ಭಾರತದ ವಿರುದ್ಧ ಪಾಕಿಸ್ಥಾನ-ಚೀನ ಮಸಲತ್ತು?
Team Udayavani, Oct 2, 2021, 6:30 AM IST
ಹೊಸದಿಲ್ಲಿ: ಸದಾ ಭಾರತದ ವಿರುದ್ಧ ವಿಷ ಕಾರುವಂತಹ ಪಾಕಿಸ್ಥಾನ ಮತ್ತು ಚೀನ ಈಗ ಪರಸ್ಪರ ಕೈಜೋಡಿಸಿಕೊಂಡು ಹೊಸ ಮಸಲತ್ತು ಮಾಡುತ್ತಿವೆಯೇ?
ಗುಪ್ತಚರ ಮೂಲಗಳಿಂದ ಹೊರಬಿದ್ದಿರುವ ಆಘಾತಕಾರಿ ಮಾಹಿತಿಯೊಂದು ಇಂಥ ಸುಳಿವನ್ನು ನೀಡಿದೆ. ಚೀನವು ತನ್ನ ಗಡಿಗಳಲ್ಲಿನ ಮುಖ್ಯ ಕಚೇರಿಗಳಲ್ಲಿ ಪಾಕಿಸ್ಥಾನದ ಸೇನಾಧಿ ಕಾರಿ ಗಳನ್ನು ನೇಮಕ ಮಾಡಿರುವುದೇ ಈ ಅನುಮಾನಕ್ಕೆ ಕಾರಣ.
ಚೀನದ ವೆಸ್ಟರ್ನ್ ಥಿಯೇಟರ್ ಕಮಾಂಡ್ ಮತ್ತು ಸದರ್ನ್ ಥಿಯೇ ಟರ್ ಕಮಾಂಡ್‌ನಲ್ಲಿ ಪಾಕಿಸ್ಥಾನದ ಸೇನಾಧಿಕಾರಿಗಳನ್ನು ನಿಯೋ ಜಿಸ ಲಾಗಿದೆ ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ.
ಎರಡೂ ದೇಶಗಳ ನಡುವಿನ ಗುಪ್ತಚರ ಮಾಹಿತಿ ವಿನಿಮಯ ಒಪ್ಪಂದದಂತೆ ಈ ನಿಯೋಜನೆ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ ಇದರ ಹಿಂದೆ ಭಾರತದ ವಿರುದ್ಧ ಕತ್ತಿಮಸೆಯುವ ಸಂಚು ಇರುವ ಸಾಧ್ಯತೆಯೂ ಹೆಚ್ಚಾಗಿದೆ. ಪಾಕ್ ಮತ್ತು ಡ್ರ್ಯಾಗನ್ ರಾಷ್ಟ್ರದ ಈ ಬಾಂಧವ್ಯದ ಮೇಲೆ ಭಾರತವೂ ಕಣ್ಣಿಟ್ಟಿದ್ದು, ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಯುದ್ಧ ತರಬೇತಿ ನೀಡುವ ಆಯೋಗ
ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ)ಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ಕೆಲಸವೇ ಭಾರತ ದೊಂದಿಗಿನ ಹಾಗೂ ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದೊಂದಿಗಿನ ಗಡಿ ರಕ್ಷಣೆ. ಕಳೆದ ತಿಂಗಳಷ್ಟೇ ಚೀನವು ಈ ಕಮಾಂಡ್‌ನ ಹೊಸ ಕಮಾಂಡರ್ ಆಗಿ ಜನರಲ್ ವಾಂಗ್ ಹೈಜಿಯಾಂಗ್‌ರನ್ನು ನೇಮಕ ಮಾಡಿತ್ತು.
ಇದನ್ನೂ ಓದಿ:ರಾಜಸ್ಥಾನ ಸಿಎಂ ಗೆಹ್ಲೋಟ್ ನನ್ನ ಸ್ನೇಹಿತ; ಪ್ರಧಾನಿ ಶ್ಲಾಘನೆ
ಈಗ ಏಕಾಏಕಿ ಚೀನದ ಕೇಂದ್ರ ಸೇನಾ ಆಯೋಗದ ಜಂಟಿ ಸಿಬಂದಿ ವಿಭಾಗದಲ್ಲಿ ಪಾಕಿಸ್ಥಾನ ಸೇನೆಯ ಕರ್ನಲ್ ಹುದ್ದೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿಶೇಷವೆಂದರೆ ಯುದ್ಧ ತಂತ್ರ, ಚೀನದ ಸಶಸ್ತ್ರ ಪಡೆಗಳಿಗೆ ತರಬೇತಿ, ವ್ಯೂಹಾತ್ಮಕ ಕಾರ್ಯತಂತ್ರ ರೂಪಿಸುವ ಕೆಲಸವನ್ನು ಈ ಆಯೋಗ ಮಾಡುತ್ತದೆ.
ನಡೆದಿದೆಯೇ ಕುತಂತ್ರ?
ಈಗಾಗಲೇ ಒಂದೆಡೆ ಗಡಿ ಪ್ರದೇಶಗಳಲ್ಲಿ ಉಗ್ರರನ್ನು ಒಳನುಸುಳುವಂತೆ ಮಾಡಿ, ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ಥಾನವು ತುದಿಗಾಲಲ್ಲಿ ನಿಂತಿದೆ. ಇತ್ತೀಚೆಗಷ್ಟೇ ನುಸುಳುವಿಕೆಗೆ ಯತ್ನಿಸಿದ್ದ ಹಲವು ಉಗ್ರರನ್ನು ನಮ್ಮ ಭದ್ರತಾ ಪಡೆ ಹೊಡೆದುರುಳಿಸಿದೆ. ಇನ್ನೊಂದೆಡೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನದ ಸೇನೆಗಳು ವಾಪಸಾತಿ ಪ್ರಕ್ರಿಯೆ ನಡೆಸುತ್ತಿರುವ ನಡುವೆಯೇ ಪೂರ್ವ ಲಡಾಖ್‌ನಲ್ಲಿ ಭಾರೀ ಸಂಖ್ಯೆಯ ಚೀನೀ ಸೈನಿಕರ ನಿಯೋಜನೆ ಪ್ರಕ್ರಿಯೆ ನಡೆಯುತ್ತಲೇ ಇದೆ.
ಮತ್ತೊಂದೆಡೆ ಸೇನಾ ಸಾಮಗ್ರಿ ಖರೀದಿ ಸಂಬಂಧಿ ಪ್ರಾಜೆಕ್ಟ್ ಗಳಿಗೆಂದು ಬೀಜಿಂಗ್‌ನಲ್ಲಿರುವ ಚೀನದ ರಾಯಭಾರ ಕಚೇರಿಯಲ್ಲೂ 10 ಮಂದಿ ಹೆಚ್ಚುವರಿ ಪಾಕ್ ಸೇನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಪಾಕಿಸ್ಥಾನ ಮತ್ತು ಡ್ರ್ಯಾಗನ್ ರಾಷ್ಟ್ರವು ಭಾರತದ ವಿರುದ್ಧ ಯಾವುದೋ ಕುತಂತ್ರ ರೂಪಿಸುತ್ತಿರುವ ಶಂಕೆ ಬಲವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.