Army: ಪೂಂಛ್‌ನಲ್ಲಿ ಐವರು ಯೋಧರ ಹತ್ಯೆ ಹಿಂದೆ ಪಾಕಿಸ್ಥಾನ-ಚೀನ ಜಂಟಿ ಕುತಂತ್ರ?
ಕೇಂದ್ರ ಗುಪ್ತಚರ ಸಂಸ್ಥೆಗಳ ಮಾಹಿತಿ | ಪೂಂಛ್, ರಜೌರಿಯಲ್ಲಿ ಇನ್ನೂ 30 ಉಗ್ರರು ಸಕ್ರಿಯ
Team Udayavani, Dec 23, 2023, 1:06 AM IST
ಹೊಸದಿಲ್ಲಿ: ಇದುವರೆಗೆ ಜಮ್ಮು -ಕಾಶ್ಮೀರದಲ್ಲಿ ಪಾಕಿಸ್ಥಾನ ಪ್ರೇರಿತ ಉಗ್ರರು ಕಿಡಿಗೇಡಿತನದ ಕೃತ್ಯ ಗಳನ್ನು ನಡೆಸುತ್ತಿದ್ದರು. ಇದೀಗ ಪಾಕಿಸ್ಥಾನದ ಜತೆಗೆ ಅದರ ಪರಮಾಪ್ತ ಮಿತ್ರ ಚೀನವೂ ಕೈಜೋಡಿಸಿದೆ ಎಂಬ ಮಾಹಿತಿ ಲಭವ್ಯಾಗಿದೆ. ಲಡಾಖ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ಸೇನೆ ನಿಯೋಜನೆ ಗೊಂಡಿದೆ. ಅಲ್ಲಿಂದ ಗಮನ ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿಯೇ 2 ರಾಷ್ಟ್ರಗಳು ಜತೆಗೂಡಿ ಪೂಂಛ್‌ನಲ್ಲಿ ಐವರು ಯೋಧರನ್ನು ಕೊಲ್ಲುವ ಭೀಕರ ಯೋಜನೆ ನಡೆಸಿವೆ ಎಂಬ ಅಂಶದ ಬಗ್ಗೆ ಕೇಂದ್ರ ರಕ್ಷಣ ಸಚಿವಾಲಯಕ್ಕೆ ಮಾಹಿತಿ ಲಭ್ಯವಾಗಿದೆ.
ಅದರ ಅನ್ವಯವೇ ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಳ ವಾಗುವಂತೆ ಮಾಡಿವೆ. ಈ ಮೂಲಕ ಭಾರತೀ ಯ ಸೇನೆ ಮೇಲೆ ಒತ್ತಡ ಹೇರಲು ತಂತ್ರಗಾರಿಕೆ ರೂಪಿಸಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
30 ಉಗ್ರರು ಸಕ್ರಿಯ: ಪೂಂಛ್ ಮತ್ತು ರಜೌರಿ ಸೆಕ್ಟರ್‌ನಲ್ಲಿ ಹಿಂಸಾಚಾರ ತೀವ್ರಗೊಳಿಸುವುದು, ಈ ಮೂಲಕ ಕಾಶ್ಮೀರದ ಕಡೆಗೆ ಭಾರತದ ಗಮನವನ್ನು ಸೆಳೆಯುವಂತೆ ಮಾಡುವುದು ಪಾಕಿಸ್ಥಾನ ಮತ್ತು ಚೀನದ ಜಂಟಿ ತಂತ್ರಗಾರಿಕೆಯ ಭಾಗವಾಗಿದೆ. ಭಾರತದ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು, ಪೂಂಛ್‌ನ ಅರಣ್ಯ ಪ್ರದೇಶಕ್ಕೆ 25ರಿಂದ 30 ಉಗ್ರರು ಒಳನುಸುಳಿವೆ ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.
2020ರಲ್ಲಿ ಚೀನ ಗಡಿಯ ಗಲ್ವಾನ್ ಪ್ರದೇಶದಲ್ಲಿ ಭಾರತ ಮತ್ತು ಚೀನಿ ಸೈನಿಕರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇದಾದ ನಂತರ ಲಡಾಖ್‌ನಲ್ಲಿ ಭದ್ರತಾ ಪಡೆಗಳ ನಿಯೋಜನೆಯನ್ನು ಭಾರತ ಹೆಚ್ಚಿಸಿತು. ಅಲ್ಲದೇ ಪೂಂಛ್‌ನಲ್ಲಿದ್ದ ರಾಷ್ಟ್ರೀಯ ರೈಫಲ್ಸ್‌ನ ವಿಶೇಷ ಉಗ್ರ ನಿಗ್ರಹ ಪಡೆಯನ್ನು ಲಡಾಖ್‌ನಲ್ಲಿ ನಿಯೋಜಿಸಿತು. ಇದನ್ನು ಭಾರತ ಹಿಂಪಡೆಯುವಂತೆ ಒತ್ತಡ ಹೇರಲು ಪಶ್ಚಿಮ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ತೀವ್ರಗೊಳಿಸಲು ಚೀನ ಬೆಂಬಲದೊಂದಿಗೆ ಪಾಕಿಸ್ಥಾನ ಮುಂದಾಗಿದೆ ಎಂದು ಮೂಲಗಳು ಹೇಳಿವೆ.
