Ozer: ಥೋಡೆಕ್ಸ್ ಸ್ಥಾಪಕನಿಗೆ 11,196 ವರ್ಷ ಜೈಲು
ಕ್ರಿಪ್ಟೊ ಕರೆನ್ಸಿ ಹೂಡಿಕೆದಾರರಿಗೆ ವಂಚಿಸಿದ ಟರ್ಕಿಯ ಒಜೆರ್ಗೆ ಭಾರೀ ಶಿಕ್ಷೆ
Team Udayavani, Sep 9, 2023, 9:27 PM IST
ಅಂಕಾರ: ಟರ್ಕಿ ದೇಶದ ಥೋಡೆಕ್ಸ್ ಎಕ್ಸ್ಚೇಂಜ್ ಕ್ರಿಪ್ಟೋ ಕರೆನ್ಸಿ ಸ್ಥಾಪಕ ಫಾರುಕ್ ಫಾತಿಹ್ ಒಜೆರ್ಗೆ ನೀಡಿರುವ ಜೈಲು ಶಿಕ್ಷೆ ಪ್ರಮಾಣ ಎಷ್ಟು ಗೊತ್ತೇ? 11,196 ವರ್ಷಗಳು! ಅವರ ಸಹೋದರ ಗುವೆನ್, ಸಹೋದರಿ ಸೆರಪ್ಗ್ೂ ಇಷ್ಟೇ ವರ್ಷ ಜೈಲು ಶಿಕ್ಷೆ ನೀಡಲಾಗಿದೆ. 2004ರಲ್ಲಿ ಆ ದೇಶದಲ್ಲಿ ಮರಣದಂಡನೆಯನ್ನು ರದ್ದು ಮಾಡಲಾಯಿತು, ಅನಂತರ ಈ ರೀತಿಯ ದೀರ್ಘಾವಧಿಯ ಶಿಕ್ಷೆಯನ್ನು ಅಲ್ಲಿ ನೀಡಲಾಗುತ್ತಿದೆ!
ಕೇವಲ 29 ವರ್ಷದ ಒಜೆರ್ 22 ವರ್ಷದವರಿದ್ದಾಗ ಥೋಡೆಕ್ಸ್ ಎಕ್ಸ್ಚೇಂಜ್ ಸ್ಥಾಪಿಸಿದರು. 2 ವರ್ಷಗಳ ಹಿಂದೆ ಟರ್ಕಿಯ ಲಿರಾ ಕರೆನ್ಸಿ ಮೌಲ್ಯ ಕಳೆದುಕೊಳ್ಳಲು ಆರಂಭವಾದಾಗ, ಜನ ಥೋಡೆಕ್ಸ್ನಲ್ಲಿ ಕ್ರಿಪ್ಟೋ ಕರೆನ್ಸಿ ಖರೀದಿಸಲಾರಂಭಿಸಿದರು. ಅಷ್ಟು ಹೊತ್ತಿಗೆ ಸರ್ಕಾರದ ಪ್ರಮುಖ ನಾಯಕರನ್ನು ಆತ್ಮೀಯಗೊಳಿಸಿಕೊಂಡಿದ್ದ ಒಜೆರ್, ತಮ್ಮ ಕಂಪನಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದರು.
ದಿಢೀರನೆ 2021, ಏಪ್ರಿಲ್ನಲ್ಲಿ ಅನಾಹುತ ನಡೆಯಿತು. ಇದ್ದಕ್ಕಿದ್ದಂತೆ ಅವರ ಕಂಪನಿಯ ಖಾತೆಯಲ್ಲಿದ್ದ ಹಣ ಮಾಯವಾಯಿತು. ಒಜೆರ್ ದೇಶಬಿಟ್ಟು, ಅಲ್ಬೇನಿಯಕ್ಕೆ ಪರಾರಿಯಾದರು. ಇಂಟರ್ಪೋಲ್ ನೆರವಿನಿಂದ ಕಳೆದ ವರ್ಷ ಅವರನ್ನು ಬಂಧಿಸಲಾಯಿತು. ಈ ವರ್ಷ ಜೂನ್ನಲ್ಲಿ ದೇಶಕ್ಕೆ ಅವರನ್ನು ಕರೆತರಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.