![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 1, 2024, 12:49 AM IST
ಪಡುಬಿದ್ರಿ: ಮೇ 30ರ ಮಧ್ಯರಾತ್ರಿ ಹೊತ್ತಿನಲ್ಲಿ ಮದ್ಯದ ಅಮಲಿನಲ್ಲಿ ಗೆಳೆಯರು ಪರಸ್ಪರ ಹೊಡೆದಾಡಿಕೊಂಡು, ಡ್ರ್ಯಾಗರ್, ಕತ್ತಿ, ಚಾಕುಗಳಿಂದ ಹಲ್ಲೆ ನಡೆಸಿ ಪಾದೆಬೆಟ್ಟು ನಿವಾಸಿ ಸುಜಿತ್ ಹಾಗೂ ಅವರ ಅಣ್ಣ ಅಜಿತ್ ಅವರಿಗೆ ಜೀವ ಬೆದರಿಕೆ ಹಾಕಿ ಕೊಲೆಗೆ ಯತ್ನ ನಡೆಸಿರುವ ಘಟನೆ ಪಡುಬಿದ್ರಿಯ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಉದ್ಯಮಿಗಳಾಗಿರುವ ಅಜಿತ್ ಹಾಗೂ ಸುಜಿತ್ ಅವರು ತಮ್ಮ ಕಾರಿನಲ್ಲಿ ಕರಣ್ ನೊಂದಿಗೆ ಪಡುಬಿದ್ರಿ ಪೇಟೆ ಬಳಿಯ ಪ್ರಣವ್ ಅವರ ಹೊಟೇಲ್‌ಗೆ ಬಂದಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳಾದ ಸೂರಜ್, ಶರತ್ ಶೆಟ್ಟಿ ಹಾಗೂ ತನುಜ್ ಅವರು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ವಿಚಾರದಲ್ಲಿ ವಾಗ್ವಾದ ನಡೆಸಿದ್ದರು.
ಆ ಬಳಿಕ ಬೈಕಿನಲ್ಲಿ ಬಂದ ಇನ್ನೋರ್ವ ಆರೋಪಿ ಅನಿಷ್ ಕೂಡ ಆರೋಪಿಗಳೊಂದಿಗೆ ಸೇರಿಸಿಕೊಂಡಿದ್ದ. ಅವರು ಕತ್ತಿ, ಡ್ರ್ಯಾಗರ್, ಚಾಕು ಬಳಸಿ ಕೊಲೆಗೆ ಯತ್ನ ನಡೆಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.