳಲ್ಲಿ ಆಸ್ಪತ್ರೆಗಳಲ್ಲಿರುವ ಟ್ಯಾಂಕ್‌ಗಳಿಗೆ ಪೂರೈಸಲಾಗುತ್ತದೆ. ಅಲ್ಲಿಂದ ಪೈಪ್‌ಗ್ಳ ಮೂಲಕ ರೋಗಿಯ ವಾರ್ಡ್‌ಗೆ ಸಂಪರ್ಕ ಕಲ್ಪಿಸಿ ನೀಡಲಾಗುತ್ತದೆ. ಕೋವಿಡ್ ರೋಗಿಗಳಿಗೆ ಆಮ್ಲಜನಕ ಅತಿ ಹೆಚ್ಚು ಬೇಕಾಗಿದ್ದು, ಈ ಕಾರಣದಿಂದ ಪೂರೈಕೆಯಾದಷ್ಟೂ ಸಾಕಾಗುತ್ತಿಲ್ಲ.
ಬಡ ದೇಶಗಳಾದ ಪೆರು ಮತ್ತು ಬಾಂಗ್ಲಾದೇಶಗಳಲ್ಲಿ ಈಗ ಆಮ್ಲಜನಕ ಸಿಗುತ್ತಲೇ ಇಲ್ಲ. ಪರಿಣಾಮ ಅದು ದುಬಾರಿ ವಸ್ತುವಾಗಿ ಪರಿಣಮಿಸಿದೆ. ಸಹರಾ ಆಸುಪಾಸಿನ ಆಫ್ರಿಕಾ ದೇಶಗಳಲ್ಲಿ ಆಮ್ಲಜನಕ್ಕೆ ಲಕ್ಷಾಂತರ ರೂ.ಗಳನ್ನು ಸರಕಾರಗಳು ವ್ಯಯಿಸುತ್ತಿವೆ.
ಹಲವಾರು ಆಸ್ಪತ್ರೆಗಳು ತಮ್ಮಲ್ಲೇ ಒಂದು ಆಮ್ಲಜನಕ ತಯಾರಿಕೆ ಕೇಂದ್ರ ಮಾಡಲು ಉದ್ದೇಶಿಸಿದ್ದರೂ ಹಣದ ಅಭಾವದಿಂದಾಗಿ ಅವುಗಳು ಆರಂಭವಾಗಿಲ್ಲ. ಇದರಿಂದ ವಿವಿಧ ತಯಾರಿಕೆ ಕೇಂದ್ರಗಳಿಂದ ಸಿಲಿಂಡರ್‌ಗಳ ಮೂಲಕ ಆಮ್ಲಜನಕವನ್ನು ತಯಾರಿಸಬೇಕಾಗಿದೆ. ಗಿನಿ ದೇಶದಲ್ಲಿ ಸೊಗೆಡಿ ಹೆಸರಿನ ಒಂದೇ ಒಂದು ಆಮ್ಲಜನಕ ತಯಾರಿಕೆ ಕೇಂದ್ರವಿದ್ದು ಅಲ್ಲೀಗ ಮಾಡುವ ಉತ್ಪಾದನೆ ಏನಕ್ಕೂ ಸಾಲುತ್ತಿಲ್ಲ. ಇತ್ತ ಬಾಂಗ್ಲಾದೇಶದಲ್ಲಿ ಏಕೀಕೃತ ವ್ಯವಸ್ಥೆ ಇಲ್ಲದ್ದರಿಂದ ಎಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಮಸ್ಯೆ ಶುರುವಾಗಿದೆ. ಇದರಿಂದ ಜನರು ಸಿಲಿಂಡರ್ ಖರೀದಿಸಿ, ಕಾಳಸಂತೆಯಲ್ಲಿ ಆಮ್ಲಜನಕ ಖರೀದಿಸಿ ತಮ್ಮವರಿಗೆ ಆಮ್ಲಜನಕ ವ್ಯವಸ್ಥೆ ಮಾಡಬೇಕಾಗಿದೆ. ಪೆರು ದೇಶದಲ್ಲಿ ಕೊರತೆಯಿಂದಾಗಿ ಹೆಚ್ಚೆಚ್ಚು ಉತ್ಪಾದನೆ ಮಾಡುವಂತೆ ಅಲ್ಲಿನ ಅಧ್ಯಕ್ಷರು ಕಂಪೆನಿಗಳಿಗೆ ಹೇಳಿದ್ದಾರೆ.
ಅಲ್ಲದೇ ಹೊಸ ಟ್ಯಾಂಕ್‌ಗಳು ತಯಾರಿಕೆ ಕೇಂದ್ರಗಳಿಗೆ ಸರಕಾರವೇ 212 ಕೋಟಿ ರೂ.ಗಳ ನೆರವಿಗೆ ಮುಂದಾಗಿದೆ.
ಶ್ವಾಸಕೋಶದ ಸಮಸ್ಯೆ ಹೊಂದಿರುವ ರೋಗಿಗಳಿಗೂ ಆಮ್ಲಜನಕ ಬೇಕು. ನ್ಯುಮೋನಿಯಾದಂತಹ ಕಾಯಿಲೆಗೆ ಆಮ್ಲಜನಕ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಕೋವಿಡ್ ಕಾಲದಲ್ಲಿ ಇದರ ಅಗತ್ಯ ಹಿಂದಿಗಿಂತಲೂ ಹೆಚ್ಚಾಗಿದೆ. ಈವರೆಗೆ ಆಮ್ಲಜನಕವನ್ನು ಅಗತ್ಯ ಔಷಧಗಳ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಆದರೆ ಈಗ ಸಹರಾ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಏಷ್ಯಾದ ಪರಿಸ್ಥಿತಿಯಿಂದ ಆಮ್ಲಜನಕ ಅಗತ್ಯ ವಸ್ತುಗಳಲ್ಲಿ ಸೇರಬೇಕಾದ ಸ್ಥಿತಿ ಬಂದೊದಗಿದೆ. ಸಂಶೋಧನೆಯೊಂದರ ಪ್ರಕಾರ ಕಾಂಗೋದಲ್ಲಿ ಅಗತ್ಯದ ಶೇ.2ರಷ್ಟು ಮಾತ್ರ ಆಮ್ಲಜನಕ ಲಭ್ಯ. ತಾಂಜೇನಿಯಾದಲ್ಲಿ ಶೇ.8, ಬಾಂಗ್ಲಾದಲ್ಲಿ ಶೇ.7ರಷ್ಟು ಮಾತ್ರ ಲಭ್ಯವಿದೆ. ಕೋವಿಡ್‌ನಿಂದಾಗಿ ಕೊರತೆ ಇತರ ದೇಶಗಳಲ್ಲೂ ಹೆಚ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.