ಕೋವಿಡ್ 19 ತಾತ್ಸಾರ ತೋರಿದರೆ ಪರಿಣಾಮ ಭೀಕರ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು
Team Udayavani, Apr 6, 2020, 1:22 PM IST
ಉಡುಪಿ: ಆಧ್ಯಾತ್ಮಿಕ ಕೇಂದ್ರವಾಗಿರುವ ಭಾರತದಲ್ಲಿಯೂ ಈ ಕೋವಿಡ್ 19 ತನ್ನ ಆಟವನ್ನು ಪ್ರಾರಂಭಿಸಿದೆ. ನಾವು ಈ ಮಹಾ ಮಾರಿಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತಾತ್ಸಾರ ಮಾಡಿದರೆ ಭಯಂಕರ ಪರಿಣಾಮ ನಿಶ್ಚಿತ ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂದೇಶದಲ್ಲಿ ತಿಳಿಸಿದ್ದಾರೆ.
ಕಣ್ಣಿಗೆ ಕಾಣದ ಕೋವಿಡ್ 19 ವೈರಸ್ ಭೂಮಿ ಮೇಲಿನ ಪ್ರಜೆಗಳ ಅಸ್ವಿತ್ವದ ಬುನಾದಿಯನ್ನೇ ಅಲ್ಲಾಡಿಸಿದೆ. ಪ್ರಾರಂಭಿಕ ಹಂತದಲ್ಲಿ ಸಾಂಕ್ರಾಮಿಕ ರೋಗವೆಂದು ತಾತ್ಸಾರ ಮಾಡಿದ ಅನೇಕ ದೇಶಗಳಲ್ಲಿ ಸಹ್ರಸ್ರಾರು ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿವೆ. ಇದು ಎಲ್ಲ ದೇಶಗಳಲ್ಲಿ ತಲ್ಲಣ ಮೂಡಿಸಿದೆ. 138 ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯ ಭಾರತದಲ್ಲಿ ಇದನ್ನು ತಡೆಗಟ್ಟುವುದು ಊಹಾತೀತವಾದ ಸಂಗತಿ. ಈ ಸಮಯದಲ್ಲಿ ಭಾರತದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ಲಾಕ್‌ಡೌನ್ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ ನಿರ್ಧಾರ. ಎಲ್ಲರ ಯೋಗಕ್ಷೇಮ ಮತ್ತು ಉಪಯೋಗಕ್ಕಾಗಿ ಹಾಕಿರುವ ನಿರ್ಬಂಧ ಇದಾಗಿದೆ.
ಸ್ವಯಂ ಸೈನಿಕರಾಗೋಣ
ನಾವೆಲ್ಲರೂ ಸ್ವಯಂ ಸೈನಿಕರಂತೆ ಸರಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಈ ಮಹಾಮಾರಿಯನ್ನು ಓಡಿಸಲು ಕೈ ಜೋಡಿಸಬೇಕು. ಒಣಜಂಭದಿಂದ ಅಡ್ಡಾದಿಡ್ಡಿ ತಿರುಗಾಡುವುದು, ಬೇಜವಾಬ್ದಾರಿ ವರ್ತನೆ ಸಲ್ಲದು. ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವ ನಿಮ್ಮ ಕೈಯಲ್ಲಿದೆ. ಹೀಗಾಗಿ ನಾವೆಲ್ಲರೂ ಮನೆಯಿಂದ ಹೊರಬಾರದೆ ಮನೆಯೊಳಗೆ ಇದ್ದುಕೊಂಡು ಅನ್ಯರಿಗೆ ಕಷ್ಟಗಳು ಬಾರದಂತೆ ದೇವರಲ್ಲಿ ಬೇಡಿಕೊಂಡರೆ ಹೆಚ್ಚು ಶ್ರೇಯಸ್ಸು ದೊರೆಯುತ್ತದೆ. ಸಮಗ್ರ ಭಾರತೀಯ ಪ್ರಜೆಗಳು ಈಗ ಉದ್ಭವಿಸಿದ ಸಮಸ್ಯೆಯನ್ನು ಅರ್ಥೈಸಿ ಕೊಂಡು ಮತ್ತು ಪರಸ್ಪರ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಸಂಯಮದಿಂದ ವರ್ತಿಸಬೇಕಾಗಿದೆ. ಈ ಕೋವಿಡ್ 19 ವೈರಸ್ ಈ ಪ್ರಪಂಚದಿಂದ ದೂರ ವಾಗು ವಂತೆ ಆರಾಧ್ಯಮೂರ್ತಿ ಶ್ರೀ ಕೃಷ್ಣ-ಮುಖ್ಯ ಪ್ರಾಣರಲ್ಲಿ ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ಸಂದೇಶ ದಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲರು ಗುರುವಾರ ಪೇಜಾವರ ಶ್ರೀಪಾದರಿಗೆ ದೂರವಾಣಿ ಕರೆ ಮಾಡಿ ಕೋವಿಡ್ 19 ಸೋಂಕು ನಿವಾರಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಬಯಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.