2022ರ ಹೊರಳು ನೋಟ; ಮಹಾಲಿಂಗ ನಾಯ್ಕ ಅಮೈ ಅವರಿಗೆ ಪದ್ಮ ಗೌರವ
Team Udayavani, Dec 26, 2022, 6:05 AM IST
ನೀರಿಗಾಗಿ ಭಗೀರಥ ಪ್ರಯತ್ನ ಮಾಡಿ ಸುರಂಗ ಕೊರೆದ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮಹಾಲಿಂಗ ನಾಯ್ಕ ಅಮೈ ಅವರನ್ನು ಜ. 25ರಂದು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ರಾಷ್ಟ್ರ ಪತಿ ರಾಮನಾಥ ಕೋವಿಂದ್ ಅವರಿಂದ ತುಳುನಾಡಿನ ಮುಟ್ಟಾಳೆ ಧರಿಸಿ ಪ್ರಶಸ್ತಿ ಸ್ವೀಕರಿಸಿ ದೇಶದ ಗಮನ ಸೆಳೆ ದಿದ್ದರು.
ಧರ್ಮಸ್ಥಳ: ಬಾಹುಬಲಿಗೆ 216 ಕಲಶಗಳಿಂದ ಪಾದಾಭಿಷೇಕ
ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ವಿರಾಜ ಮಾನ ರಾಗಿರುವ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 40ನೇ ವರ್ಧಂತ್ಯುತ್ಸದ ಪ್ರಯುಕ್ತ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಫೆ. 2ರಂದು ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನೆರವೇರಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ಸಡಗರ
ಧರ್ಮಸ್ಥಳದಲ್ಲಿ ಫೆ. 28ರಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಾಡಿನ ಎಲ್ಲೆಡೆಯಿಂದ 30,000ಕ್ಕೂ ಅಧಿಕ ಪಾದಯಾತ್ರಿಗಳು ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಉಪವಾಸ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯಿತು.
ಕಲ್ಲಿನ ಕೋರೆಯ ಹೊಂಡ ದಲ್ಲಿ ಮುಳುಗಿ ಇಬ್ಬರ ಸಾವು
ನರಿಕೊಂಬು ಗ್ರಾಮದ ಏಲಬೆಯಲ್ಲಿ ಫೆ. 25ರಂದು ಕಲ್ಲಿನ ಕೋರೆಯ ಹೊಂಡದಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದರು. ನರಿಕೊಂಬು ನಾಯಿಲ ಬೋರುಗುಡ್ಡೆ ನಿವಾಸಿ ಜಗದೀಶ್(45) ಹಾಗೂ ಅಲ್ಲಿಪಾದೆ ನಿವಾಸಿ ನಿಧಿಶ್(16) ಮೃತ ಪಟ್ಟವರು. ಆದರೆ ಅವರು ಕೊರೆಯ ಹೊಂಡಕ್ಕೆ ಯಾವ ಕಾರಣಕ್ಕೆ ಇಳಿದಿದ್ದರು ಎಂಬುದು ನಿಗೂಢ ವಾಗಿತ್ತು. ಸ್ನಾನ ಮಾಡಲು, ಮೀನು ಹಿಡಿಯಲು ಅಥವಾ ಗುಜರಿ ಹೆಕ್ಕಲು ನದಿಗೆ ಇಳಿದಿದ್ದರು ಎಂಬೆಲ್ಲ ಶಂಕೆಗಳು ವ್ಯಕ್ತವಾಗಿದ್ದವು.
ಕಡತ ಯಜ್ಞಕ್ಕೆ ಚಾಲನೆ
ದ.ಕ. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ಕಡತ ವಿಲೇವಾರಿ ಅಭಿಯಾನಕ್ಕೆ ಫೆ. 19ರಂದು ಮಂಗಳೂರಿನ ಜಿ.ಪಂ. ಸಭಾಂಗಣದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದ್ದರು.
