ಮೈಸೂರು ದಿನಚರಿಯಲ್ಲಿ ಪಾವನಾ

ಗೊಂಬೆ ಹುಡುಗಿಯ ಸಾಲು ಸಾಲು ಸಿನ್ಮಾ

Team Udayavani, Jun 14, 2020, 4:18 AM IST

mysore-paavana

“ಬೊಂಬೆಗಳ ಲವ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ಪಾವನಾ, ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ. ಇದುವರೆಗೆ 15 ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಡಿದ ಚಿತ್ರಗಳು ದೊಡ್ಡ ಯಶಸ್ಸು ಕೊಡದಿದ್ದರೂ, ಗುರುತಿಸಿಕೊಳ್ಳುವಂತಹ ಪಾತ್ರಗಳನ್ನು ಮಾಡಿರುವ ತೃಪ್ತಿ ಪಾವನಾ ಅವರದು. ಸದ್ಯಕ್ಕೆ ಪಾವನಾ ಕೈಯಲ್ಲಿ ಮೂರು ಮತ್ತೆರೆಡು ಚಿತ್ರಗಳಿವೆ. ಹೊಸ ಕೆಥೆಗಳನ್ನೂ ಇದೀಗ ಕೇಳುವಂತೆ ಫೋನ್‌ ಕಾಲ್‌ಗ‌ಳು ಬರುತ್ತಿವೆ. ಸದ್ಯ ಲಾಕ್‌ಡೌನ್‌ ಸಡಿಲಗೊಂಡಿದೆ. ಇನ್ನು ಮೇಲೆ ಕಥೆ ಕೇಳುವ ಉತ್ಸಾಹದಲ್ಲೂ ಇದ್ದಾರೆ.

ಅಷ್ಟೇ ಅಲ್ಲ, ಅವರ ಅಭಿನಯದ “ರುದ್ರಿ’,”ಮೈಸೂರ್‌ ಡೈರೀಸ್‌’ ಮತ್ತು “ಕಲಿವೀರ’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇನ್ನೇನು ಸೆನ್ಸಾರ್‌ ಆಗಿ, ಪ್ರೇಕ್ಷಕರ ಮುಂದೆ ಬರಬೇಕಷ್ಟೇ. ಹಾಗೊಂದು ವೇಳೆ ಚಿತ್ರಮಂದಿರಗಳು ಆರಂಭಗೊಂಡರೆ, ನಿರ್ಮಾಪಕರು ಪರಿಸ್ಥಿತಿ ಅರಿತು ಸಿನಿಮಾ ಬಿಡುಗಡೆ ಮಾಡಬಹುದು. ಸದ್ಯಕ್ಕೆ ಏನೆಂಬುದು ಗೊತ್ತಿಲ್ಲ. ಚಿತ್ರೀಕರಣಕ್ಕಿನ್ನೂ ಅನುಮತಿ ಕೊಟ್ಟಿಲ್ಲವಾದ್ದರಿಂದ ಯಾವುದಕ್ಕೂ ಸ್ಪಷ್ಟನೆ ಇಲ್ಲ ಎಂಬುದು ಪಾವನಾ ಅವರ ಮಾತು. ಇನ್ನು, ಪಾವನಾ ಅಭಿನಯದ “ತೂತು ಮಡಿಕೆ’ ಎಂಬ ವಿಭಿನ್ನ ಚಿತ್ರ ಕೂಡ ರಿಲೀಸ್‌ಗೆ ರೆಡಿಯಾಗುತ್ತಿದೆ.