ಎಂ4 ರೈಫಲ್‌ಗಳ ಬಳಕೆ: ಐವರು ಯೋಧರ ಹತ್ಯೆಗೆ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ರೈಫಲ್‌ಗಳನ್ನು ಬಳಕೆ ಮಾಡಲಾಗಿದೆ. ಈ ಬಗ್ಗೆ ಜೈಶ್ ಸಂಘಟನೆಗೆ ಗುರು ತಿಸಿಕೊಂಡ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಜಾಲ ತಾಣಗಳಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡಿದೆ.
ಯೋಧರನ್ನು ಹತ್ಯೆ ಮಾಡಿದ್ದು ಜೈಶ್‌ನ ಸಹವರ್ತಿ ಸಂಘಟನೆ ಫ್ಯಾಸಿಸ್ಟ್ ಫ್ರಂಟ್
ಗುರುವಾರ ನಡೆದಿದ್ದ ಐವರು ಯೋಧರ ಹತ್ಯೆಗೆ ಉಗ್ರ ಸಂಘಟನೆ ಜೈಶ್- ಎ- ಮೊಹಮ್ಮದ್ ಸಂಘಟನೆಯ ಜತೆಗೆ ಗುರುತಿಸಿಕೊಂಡ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ಕಾರಣ. ಈ ಬಗ್ಗೆ ಆ ಸಂಘಟನೆಯೇ ಹೇಳಿಕೆ ನೀಡಿದೆ. ಇದರ ಜತೆಗೆ 2019ರಲ್ಲಿ ಜಮ್ಮು- ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಂಡ ಅನಂತರ ಪಾಕಿಸ್ಥಾನದ ಐಎಸ್‌ಐ ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಹೆಸರನ್ನು ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಎಂದು ಬದಲಿಸಿರಿಸುವ ಸಾಧ್ಯತೆಗಳಿವೆ ಎಂದು ಭದ್ರತಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಹಲವು ಉಗ್ರ ದಾಳಿಗಳ ಹೊಣೆಯನ್ನು ಈ ಸಂಘಟನೆಯೇ ಹೊತ್ತುಕೊಂಡಿದೆ.
ಸೇನೆ ಮೇಲೆ ದಾಳಿಗೆ ಕಾಶ್ಮೀರಿ ಉಗ್ರರ ಜತೆ ಪನ್ನು ಮೈತ್ರಿ
ಟೊರಂಟೊ: ಖಲಿಸ್ಥಾನ ಪ್ರೇರಿತ ಉಗ್ರ ಕೃತ್ಯಗಳಲ್ಲಿ ತೊಡಗಿರುವ ಉಗ್ರ ಗುರ ಪತ್ವಂತ್ ಸಿಂಗ್ ಪನ್ನು ಭಾರತದ ವಿರುದ್ಧ ಒಂದು ಹೆಜ್ಜೆ ಮುಂದಿಟ್ಟಿದ್ದಾನೆ. ಕಾಶ್ಮೀರದಲ್ಲಿರುವ ಉಗ್ರ ಸಂಘಟನೆ ಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾನೆ. ಅದಕ್ಕಾಗಿ “ಕಾಶ್ಮೀರ್-ಖಲಿಸ್ಥಾನ್ ರೆಫ ರೆಂಡಮ್ ಫ್ರಂಟ್’ ಎಂದು ಹೆಸರಿಟ್ಟಿದ್ದಾನೆ. “ಭಾರತ ಆಕ್ರಮಿತ ಕಾಶ್ಮೀರವು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ವಿವಾದಿತ ಪ್ರದೇಶವಾಗಿದೆ. ಇಲ್ಲಿ ಭಾರತೀಯ ಸೇನೆಯು ದಶಕಗಳಿಂದ ನರಮೇಧದಲ್ಲಿ ತೊಡಗಿದೆ’ ಎಂದು ಆತ ದೂರಿದ್ದಾನೆ. ಗುರುವಾರ ಕಾಶ್ಮೀರಿ ಹೋರಾಟಗಾರರಿಂದ ಭಾರ ತೀಯ ಸೇನೆ ಮೇಲೆ ನಡೆದ ದಾಳಿಯು, ಕಾಶ್ಮೀರಿಗರ ಮೇಲೆ ಭಾರತದ ಹಿಂಸಾ ಚಾರದ ಪರಿಣಾಮವಾಗಿದೆ’ ಎಂದು ಉಗ್ರ ಪನ್ನುನ್ ಬಾಯಿಗೆ ಬಂದಂತೆ ಹಲುಬಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.