Paryaya:ಕಾಪು ಕ್ಷೇತ್ರದಲ್ಲಿವೆ 4 ಮೂಲಮಠಗಳು:ಪುತ್ತಿಗೆ ಮಠದ ಯತಿಗಳಿಬ್ಬರೂ ಕಾಪು ತಾಲೂಕಿನವರು

Team Udayavani, Jan 17, 2024, 1:35 PM IST

Paryaya:ಕಾಪು ಕ್ಷೇತ್ರದಲ್ಲಿವೆ 4 ಮೂಲಮಠಗಳು:ಪುತ್ತಿಗೆ ಮಠದ ಯತಿಗಳಿಬ್ಬರೂ ಕಾಪು ತಾಲೂಕಿನವರು

ಕಾಪು: ಉಡುಪಿ ಶ್ರೀ ಕೃಷ್ಣ ಮಠಕ್ಕೂ ಕಾಪು ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಅಷ್ಟಮಠಗಳಲ್ಲಿ ನಾಲ್ಕು ಮಠಗಳಾದ ಪುತ್ತಿಗೆ, ಅದಮಾರು, ಪಲಿಮಾರು, ಶಿರೂರು ಮೂಲಮಠಗಳು ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು ಸರ್ವಜ್ಞ ಪೀಠಾರೋಹಣವನ್ನೇರುವ ಮುನ್ನ ತೀರ್ಥಸ್ನಾನಗೈಯ್ಯುವ ದಂಡತೀರ್ಥ ಕೆರೆಯೂ ಕಾಪುವಿನಲ್ಲಿದೆ.

ಪರ್ಯಾಯ ಪೀಠಾರೋಹಣಗೈಯ್ಯಲಿರುವ ಪುತ್ತಿಗೆ ಮಠದ ಹಿರಿಯ ಮತ್ತು ಕಿರಿಯ ಶ್ರೀಗಳಿಬ್ಬರೂ ಕಾಪು ಕ್ಷೇತ್ರದವರೇ ಆಗಿದ್ದಾರೆ. ಹಿರಿಯ ಯತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪೂರ್ವಾಶ್ರಮದಲ್ಲಿ ಮಾಣಿಯೂರಿನವರಾಗಿದ್ದರೆ, ಕಿರಿಯ
ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮೂಲತಃ ಅಡ್ವೆಯವರು.

ವಿಶೇಷವೆಂಬಂತೆ ಈ ಬಾರಿ ಪುತ್ತಿಗೆ ಶ್ರೀಗಳ ಆಪ್ತ ಶಿಷ್ಯರು ಕಾಪುವಿನಿಂದ ಉಡುಪಿ ಜೋಡುಕಟ್ಟೆಯವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಿಶೇಷ ವಿದ್ಯುತ್‌ ದೀಪಾಲಂಕಾರವನ್ನು ಜೋಡಿಸಿದ್ದು ಪರ್ಯಾಯದ ದಿನ ಹೆದ್ದಾರಿಯುದ್ದಕ್ಕೂ ವಿದ್ಯುತ್‌ ದೀಪಗಳು ಉರಿದು ಬೆಳಕು ನೀಡಲಿವೆ.

ದಂಡತೀರ್ಥದಲ್ಲಿ ಸ್ನಾನ
ಪರ್ಯಾಯ ಮಠಾಧೀಶರು ಜ.17ರ ಮಧ್ಯರಾತ್ರಿ ಬಳಿಕ ದಂಡತೀರ್ಥ ಮಠಕ್ಕೆ ಆಗಮಿಸಿ ದಂಡತೀರ್ಥ ಮಠ ಮತ್ತು ಗ್ರಾಮಸ್ಥರ ವತಿಯಿಂದ ಪಾದಪೂಜೆ ಪಡೆದು, ಮಧ್ವಾಚಾರ್ಯರ ದಂಡದಿಂದ ಉದಿಸಿದ ದಂಡತೀರ್ಥ ಕೆರೆಯಲ್ಲಿ ತೀರ್ಥಸ್ನಾನಗೈಯ್ಯುತ್ತಾರೆ. ತೀರ್ಥಸ್ನಾನ ಪೂರೈಸಿದ ಬಳಿಕ ತಮ್ಮ ಕಮಂಡಲದಲ್ಲಿ ದಂಡತೀರ್ಥ ಕೆರೆಯ ತೀರ್ಥ ಕುಂಡದಿಂದ ತೀರ್ಥವನ್ನು ತುಂಬಿಸಿಕೊಂಡು ತಮ್ಮ ಪಟ್ಟದ ದೇವರ ಸಹಿತವಾಗಿ ಮಠದ ಶ್ರೀ ಕುಂಜಿ ಗೋಪಾಲಕೃಷ್ಣ ದೇವರು, ಶ್ರೀ ರಾಮ-ಲಕ್ಷ್ಮಣ-ಸೀತೆ, ರುಕ್ಮಿಣಿ, ಸತ್ಯಭಾಮೆ ಸಹಿತ ಶ್ರೀ ಕೃಷ್ಣ ದೇವರಿಗೆ ಅರ್ಚನೆ ಸಹಿತ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಪರ್ಯಾಯದ ಶೋಭಾಯಾತ್ರೆಗಾಗಿ ಉಡುಪಿ ಜೋಡುಕಟ್ಟೆಗೆ ನಿರ್ಗಮಿಸುತ್ತಾರೆ.

