ಸಾಲಕ್ಕೆ ಚೀನ ಬಾಗಿಲು ತಟ್ಟಿದ ಪಾಕ್
Team Udayavani, Aug 21, 2020, 5:45 AM IST
ಇಸ್ಲಾಮಾಬಾದ್: ಸೌದಿಯ ಕೋಪಕ್ಕೆ ತುತ್ತಾಗಿರುವ ಪಾಕ್ ಸಾಲ ಯಾಚಿಸಲು ಅಂತಿಮವಾಗಿ ಚೀನದ ಕಾಲಿಗೆ ಬೀಳಲು ಮುಂದಾಗಿದೆ. ಪಾಕ್‌ನ ವಿದೇಶಾಂಗ ಸಚಿವ, ಪಿತೂರಿ ಚತುರ ಮೆಕೂಮ್ ಷಾ ಮೆಹಮೂದ್ ಖುರೇಷಿ ಗುರುವಾರ ಈ ಸಂಬಂಧ ಬೀಜಿಂಗ್‌ಗೆ ದೌಡಾಯಿಸಿದ್ದಾರೆ.
ಖುರೇಷಿ ಚೀನದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಲಿದ್ದಾರೆ. ಸೌದಿಯಿಂದ ಪಡೆದಿ ರುವ 1 ಬಿಲಿಯನ್ ಡಾಲರ್‌ಗೂ ಅಧಿಕ ಸಾಲ ತೀರಿಸಲು ಪಾಕ್‌ಗೆ, ಚೀನ ನೆರವಾಗಲಿದೆ. ಇದಲ್ಲದೆ ಆರ್ಥಿಕ ಕಾರಿಡಾರ್ ಸಂಬಂಧಿತ ಯೋಜನೆಗಳು, ದ್ವಿಪಕ್ಷೀಯ ಸಂಬಂಧಗಳ ಕುರಿತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಯಲಿದೆ. ವರ್ಷಾಂತ್ಯಕ್ಕೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾಕಿಸ್ಥಾನಕ್ಕೆ ಭೇಟಿ ನೀಡಿ, ಕಾರಿಡಾರ್ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಲಿದ್ದಾರೆ. ಪಾಕ್ ಪ್ರಧಾನಿ ಇತ್ತೀಚೆಗಷ್ಟೇ ಸರಕಾರಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ “ಪಾಕ್‌ನ ಭವಿಷ್ಯ ಚೀನ ಜತೆ ಎನ್ನುವುದು ಸ್ಪಷ್ಟ. ಚೀನಕ್ಕೂ ಪಾಕ್ ಆವಶ್ಯಕತೆ ಇದೆ’ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಖುರೇಷಿ ಭೇಟಿ ಕುತೂಹಲ ಹುಟ್ಟಿಸಿದೆ.
ಭಾರತ- ಚೀನ 18ನೇ ಡಬ್ಲ್ಯುಎಂಸಿಸಿ ಸಭೆ
ಭಾರತ- ಚೀನ ನಡುವಿನ ಗಡಿ ಬಿಕ್ಕಟ್ಟಿನ ಕುರಿತು ಚರ್ಚಿಸಲು ಸಮಾಲೋಚನೆ ಮತ್ತು ಸಹಕಾರ ಕಾರ್ಯವಿಧಾನ ಸಭೆ (ಡಬ್ಲ್ಯುಎಂಸಿಸಿ) ಗುರುವಾರ ನಡೆಯಿತು. ಉಭಯ ರಾಷ್ಟ್ರಗಳ ಕಾರ್ಪ್ ಕಮಾಂಡರ್ ನಡುವಿನ 18ನೇ ಡಬ್ಲ್ಯುಎಂಸಿಸಿ ಸಭೆ ಇದಾಗಿದ್ದು, ಎಲ್‌ಎಸಿ ಭಾಗಗಳಿಂದ ಸೇನಾ ತೆರವು ಕಾರ್ಯಾಚರಣೆ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಕಮಾಂಡರ್‌ಗಳ ಮುಂದಿನ ಸಭೆಯಲ್ಲಿ ಡಬ್ಲ್ಯುಎಂಸಿಸಿ ಸಭೆಯ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.