ಆರ್‌ಟಿಒ, ಕಮಿಷನರ್ ಕಚೇರಿ ಮುಂಭಾಗ ಪಾದಚಾರಿಗಳ ಪರದಾಟ
Team Udayavani, Feb 22, 2022, 11:40 AM IST
ಸ್ಟೇಟ್‌ಬ್ಯಾಂಕ್ : ವಾಹನಗಳ ಅತಿಯಾದ ವೇಗ, ಓವರ್‌ಟೇಕ್ ಭರಾಟೆ ನಡುವೆ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಿದರೆ ಅದೊಂದು ಸಾಹಸ! ನಗರದ ಕೇಂದ್ರಭಾಗವಾಗಿರುವ ಆರ್‌ಟಿಒ ಕಚೇರಿ ಮತ್ತು ಪೊಲೀಸ್ ಆಯುಕ್ತರ ಕಚೇರಿಯ ಮುಂಭಾಗದಲ್ಲೇ ಇಂತಹ ಅವ್ಯವಸ್ಥೆ ಇದೆ. ದಿನನಿತ್ಯ ನೂರಾರು ಮಂದಿ ಪಾದಚಾರಿಗಳು ಪ್ರಾಣಭಯದಲ್ಲೇ ನಡೆದಾಡುವಂತಾಗಿದೆ.
4 ಲೇನ್‌ಗಳೂ ಒಂದೇ ದಿಕ್ಕಿನತ್ತ
ಕ್ಲಾಕ್‌ಟವರ್‌ನಿಂದ ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟನ್ ಸರ್ಕಲ್‌ವರೆಗೂ ಡಿವೈಡರ್‌ಗಳನ್ನು ತೆರವುಗೊಳಿಸಲಾಗಿದೆ. ಹಾಗಾಗಿ ಅಗಲವಾದ ಒಂದೇ ರಸ್ತೆಯಾಗಿ ರೂಪು ಗೊಂಡಿದೆ. ಇಲ್ಲಿ ಸಂಪೂರ್ಣ ಏಕಮುಖ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ. ಇದರಿಂದಾಗಿ ಒಂದೇ ಅಗಲವಾದ ರಸ್ತೆಯಲ್ಲಿ ನಾಲ್ಕು ಲೇನ್‌ಗಳಲ್ಲಿ (ಸಾಲು) ವಾಹನಗಳು ಒಂದೇ ದಿಕ್ಕಿನತ್ತ ಮುನ್ನುಗ್ಗುತ್ತಿವೆ.
ಸ್ಪೀಡ್‌ಬ್ರೇಕರ್ ಇಲ್ಲ
ಕ್ಲಾಕ್‌ಟವರ್‌ನಿಂದ ಹ್ಯಾಮಿಲ್ಟನ್ ಸರ್ಕಲ್‌ವರೆಗೂ ಒಂದೇ ಒಂದು ಸ್ಪೀಡ್‌ಬ್ರೇಕರ್(ಹಂಪ್ಸ್) ಇಲ್ಲ. ಈ ಹಿಂದೆ ಇದ್ದ ಹಂಪ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಹಾಗಾಗಿ ವಾಹನಗಳು ಕ್ಲಾಕ್‌ಟವರ್‌ನಿಂದ ಎ.ಬಿ.ಶೆಟ್ಟಿ ಸರ್ಕಲ್, ಹ್ಯಾಮಿಲ್ಟನ್ ಸರ್ಕಲ್‌ವರೆಗೂ ಒಂದೇ ವೇಗದಲ್ಲಿ ಸಂಚರಿಸುತ್ತಿವೆ. ಇದರ ನಡುವೆ ಹಿರಿಯರು, ಮಕ್ಕಳು, ಮಹಿಳೆಯರು ಮಾತ್ರವಲ್ಲದೆ ಯುವಕರು ಕೂಡ ರಸ್ತೆ ದಾಟುವುದು ಭಾರೀ ಸವಾಲಾಗಿದೆ. ಸಂಪೂರ್ಣವಾಗಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ, ಸ್ಪೀಡ್ ಬ್ರೇಕರ್‌ಗಳನ್ನು ತೆರವುಗೊಳಿಸಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಈ ರಸ್ತೆ ಅನುಕೂಲವಾಗಿದೆಯಾದರೂ ಪಾದಚಾರಿ ಗಳಿಗೆ ಭಾರೀ ಅಪಾಯಕಾರಿಯಾಗಿ ಪರಿಣಮಿಸಿದೆ.