ವಿವಿಧ ಕಾಮಗಾರಿಗಳ ಲೋಕಾರ್ಪಣೆ, ಶಿಲಾನ್ಯಾಸ
ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 7 ಜಿಲ್ಲೆಗಳ 3,163 ಕೋ.ರೂ. ವೆಚ್ಚದ 15 ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಲೋಕಾ ರ್ಪಣೆಯನ್ನು ಫೆ. 28ರಂದು ನೆರವೇರಿಸಿದ್ದರು. ಕೆಪಿಟಿ ಜಂಕ್ಷನ್‌ನಲ್ಲಿ ವಿಯುಪಿ ನಿರ್ಮಾಣ, ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿಯವರೆಗೆ ಚತುಷ್ಪಥ ರಸ್ತೆ ನಿರ್ಮಾಣ, ಕಲ್ಲಡ್ಕ ಪೇಟೆಯಲ್ಲಿ 6 ಪಥದ ಮೇಲ್ಸೇತುವೆ ಕಾಮಗಾರಿ, ಬಿಕರ್ನಕಟ್ಟೆ – ಸಾಣೂರು ನಡುವೆ ರಸ್ತೆ ಕಾಮಗಾರಿ, ಪುಂಜಾಲಕಟ್ಟೆಯಿಂದ 75 ಕಿ.ಮೀ. ಚಾರ್ಮಾಡಿ ವರೆಗೆ ದ್ವಿಪಥ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ಹಾಗೂ ರಾ.ಹೆ. 275ರಲ್ಲಿ 8 ಕಿರು ಸೇತುವೆ, ಬಿ.ಸಿ. ರೋಡ್-ಪುಂಜಾಲಕಟ್ಟೆ ಭಾಗದಲ್ಲಿ ದ್ವಿಪಥ ರಸ್ತೆ ಅಗಲೀಕರಣ ಲೋಕಾರ್ಪಣೆ ಯೋಜನೆಗಳು ಇವುಗಳಲ್ಲಿ ಸೇರಿದ್ದವು.
ಬಸ್ತಿ ಮಾಮ್ ನಿಧನ
ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಘ ಟನೆ ಗಾಗಿ ಬದುಕಿ ನುದ್ದಕ್ಕೂ ಅವಿರತ ಶ್ರಮಿಸಿದ ವಿಶ್ವ ಕೊಂಕಣಿ ಕೇಂದ್ರದ ರೂವಾರಿ ಬಸ್ತಿ ವಾಮನ ಶೆಣೈ (87) ಅವರು ಜ. 2ರಂದು ನಿಧನ ಹೊಂದಿದ್ದರು.
ವೀಕೆಂಡ್ ಕರ್ಫ್ಯೂ ಮತ್ತೆ ಜಾರಿ
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ ಅನ್ವಯ ಜ. 7ರ ರಾತ್ರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವೀಕೆಂಡ್ ಕರ್ಫ್ಯೂ ಮರು ಜಾರಿಗೊಂಡಿತ್ತು.
ಧರ್ಮಸ್ಥಳ: ಮಹಾ ಮೃತ್ಯುಂಜಯ ಹೋಮ
ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ವೃದ್ಧಿ ಮತ್ತು ದೀರ್ಘಾಯುಷ್ಯ ಪ್ರಾಪ್ತಿಗಾಗಿ ಪ್ರಾರ್ಥಿಸಿ ತಾಲೂಕಿನ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಜ. 17ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮೃತ್ಯುಂಜಯ ಹೋಮ ನಡೆದಿತ್ತು.
ನಿಧಿ ಶೋಧ ಶಂಕೆ, ತಹಶೀಲ್ದಾರ್ ಭೇಟಿ
ಬೆಳ್ತಂಗಡಿ ನಗರ ವ್ಯಾಪ್ತಿಯ ಪದವಿಪೂರ್ವ ಕಾಲೇಜಿನ ಬಳಿ ಜನ ವಸತಿರಹಿತ ಪ್ರದೇಶದಲ್ಲಿ ದೈವ ಕ್ಷೇತ್ರದ ಬಳಿ ಬೃಹತ್ ಹುತ್ತವೊಂದಿದ್ದು ಇಲ್ಲಿ ಜ. 18ರಂದು ರಾತ್ರಿ ನಿಧಿ ಇರಬಹುದು ಎಂದು ಶಂಕಿಸಿ ಸುಮಾರು 5 ಅಡಿ ಆಳದ ಹೊಂಡ ತೋಡಿರುವುದು ಕಂಡುಬಂದಿತ್ತು.
