ಉಕ್ರೇನ್‌ಗೆ ಸದ್ದಿಲ್ಲದೆ ರಾಕೆಟ್ ಪೂರೈಸುತ್ತಿದೆ ಪಾಕಿಸ್ಥಾನ!
ಜರ್ಮನ್ ಮೂಲಕ ಸೇನಾ ಸಲಕರಣೆ ರವಾನೆ
Team Udayavani, Feb 12, 2023, 7:50 AM IST
ಹೊಸದಿಲ್ಲಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ಥಾನವು ಈಗ ಯುದ್ಧಪೀಡಿತ ಉಕ್ರೇನ್‌ಗೆ ಸೇನಾ ಸಲಕರಣೆಗಳನ್ನು ಸರಬರಾಜು ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ!
ಒಂದು ಕಡೆ ರಿಯಾಯಿತಿ ಬೆಲೆಯಲ್ಲಿ ತೈಲವನ್ನು ನೀಡುವಂತೆ ರಷ್ಯಾವನ್ನು ಕೇಳಿಕೊಳ್ಳುತ್ತಿರುವ ಪಾಕಿಸ್ಥಾನ, ಮತ್ತೂಂದು ಕಡೆ ಗುಟ್ಟಾಗಿ ಉಕ್ರೇನ್‌ಗೆ ಸೇನಾ ಸಾಮಗ್ರಿ ಪೂರೈಸುತ್ತಿದೆ ಎನ್ನಲಾಗಿದೆ. ಏಕಕಾಲಕ್ಕೆ ಜರ್ಮನಿಯ ಬಂದರು ಮತ್ತು ಪೋಲೆಂಡ್ ಮಾರ್ಗದ ಮೂಲಕ ಪಾಕಿಸ್ಥಾನವು ಮಲ್ಟಿಬ್ಯಾರೆಲ್ ರಾಕೆಟ್ ಲಾಂಚರ್‌ಗಳಲ್ಲಿ ಬಳಕೆಯಾಗುವಂಥ ರಾಕೆಟ್‌ಗಳನ್ನು ಉಕ್ರೇನ್‌ಗೆ ಕಳುಹಿಸಿಕೊಡುತ್ತಿದೆ.
ಪ್ರಸಕ್ತ ತಿಂಗಳ ಆರಂಭದಲ್ಲೇ ಕರಾಚಿ ಬಂದರಿನಿಂದ 10 ಸಾವಿರಕ್ಕೂ ಅಧಿಕ ರಾಕೆಟ್‌ಗಳನ್ನು ಶಿಪ್ಪಿಂಗ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್‌ನೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳ ಮೂಲಕ ಈ ಎಲ್ಲ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ. ಕರಾಚಿ ಮೂಲದ ಶಿಪ್ಪಿಂಗ್ ಕಂಪೆನಿ ಪ್ರಾಜೆಕ್ಟ್ ಶಿಪ್ಪಿಂಗ್ ಕಳೆದ ತಿಂಗಳು ಪಾಕಿಸ್ಥಾನ್ ಆರ್ಡನೆನ್ಸ್ ಫ್ಯಾಕ್ಟರಿಯಿಂದ 146 ಕಂಟೈನರ್‌ಗಳನ್ನು ಉಕ್ರೇನ್‌ಗೆ ರವಾನಿಸಿದೆ.
ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ಪಾಕಿಸ್ಥಾನದ ಎಂಐ-17 ಹೆಲಿಕಾಪ್ಟರ್‌ಗಳನ್ನು ಮೇಲ್ದರ್ಜೆಗೇರಿಸಲು ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲದೆ, ವಿಮಾನದ ಎಂಜಿನ್‌ಗಳು ಮತ್ತು ಇಂಡಸ್ಟ್ರಿಯಲ್ ಮೆರೈನ್ ಗ್ಯಾಸ್ ಟರ್ಬೈನ್‌ಗಳನ್ನು ಉತ್ಪಾದಿಸುವಂಥ ಉಕ್ರೇನ್‌ನ ಸಂಸ್ಥೆಯೊಂದು ಪಾಕಿಸ್ಥಾನದ ಹೆಲಿಕಾಪ್ಟರ್‌ಗಳನ್ನು ಮೇಲ್ದರ್ಜೆಗೇರಿಸಲು ನೆರವಾಗುವುದಾಗಿ ವಾಗ್ಧಾನ ಮಾಡಿದೆ ಎಂದೂ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.