ಪೇಪರ್ ಬ್ಯಾಗ್: ಒಂದು ಬಿಝಿನೆಸ್ ಐಡಿಯಾ
Team Udayavani, Jun 1, 2020, 4:27 AM IST
ಪರಿಸರಸ್ನೇಹಿ ಉತ್ಪನ್ನಗಳ ಕುರಿತು ಜನಸಾಮಾನ್ಯರಲ್ಲಿ ಕಾಳಜಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಪೇಪರ್ ಬ್ಯಾಗ್ ವ್ಯಾಪಾರ ದಿಂದಲೂ ಲಾಭ ಪಡೆಯಲು ಸಾಧ್ಯವಿದೆ. ಪ್ಲಾಸ್ಟಿಕ್ ಕವರ್‌ಗಳನ್ನು ಬಳಸದಿರುವಂತೆ ಹಲವೆಡೆ ನಗರ ಪಾಲಿಕೆಯೇ ಸೂಚನೆ ನೀಡಿರುವುದರಿಂದ, ಪೇಪರ್ ಬ್ಯಾಗ್ ಬಳಕೆಯನ್ನು ಜನ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾರುಕಟ್ಟೆಯ ಬಗ್ಗೆ ಹೆಚ್ಚು ಚಿಂತಿಸದೆ, ಗುಣಮಟ್ಟದ ಉತ್ಪನ್ನ ತಯಾರಿಕೆಗೆ ಮಾತ್ರ ಗಮನ ಹರಿಸಬೇಕು. ತಯಾರಿಸುವ ಉತ್ಪನ್ನ ವಿಭಿನ್ನವಾಗಿರುವಂತೆ ನೋಡಿಕೊಂಡರೆ ಮಾರ್ಕೆಟಿಂಗ್ ಮಾಡುವುದು ಸುಲಭ. ಇತರೆ ಪೇಪರ್ ಬ್ಯಾಗುಗಳಿಗಿಂತ ವಿನ್ಯಾಸದಲ್ಲೋ, ಬಳಸುವ ತಂತ್ರದಲ್ಲೋ ಹೊಸತನವನ್ನು ನೀಡಿದರೆ, ಎಲ್ಲರ ಗಮನ ಸೆಳೆಯಬಹುದು.
ಈ ದಿನಗಳಲ್ಲಿ ಪೇಪರ್ ಬ್ಯಾಗುಗಳನ್ನು ತಯಾರಿಸಲು ನವನವೀನ ತಂತ್ರಗಳು ಚಾಲ್ತಿಯಲ್ಲಿವೆ. ಭತ್ತದ ಜೊಳ್ಳನ್ನು ಬಳಸಿಯೂ ಪೇಪರ್ ಉತ್ಪನ್ನಗಳನ್ನು ತಯಾರಿಸಲು ಮಾರ್ಗಗಳಿವೆ. ಪೇಪರ್ ಬ್ಯಾಗ್ ತಯಾರಿಕಾ ಘಟಕ ಸ್ಥಾಪಿಸುವುದರಿಂದ, ಪೇಪರ್ ಕಪ್, ಪೇಪರ್ ಎನ್ವೆಲಪ್, ಬರೆಯುವ ಪೇಪರ್ ಇತ್ಯಾದಿ ಉತ್ಪನ್ನಗಳನ್ನೂ ತಯಾರಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ: tinyurl.com/ycjxhlcf
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.