Drone: ಪಾಕ್ ಡ್ರೋನ್‌ಗಳ ಭಾರತ ಪ್ರವೇಶಕ್ಕೆ ಸದ್ಯದಲ್ಲೇ ಬ್ರೇಕ್?
ಡ್ರೋನ್ ನಿಗ್ರಹ ವ್ಯವಸ್ಥೆ ನಿಯೋಜನೆಗೆ ನಿರ್ಧಾರ
Team Udayavani, Jan 3, 2024, 11:57 PM IST
ಹೊಸದಿಲ್ಲಿ: ಗಡಿಯಾಚೆಯಿಂದ ಉಗ್ರ ರನ್ನು ಭಾರತಕ್ಕೆ ಕಳುಹಿಸುತ್ತಿದ್ದ ಪಾಕಿ ಸ್ಥಾನ, ಈಗ ತನ್ನ ಉಗ್ರಕೃತ್ಯಗಳನ್ನು ನಡೆ ಸಲು ಬೇರೆ ಮಾರ್ಗ ಹಿಡಿದಿದೆ. ಅದನ್ನು ತಡೆಯಲು ಭಾರತವೂ ಅಷ್ಟೇ ಪ್ರಬಲ ವಾಗಿ ಸಿದ್ಧವಾಗಿದೆ. ಪ್ರಸ್ತುತ ಗಡಿಭಾಗ ಗಳಿಂದ ಡ್ರೋನ್ ಮೂಲಕ ಉದ್ದೀಪನ ದ್ರವ್ಯಗಳು, ಶಸ್ತ್ರಾಸ್ತ್ರಗಳನ್ನು ಪಾಕ್ ಕಳುಹಿ ಸುತ್ತಿದೆ. ಅದನ್ನು ತಡೆಯಲು ಕೇಂದ್ರ ಸರ್ಕಾರ, ಡ್ರೋನ್ ನಿಗ್ರಹ ವ್ಯವಸ್ಥೆಯೊಂ ದನ್ನು ದೇಶೀಯವಾಗಿಯೇ ಸಿದ್ಧಪಡಿಸಿದೆ. ಇನ್ನಾರು ತಿಂಗಳೊಳಗೆ ಗುಜರಾತ್- ಪಂಜಾಬ್‌ನಿಂದ ಹಿಡಿದು ಜಮ್ಮು ಕಾಶ್ಮೀರ ದವರೆಗೆ ಭಾರತ-ಪಾಕ್ ಗಡಿಯುದ್ದಕ್ಕೂ ಈ ವ್ಯವಸ್ಥೆ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ.
ಪ್ರಸ್ತುತ ಪಾಕಿಸ್ಥಾನದ ಡ್ರೋನ್‌ಗಳನ್ನು ಆಗಾಗ ಭಾರತೀಯ ಯೋಧರು ಹೊಡೆದು ಉರುಳಿಸುತ್ತಲೇ ಇದ್ದಾರೆ. ಕೆಲವು ಕಣ್ತಪ್ಪಿಸಿ ಶಸ್ತ್ರಾಸ್ತ್ರಗಳನ್ನು ಇಳಿಸಿ, ಹಿಂತಿರುಗುತ್ತಿವೆ. ಇದನ್ನು ತಪ್ಪಿಸುವುದು ಈ ಡ್ರೋನ್ ನಿಗ್ರಹ ವ್ಯವಸ್ಥೆಯ ಉದ್ದೇಶ. ಇದರ ಮೂಲಕ ಶತ್ರುದೇಶದ ಡ್ರೋನ್‌ಗಳ ಮೇಲೆ ನಿಗಾ ಇಟ್ಟು, ಕ್ಷಣಮಾತ್ರದಲ್ಲಿ ಹೊಡೆದುರುಳಿಸಲು ಸಾಧ್ಯವಾಗಲಿದೆ. ಸೇನೆಗೂ ಅಪರಿಚಿತ ಡ್ರೋನ್ ಚಲನೆಯ ಬಗ್ಗೆ ಮಾಹಿತಿ ರವಾನೆಯಾಗಲಿದೆ. ಭಾರತದ 3 ಕಂಪೆನಿಗಳು ಈ ವ್ಯವಸ್ಥೆಯನ್ನು ಸಿದ್ಧಪಡಿಸಿವೆ. ದೇಶದ ಆಯ್ದಭಾಗಗಳಲ್ಲಿ ಅವನ್ನು ಅಳವಡಿಸಿ, ಪ್ರಸ್ತುತ ಪರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.