ಪ್ರವಾಹಕ್ಕೀಡಾದ ಪಾಕ್‌ನ ಅತೀ ದೊಡ್ಡ ನಗರ; ವಿದ್ಯುತ್ ಸಂಪರ್ಕ ಕಡಿತ
Team Udayavani, Aug 31, 2020, 5:18 PM IST
ಕರಾಚಿ: ಪಾಕಿಸ್ಥಾನದ ಅತಿದೊಡ್ಡ ನಗರವಾದ ಕರಾಚಿ ಪ್ರವಾಹಕ್ಕೆ ತುತ್ತಾಗಿದೆ. ನಿರಂತರ ಮಳೆಯ ಕಾರಣದಿಂದ ನಗರದ ಬೀದಿ ಮತ್ತು ಬೀದಿಗಳಲ್ಲಿ ಪ್ರವಾಹ ಉಂಟಾಗಿದೆ.
ಭೀಕರ ಮಳೆಯ ಅವಾಂತರದಿಂದ ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆದರೆ ತನ್ನ ನಗರ ಅರ್ಧ ನೀರಿನಲ್ಲಿ ಮುಳುಗಿದ್ದರೂ ಇಮ್ರಾನ್ ಸರಕಾರ ಮಾತ್ರ ಇನ್ನೂ ಕಾರ್ಯಪ್ರವೃತ್ತವಾಗಿಲ್ಲ. ಈ ಕುರಿತಂತೆ ಅವರದೇ ಪಕ್ಷದ ನಾಯಕರು ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ.
ಮನೆಗಳು ಮತ್ತು ಬೀದಿಗಳಲ್ಲಿನ ನೀರಿನ ಟ್ಯಾಂಕ್‌ಗಳು ಒಳಚರಂಡಿ ನೀರಿನಿಂದ ತುಂಬಿವೆ. ಕಳೆದ ಮೂರು-ನಾಲ್ಕು ದಿನಗಳಿಂದ, ನಾವು ನಿರಂತರವಾಗಿ ಸಹಾಯವನ್ನು ಕೇಳುತ್ತಿದ್ದೇವೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಸಿಂಧ್ ರಾಜ್ಯ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ನೀರು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಯೂಸುಫ್ ಗಾಟ್ ಮತ್ತು ಖಾರ್ದಾರ್ ಪ್ರದೇಶಗಳಲ್ಲಿ ನೀರು ಉಳಿದಿದೆ. ಏತನ್ಮಧ್ಯೆ ನಗರದ ಅನೇಕ ಪ್ರದೇಶಗಳಲ್ಲಿ ಪುರಸಭೆಯ ಸಿಬಂದಿ ಪಂಪಿಂಗ್ ಸೆಟ್ ಮೂಲಕ ನೀರನ್ನು ಹೊರತೆಗೆಯುತ್ತಿದ್ದಾರೆ. ಈ ಕುರಿತಂತೆ ಸಿಂಧ್ ಸರಕಾರದ ವಕ್ತಾರ ಮುರ್ತಾಜಾ ವಹಾಬ್ ನೀರು ಎತ್ತುತ್ತಿರುವ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಇಮ್ರಾನ್ ಖಾನ್ ಭೇಟಿ ನೀಡುವಂತೆ ಆಗ್ರಹ
ಪ್ರತಿಪಕ್ಷ ಪಕ್ಷದ ಮುಸ್ಲಿಂ ಲೀಗ್-ಕೈದ್ ಅಧ್ಯಕ್ಷ ಚೌಧರಿ ಶುಜಾತ್ ಹುಸೇನ್ ಅವರು ಪ್ರಧಾನಿ ಇಮ್ರಾನ್ ಖಾನ್ ಕರಾಚಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಹೇಳಿದ್ದಾರೆ. ಕರಾಚಿಯ ಐಷಾರಾಮಿ ಪ್ರದೇಶಗಳಲ್ಲಿ ರಕ್ಷಣಾ ವಸತಿ ಪ್ರದೇಶದಲ್ಲಿ (ಡಿಎಚ್‌ಎ) ಐದು ವಿದ್ಯುತ್ ಫೀಡರ್‌ಗಳು ಸ್ಥಗಿತಗೊಂಡಿವೆ. ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ಕರಾಚಿ ಎಲೆಕ್ಟ್ರಿಕ್, ಉಪಕೇಂದ್ರಗಳಲ್ಲಿ ನೀರು ತುಂಬಿರುವುದರಿಂದ ಫೀಡರ್‌ನೊಳಗೆ ನೀರು ಹೋಗಿದೆ. ಇದೀಗ ಐದು ಫೀಡರ್‌ಗಳನ್ನು ರಿಪೇರಿ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರಾಚಿ ನಗರವನ್ನು ಒಮ್ಮೆ ಮೇಲಿನಿಂದ ನೋಡಿದರೆ ನದಿ ಹರಿದಂತೆ ತೋರುತ್ತದೆ. ಗುಲ್ಶನ್-ಇ-ಹದೀದ್ (72 ಮಿಲಿ ಮೀಟರ್) ನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ನಜಿಮಾಬಾದ್ 51.6 ಮಿ.ಮೀ ಮತ್ತು ಉತ್ತರ ಕರಾಚಿಯಲ್ಲಿ 37 ಮಿ.ಮೀ ಮಳೆಯಾಗಿದೆ. ಸುರಜನಿ ಮತ್ತು ಒರಂಗಿ ಪಟ್ಟಣಗಳು ಪ್ರವಾಹಕ್ಕೆ ತುತ್ತಾಗಿರುವುದರಿಂದ ನೂರಾರು ಜನರು ಮನೆಗಳನ್ನು ತೊರೆದಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಲ್ಯಾಂಡಿ ಮತ್ತು ಫೆಡರಲ್ ಬಿ ಪ್ರದೇಶದ ರಸ್ತೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ನೀರಿನಿಂದ ಆವೃತವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.