“ಮೆಹಬೂಬಾ’ ಸಿನಿಮಾ ಇನ್ನೇನು ಚಿತ್ರೀಕರಣ ಶುರುಗೊಂಡರೆ, ಒಂದಷ್ಟು ಶೂಟಿಂಗ್‌ ಆಗಬೇಕಿದೆ. ಈಗಾಗಲೇ ಒಳಾಂಗಣ ಚಿತ್ರೀಕರಣ ಆಗಿದ್ದು, ಮೈಸೂರಲ್ಲಿ ಹೊರಾಂಗಣ ಚಿತ್ರೀಕರಣ ಆಗಬೇಕಿದೆ ಎಂದು ವಿವರ ಕೊಡುತ್ತಾರೆ ಪಾವನಾ. ಎಲ್ಲರಂತೆಯೂ ಪಾವನಾ ಅವರಿಗೂ ಒಂದಷ್ಟು ಹೊಸ ನಿರೀಕ್ಷೆಗಳಿವೆ. ಈಗ “ಮೈಸೂರು ಡೈರೀಸ್‌’, “ರುದ್ರಿ’, “ಪ್ರಭುತ್ವ’, “ತೂತು ಮಡಿಕೆ’ ಹೀಗೆ ಕೆಲವು ಚಿತ್ರಗಳ ಮೇಲೆ ಪಾವನಾ ಅವರಿಗೆ ಹೆಚ್ಚು ನಿರೀಕ್ಷೆ ಇದೆ.

ಸದ್ಯ ಕನ್ನಡದ ಭರವಸೆಯ ನಾಯಕ ನಟಿಯರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ಪಾವನಾಗೆ ಈಗ ಕೈಯಲ್ಲಿರುವ ಚಿತ್ರಗಳ ಹೊಸಬಗೆಯ ಪಾತ್ರಗಳು ಅವರ ಸಿನಿಬದುಕಿನಲ್ಲಿ ಹೊಸದೊಂದು ಮೈಲೇಜ್‌ ತಂದುಕೊಡುತ್ತದೆ ಎಂಬುದು ಅವರಿಗಿರುವ ಬಲವಾದ ನಂಬಿಕೆ. ಅದೆಲ್ಲಾ ಸರಿ, ಪಾವನಾ ಅವರೀಗ ಹೊಸದೊಂದು ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಮೋಷನ್‌ ಪೋಸ್ಟರ್‌ ನೋಡಿದರೆ ಅದೊಂದು ವಿಭಿನ್ನ ಪ್ರಯೋಗದ ಚಿತ್ರ ಅನ್ನೋದು ಗೊತ್ತಾಗುತ್ತದೆ.

ಆ ಸಿನಿಮಾ ಹೆಸರು “ರುದ್ರಿ’. ಹೌದು, ಈ ಚಿತ್ರದ ಮೇಲೂ ಪಾವನಾ ಅವರಿಗೆ ಇನ್ನಿಲ್ಲದ ವಿಶ್ವಾಸವಿದೆ. ಕಾರಣ, ಆ ಚಿತ್ರದ ಕಥೆ ಹಾಗು ಪಾತ್ರ. ಅಂದಹಾಗೆ, “ರುದ್ರಿ’ ಒಂದು ಮಹಿಳಾ ಪ್ರಧಾನವಾಗಿರುವ ಚಿತ್ರ. ಆದರ ಬಗ್ಗೆ ಹೇಳುವ ಪಾವನಾ, “ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಹೊರಬಂದಿದೆ. ಪುನೀತ್‌ರಾಜಕುಮಾರ್‌ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದು ವಿಶೇಷ. ಬಡಿಗೇರ್‌ ದೇವೇಂದ್ರ ನಿರ್ದೇಶಿಸಿದ್ದಾರೆ. “ರುದ್ರಿ’ ಚಿತ್ರದ ವಿಶೇಷವೆಂದರೆ, ಬಹುತೇಕ ಉತ್ತರ ಕರ್ನಾಟಕ ಭಾಗದ ಹಿನ್ನೆಲೆಯಲ್ಲೇ ಸಾಗಲಿದೆ. ಭಾಷೆ ಕೂಡ ಉತ್ತರ ಕರ್ನಾಟಕದಲ್ಲೇ ಇರಲಿದೆ.