ಓವರ್‌ಟೇಕ್ ಭರಾಟೆ
ನಗರದಲ್ಲಿ ಅತ್ಯಂತ ಹೆಚ್ಚು ಎಂಬಂತೆ ಈ ರಸ್ತೆಯಲ್ಲಿ ಓವರ್‌ಟೇಕ್ ನಡೆಯುತ್ತಿದೆ. ರಸ್ತೆ ದಾಟುತ್ತಿರುವವರನ್ನು ಕಂಡು ಯಾವು ದಾದರೂ ವಾಹನದ ಚಾಲಕ ವೇಗ ತಗ್ಗಿಸಿ ದರೆ ಆ ಕ್ಷಣದಲ್ಲೇ ಹಿಂದಿನ ವಾಹನದ ಚಾಲಕ ಓವರ್‌ಟೇಕ್ ಮಾಡಿ ಬರುತ್ತಾನೆ. ಇದು ಭಾರೀ ಅಪಾಯವನ್ನುಂಟು ಮಾಡುತ್ತಿದೆ.
ವಾಹನ ತಪಾಸಣೆಗೆ ಮಾತ್ರ ಆದ್ಯತೆ!
ಆರ್‌ಟಿಒ ಕಚೇರಿ, ಪೊಲೀಸ್ ಆಯುಕ್ತರ ಕಚೇರಿ ಮಾತ್ರವಲ್ಲದೆ ಇಲ್ಲಿ ಎಲ್‌ಐಸಿ, ಬ್ಯಾಂಕ್, ಮಾಲ್, ಅಂಚೆಕಚೇರಿ, ಬಿಎಸ್‌ಎನ್‌ಎಲ್ ಮತ್ತಿತರ ಪ್ರಮುಖ ಕಚೇರಿಗಳಿದ್ದು ಇದು ಸದಾ ಜನರು ಓಡಾಡುವ ಸ್ಥಳ. ಪೊಲೀಸ್ ಆಯುಕ್ತರ ಕಚೇರಿ ಎದುರು ಒಂದಿಬ್ಬರು ಸಂಚಾರಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಅವರು ಪಾದಚಾರಿಗಳ ಪಾಲಿಗೆ ಅಸಹಾಯಕರಾಗಿದ್ದಾರೆ. ಯಾವುದೇ ಸ್ಪೀಡ್‌ಬ್ರೇಕರ್, ಸೂಚನ ಫಲಕ, ಝೀಬ್ರಾ ಕ್ರಾಸ್ ಇಲ್ಲದಿರುವುದರಿಂದ ಪೊಲೀಸರಿಗೂ ವಾಹನಗಳ ವೇಗ ತಗ್ಗಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೆ ಸಂಚಾರಿ ಪೊಲೀಸರು ವಾಹನಗಳ ತಪಾಸಣೆಗೆ ಮಾತ್ರವೇ ಹೆಚ್ಚು ಆದ್ಯತೆ ನೀಡುತ್ತಿರುವುದು ಕಂಡುಬಂದಿದೆ.
ರಸ್ತೆ ದಾಟುವವರ ಸುರಕ್ಷೆಗಾಗಿ
– ವೈಜ್ಞಾನಿಕ ರೀತಿಯ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸುವುದು.
– ರಸ್ತೆ ದಾಟಲು ಝೀಬ್ರಾ ಕ್ರಾಸ್ ಗುರುತು ಹಾಕುವುದು.
– ರಸ್ತೆ ದಾಟುವವರ ನೆರವಿಗಾಗಿ ಸಂಚಾರಿ ಪೊಲೀಸರ ನಿಯೋಜನೆ
– ಅತೀವೇಗ, ನಿರ್ಲಕ್ಷ್ಯದ ಚಾಲನೆ ಮಾಡುವವರ ಮೇಲೆ ನಿಗಾ
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.