ದಂಡದಿಂದ ಉದಿಸಿದ ದಂಡತೀರ್ಥ
ಆಚಾರ್ಯ ಮಧ್ವರು ಉಳಿಯಾರಗೋಳಿ ತೋಟಂತಿಲ್ಲಾಯ ಮನೆತನದ ಗುರುಗಳಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಶಿಕ್ಷಣ ಪಡೆದ ಬಳಿಕ ಲೋಕಸಂಚಾರ ನಡೆಸಿದ ಮಧ್ವಾಚಾರ್ಯರು ಮತ್ತೆ ಗುರುಕುಲಕ್ಕೆ ಆಗಮಿಸಿದ್ದು ಈ ವೇಳೆ ಗುರು ಪತ್ನಿಯ ನಿವೇದನೆಯಂತೆ ಗುರುದಕ್ಷಿಣೆ ರೂಪದಲ್ಲಿ ಉಳಿಯಾರಗೋಳಿ ಗ್ರಾಮದ ಜನತೆಯನ್ನು ಕಾಡುತ್ತಿದ್ದ ನೀರಿನ ಸಂಕಷ್ಟದ ಪರಿಹಾರಕ್ಕಾಗಿ ತಮ್ಮ ದಂಡ (ಬಿದಿರಿನ ಕೋಲು)ದಿಂದ ಭೂಮಿಯನ್ನು ಗೀರಿ ದಂಡತೀರ್ಥ ಕೆರೆಯನ್ನು ಸೃಷ್ಟಿಸಿದರೆಂಬ
ಪ್ರತೀತಿಯಿದೆ. ತೋಟಂತಿಲ್ಲಾಯ ಮನೆತನದವರಿಗೆ ಗುರುದಕ್ಷಿಣೆ ರೂಪದಲ್ಲಿ ಕುಂಜಿ ಗೋಪಾಲಕೃಷ್ಣ ದೇವರ ಮೂರ್ತಿಯನ್ನು ನೀಡಿದ್ದರು. ಮಧ್ವಾಚಾರ್ಯರು ತನ್ನ ಕೈಯ್ಯಲ್ಲಿದ್ದ ದಂಡದಿಂದ ಸೃಷ್ಟಿಸಿದ ಕೆರೆ ದಂಡತೀರ್ಥ ಕೆರೆಯಾಗಿ, ಈ ಗ್ರಾಮವು ಬಳಿಕ ದಂಡತೀರ್ಥ ಎಂಬ ಹೆಸರು ಪಡೆಯಿತು. ಈ ಕೆರೆಯಲ್ಲಿ ವರ್ಷಪೂರ್ತಿ ಹೇರಳವಾಗಿ ನೀರು ತುಂಬಿಕೊಂಡಿರುತ್ತದೆ.

ಟಾಪ್ ನ್ಯೂಸ್

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಮಧ್ವವಿಜಯ ಪಾಠದ ಮಂಗಲೋತ್ಸವ

Udupi ಮಧ್ವವಿಜಯ ಪಾಠದ ಮಂಗಲೋತ್ಸವ

Udupi Paryaya: ಪಶ್ಚಿಮಕ್ಕೆ ಪೂರ್ವದ ಕೃಷ್ಣ ಸಂದೇಶ- ಡಾ| ಹೆಗ್ಗಡೆ

Udupi Paryaya: ಪಶ್ಚಿಮಕ್ಕೆ ಪೂರ್ವದ ಕೃಷ್ಣ ಸಂದೇಶ- ಡಾ| ಹೆಗ್ಗಡೆ

Udupi: ಪುತ್ತಿಗೆ ಪರ್ಯಾಯಕ್ಕೆ “ರಾಜ ದರ್ಬಾರ್‌” ಮೆರುಗು

Udupi: ಪುತ್ತಿಗೆ ಪರ್ಯಾಯಕ್ಕೆ “ರಾಜ ದರ್ಬಾರ್‌” ಮೆರುಗು

Udupi Paryaya: ಹಿಂದೂ ಧಾರ್ಮಿಕ ಆಚರಣೆಗೆ ವಿದೇಶಿಗರ ಮೆಚ್ಚುಗೆ

Udupi Paryaya: ಹಿಂದೂ ಧಾರ್ಮಿಕ ಆಚರಣೆಗೆ ವಿದೇಶಿಗರ ಮೆಚ್ಚುಗೆ

puthige ud

ಜಗತ್ತಿನ ಎಲ್ಲ ಜನಾಂಗದ ಉನ್ನತಿಗೆ ಭಗವದ್ಗೀತೆಯಲ್ಲಿದೆ ಸಂದೇಶ: ಪುತ್ತಿಗೆ ಶ್ರೀ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.