ಒಂದು ಹೆಣ್ಣಿನ ಸುತ್ತ ನಡೆಯುವ ಕಥೆ ಇದಾಗಿದ್ದು, ಒಬ್ಬ ಹುಡುಗಿಯ ಆಸೆ, ಕನಸು, ನೋವು, ನಲಿವುಗಳ ಸುತ್ತ ಚಿತ್ರ ಸಾಗಲಿದೆ. ಹಳ್ಳಿಯ ಹೆಣ್ಣುಮಕ್ಕಳು ಹೇಗೆ ಸಣ್ಣ ಸಣ್ಣ ಅಂಶಗಳಿಗೆ ಖುಷಿಪಡುತ್ತಾರೆ. ತಮಗೆ ಎದುರಾಗುವ ಸಮಸ್ಯೆಗಳಿಂದ ಹೇಗೆ ತೊಂದರೆಗೊಳಪಡುತ್ತಾರೆ. ಆ ಬಳಿಕ ಹೇಗೆ ಅದರಿಂದ ಹೊರಬರುತ್ತಾರೆ ಎಂಬ ಅಂಶಗಳು “ರುದ್ರಿ’ ಚಿತ್ರದ ವಿಶೇಷ. ಅದೇನೆ ಇರಲಿ, ಲಾಕ್‌ಡೌನ್‌ನಿಂದಾಗಿ ತಮ್ಮ ಊರಲ್ಲೇ ಇರುವ ಪಾವನಾ, ಇಷ್ಟರಲ್ಲೇ ಬೆಂಗಳೂರಿಗೆ ಬರುವ ಇಂಗಿತ ವ್ಯಕ್ತಪಡಿಸುತ್ತಾರೆ. ಒಂದಷ್ಟು ಕಥೆ ಕೇಳುವುದರ ಜೊತೆ, ನಿಂತ ಚಿತ್ರಗಳ ಪಾತ್ರದ ತಯಾರಿ ಮಾಡಿಕೊಳ್ಳುವ ಬಗ್ಗೆಯೂ ಮಾತಾಡುತ್ತಾರೆ.

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ranaksha

Ranaksha: ಫ್ಯಾಮಿಲಿ ಡ್ರಾಮಾದಲ್ಲಿ ಸೀರುಂಡೆ ರಘು

Sarvasva Kannada video song

Sarvasva: ಹಾಡಲ್ಲಿ ʼಸರ್ವಸ್ವʼ ಕನಸು; ನವತಂಡದ ಪ್ರಯತ್ನ

Kiccha Sudeep: ʼಸೈಮಾʼ ಕಾರ್ಯಕ್ರಮದಲ್ಲಿ ನಿರೂಪಕನಿಗೆ ʼಕನ್ನಡʼ ಪಾಠ ಮಾಡಿದ ಕಿಚ್ಚ

Kiccha Sudeep: ʼಸೈಮಾʼ ಕಾರ್ಯಕ್ರಮದಲ್ಲಿ ನಿರೂಪಕನಿಗೆ ʼಕನ್ನಡʼ ಪಾಠ ಮಾಡಿದ ಕಿಚ್ಚ

Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ

Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ

Reeshma Nanaiah: ರೀಷ್ಮಾ ಕಣ್ಣಲ್ಲಿ ಎರಡು ಕನಸು: ಯುಐ,ಕೆಡಿ ಅಡ್ಡದಲ್ಲಿ ಗ್ಲ್ಯಾಮರಸ್ ಬೆಡಗಿ

Reeshma Nanaiah: ರೀಷ್ಮಾ ಕಣ್ಣಲ್ಲಿ ಎರಡು ಕನಸು: ಯುಐ,ಕೆಡಿ ಅಡ್ಡದಲ್ಲಿ ಗ್ಲ್ಯಾಮರಸ್ ಬೆಡಗಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.