![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 25, 2021, 4:51 PM IST
ಶಿರಸಿ: ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಪಂಡಿತ್ ದೀನ ದಯಾಳ ಉಪಾಧ್ಯಾಯರ ಭವನದ ಲೋಕಾರ್ಪಣೆ ನಗರದಲ್ಲಿ ಶನಿವಾರ ನಡೆಯಿತು. ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗೋ ಪೂಜೆ ನಡೆಸಿ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಸಿದರು.
ಸ್ಪೀಕರ್ ಕಾಗೇರಿ ಮಾತನಾಡಿ, ಭಾರತೀಯ ಸಂಸ್ಕ್ರತಿ ಗೆ ಅನುರೂಪವಾಗಿ ರಾಜಕೀಯ ಶಕ್ತಿ ಕೊಟ್ಟವರು ದೀನದಾಯಳರು. ಏಕಾತ್ಮ ಮಾನವತಾವಾದ ಬೆಳಸಿಕೊಟ್ಟವರು. ರಾಷ್ಟ್ರದ ಹಿತ ಬಯಸಿದ ದೀನ ದಯಾಳರ ಅಪೇಕ್ಷೆ ಈಡೇರಿಸುವ ಭವನ ಇದಾಗಬೇಕು. ರಚನಾತ್ಮಕ ಕೆಲಸಕ್ಕೆ ಇಲ್ಲಿನ ಚಟುವಟಿಕೆಗಳು ಕಾರಣೀಕತೃರಾಗಬೇಕು ಎಂದರು.
ನಂಬಿಕೆ ಹಾಗೂ ಬದ್ದತೆ ಇದ್ದರೆ ಕಾರ್ಯ ಸಾಧನೆ ಸಾಧ್ಯ. ಅದಕ್ಕೆ ಈ ಭವನ ಉದಾಹರಣೆ ಎಂದು ಹೇಳಿದ ಅವರು ದೀನದಯಾಳರ ವಿಚಾರಗಳಿಗೆ ಯುವ ಶಕ್ತಿ ಎಣ್ಣೆಯಾಗಿ ದೀಪವಾಗಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೋಡಿಸುವ ಕಲ್ಪನೆ ಕೊಟ್ಟವರು. ದುರ್ಬಲ ಸಮಾಜವನ್ನು ಸೌಲಭ್ಯ ತಲುಪಿಸುವ ಅಂತ್ಯೋದಯದ ಕಲ್ಪನೆ ಕೊಟ್ಟವರು ಅವರು. ಅವರ ಹೆಸರಿನ ಭವನ ನಿರ್ಲಕ್ಷಿತ ಸಮಾಜಕ್ಕೆ ನೆರವಾಗುವಂತಾಗಬೇಕು. ದುರ್ಬಲ ಸಮಾಜದ ಮೇಲೆ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುತ್ತಾರೆ. ಇದನ್ನೂ ಎದುರಿಸುವ ಶಕ್ತಿ, ಒಕ್ಕಟ್ಟು ಬೇಕು ಎಂದು ಆತಂಕಿಸಿದರು.
ಇದನ್ನೂ ಓದಿ:ನಾಡಿನ ನೆಲ-ಜಲ ರಕ್ಷಣೆಗೆ ಸರಕಾರ ಬದ್ಧ; ಬಂದ್ ಆಚರಣೆ ಬೇಡ: ಸಚಿವ ಅಶ್ವತ್ಥನಾರಾಯಣ ಮನವಿ
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಸಮಾಜದ ಕೊಟ್ಟ ಕೊನೆಯ ವ್ಯಕ್ತಿಗೂ ನಾವು ನೆರವಾಗಲು ನಾವು ಮುಂದಾಗಬೇಕು ಎಂದರು.
ಪ್ರಮುಖರಾದ ವಿ.ಆರ್.ಹೆಗಡೆ, ಎನ್.ಎಸ್.ಹೆಗಡೆ, ಎಸ್.ಎನ್. ಭಟ್ಟ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಮಾಜಿ ಶಾಸಕ ಸುನೀಲ್ ಹೆಗಡೆ ಇತರರು ಇದ್ದರು. ಶ್ರೀರಾಮ ನಾಯ್ಕ ಸ್ವಾಗತಿಸಿದರು. ಸದಾನಂದ ಭಟ್ಟ ನಿರ್ವಹಿಸಿದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.