ಕೆ.ಎಲ್. ರಾಹುಲ್ ಕ್ಯಾಪ್ಟನ್
ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಮಂಗಳೂರಿನ ಕೆ.ಎಲ್.ರಾಹುಲ್ ಅವರನ್ನು ಜ. 19ರಂದು ಆಯ್ಕೆ ಮಾಡಲಾಗಿತ್ತು. ಭಾರತ- ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದಲ್ಲಿ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದರು.
ಮಂಗಳೂರು-ಕಾರವಾರ ನಡುವೆ ವಿದ್ಯುಚ್ಚಾಲಿತ ಪ್ರಯಾಣಿಕ ರೈಲು
ವಾರಕ್ಕೆ ಮೂರು ದಿನ ಓಡಾಡುವ ಯಶವಂತಪುರ- ಕಾರವಾರ ರೈಲು ಜ. 23ರಂದು ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರು ಜಂಕ್ಷನ್‌ನಿಂದ ಕಾರವಾರ ನಡುವೆ ವಿದ್ಯುತ್ ಚಾಲಿತ ಪ್ರಯಾಣಿಕರ ರೈಲಾಗಿ ಪರಿವರ್ತಿತಗೊಂಡು ಓಡಾಟ ಪ್ರಾರಂಭಿ ಸಿತ್ತು.
ರೆಮೋನಾಗೆ ರಾಷ್ಟ್ರೀಯ ಬಾಲ ಪುರಸ್ಕಾ ರ
ಮಂಗಳೂರಿನ ಭರತ ನಾಟ್ಯ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಅವರಿಗೆ ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಜ. 24ರಂದು ಪ್ರದಾನ ಮಾಡಿದ್ದರು.
ಖಾದರ್ ವಿ.ಸಭೆ ವಿಪಕ್ಷ ಉಪನಾಯಕ
ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕರಾಗಿ ಮಂಗಳೂರು ಕ್ಷೇತ್ರದ ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಅವರನ್ನು ಜ. 31ರಂದು ನೇಮಕ ಮಾಡಲಾಗಿತ್ತು. 2013ರಲ್ಲಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮತ್ತು 2018ರ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿ ವಿವಿಧ ಖಾತೆಗಳ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ಅನುಭವ ಅವರಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿನ್ನೋಟ@2022: ಈ ವರ್ಷ ಅನಾವರಣಗೊಂಡ ಟಾಪ್ 5 ಪ್ರತಿಮೆಗಳು
Rewind 2022: ಚಂದನವನದ ಚಿನ್ನದ ಬೆಳೆ, ಸ್ಯಾಂಡಲ್ ವುಡ್ ನಲ್ಲಿ ಒಂದು ಸುತ್ತು
2022ರ ನೆನಪುಗಳ ಮೆರವಣಿಗೆ; ದೇಶದ ದಿಕ್ಕು ಬದಲಿಸಿದ ಸುಪ್ರೀಂ ಕೋರ್ಟ್‌ನ ಐದು ತೀರ್ಪುಗಳು
2022ರ ಹೊರಳು ನೋಟ; ಡಾ| ಹೇಮಾವತಿ ವೀರೇಂದ್ರ ಹೆಗ್ಗಡೆಯವರಿಗೆ ಪೌರ ಸಮ್ಮಾನ
2022ರ ನೆನಪುಗಳ ಮೆರವಣಿಗೆ; ನವ ಭಾರತಕ್ಕೆ ದಶ ಯೋಜನೆಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.