ತ್ರಿವಿಕ್ರಮನಿಗೆ ಹಾಡಷ್ಟೇ ಬಾಕಿ

ಕ್ರೇಜಿಸ್ಟಾರ್‌ ಪುತ್ರನ ಸಿನಿಮಾ

Team Udayavani, Jul 10, 2020, 10:14 AM IST

trivikram-songs

ರವಿಚಂದ್ರನ್‌ ಅವರ ಪುತ್ರ ವಿಕ್ರಮ್‌ ನಾಯಕರಾಗಿ ನಟಿಸಿರುವ ತ್ರಿವಿಕ್ರಮ ಬಹುತೇಕ ಪೂರ್ಣಗೊಂಡಿದ್ದು, ಎರಡು ಹಾಡು ಚಿತ್ರೀಕರಿಸಿದರೆ ಚಿತ್ರ ಪ್ರೇಕ್ಷಕರ ಮುಂದೆ ಬರಲು ರೆಡಿ. ತಮ್ಮ ಚಿತ್ರದ ಬಗ್ಗೆ ನಿರ್ದೇಶಕ ಸಹನಾಮೂರ್ತಿ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ದೇಶಕ ಸಹನಾಮೂರ್ತಿ ಹೇಳುವಂತೆ “ತ್ರಿವಿಕ್ರಮ’.. ಇದು ತುಂಬಾ ನಂಬಿಕೆಯ ಸಿನಿಮಾ. ದೊಡ್ಡ ಖುಷಿ ಕೊಟ್ಟಿರುವ ಚಿತ್ರ. ಕಾರಣ, ರವಿಚಂದ್ರನ್‌ ಅವರ ಎರಡನೇ ಮಗನನ್ನು ಈ ಚಿತ್ರದ ಮೂಲಕ ವಿಭಿನ್ನವಾಗಿ ಪರಿಚಯಿಸುತ್ತಿರೋದು.

ಇನ್ನು, ದೊಡ್ಡ ಬಜೆಟ್‌ ಪ್ಲಾನ್‌ನಲ್ಲಿ ಚಿತ್ರ ನಿರ್ಮಾಣ ಮಾಡಿರೋದು.ಇವೆಲ್ಲದರ ಜೊತೆಯಲ್ಲಿ ಇದು ನನ್ನ ಮೂರನೇ ಸಿನಿಮಾ. ಸಹಜವಾಗಿಯೇ ನನಗಿದು ಚಾಲೆಂಜ್‌. ಎಲ್ಲೂ ಕಾಂಪ್ರಮೈಸ್‌ ಮಾಡಿಕೊಳ್ಳದೆ ಒಂದೊಳ್ಳೆಯ ಸಿನಿಮಾ ಕಟ್ಟಿಕೊಟ್ಟಿದ್ದೇನೆ. ಬೆಂಗಳೂರು, ಕೊಡಚಾದ್ರಿ, ಉಡುಪಿ, ರಾಜಸ್ಥಾನ್‌ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಹಾಡಿನ ಚಿತ್ರೀಕರಣಕ್ಕೆ ಆಸ್ಟ್ರೇಲಿಯಾ ಹೋಗಬೇಕಿತ್ತು.

ಆದರೆ, ಕೋವಿಡ್‌ 19 ಸಮಸ್ಯೆ ಎದುರಾಗಿ, ಇದೀಗ ಕಾಶ್ಮೀರದಲ್ಲಿ ಪ್ಲಾನ್‌ ಮಾಡಲಿದ್ದೇವೆ. ಇನ್ನು, ಲಡಾಕ್‌ನಲ್ಲೂ ಪ್ಲಾನ್‌ ಇತ್ತು. ಅಲ್ಲಿ ವಾರ್‌ ಸುದ್ದಿ ಇರುವುದರಿಂದ ಅಲ್ಲೂ ಕೈ ಬಿಟ್ಟಿದ್ದೇವೆ. ನಾವು ಬ್ಯಾಂಕಾಕ್‌ನಿಂದ ಬಂದ ಎರಡನೇ ದಿನಕ್ಕೆ ಎಂಟೈರ್‌ ಕೋವಿಡ್‌ 19 ಹರಡಿತು. ನಮ್ಮ ಅದೃಷ್ಟ ಅಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ಬಂದೆವು. ಸುಮಾರು 30 ಜನರ ತಂಡ ಅಲ್ಲಿಗೆ ತೆರಳಿತ್ತು.ಅಲ್ಲಿ 10 ದಿನಗಳ ಕಾಲ ಚಿತ್ರೀಕರಣ ಮಾಡಲಾಯಿತು.

ಕೆಲವರು ಸಾಂಗ್‌ಗಾಗಿ ಮಾತ್ರ ಬ್ಯಾಂಕಾಕ್‌ಗೆ ಹೋಗುತ್ತಾರೆ. ನಾವು ಮಾತಿನ ಭಾಗವನ್ನೂ ಚಿತ್ರೀಕರಿಸಿಕೊಂಡು ಬಂದಿದ್ದೇವೆ. ಚಿತ್ರದಲ್ಲಿ ಹುಲಿಯ ಪಾತ್ರವೂ ಇದೆ. ಗ್ರಾಫಿಕ್ಸ್‌ನಲ್ಲಿ ಹುಲಿ ತೋರಿಸಲು ಇಷ್ಟ ಇರಲಿಲ್ಲ. ಎಷ್ಟೇ ಮಾಡಿದರೂ, ಅದು ಗ್ರಾಫಿಕ್ಸ್‌ ಆಗುತ್ತೆ. ಅದು ಬೇಡ ಎಂಬ ಕಾರಣಕ್ಕೆ ಎರಡು ದಿನಗಳ ಕಾಲ ಹುಲಿ ಭಾಗದ ಚಿತ್ರೀಕರಣ ಮಾಡಿದ್ದೇವೆ ಎಂಬುದು ಹೆಮ್ಮೆ ಎನ್ನುತ್ತಾರೆ ಸಹನಾಮೂರ್ತಿ.

ಹಾಡುಗಳ ಬಗ್ಗೆ ಮಾತನಾಡುವ ಸಹಾನ, ಚಿತ್ರದ ಮತ್ತೂಂದು ಹೆ‌ಲೈಟ್‌ ಅಂದರೆ ಅದು ಅರ್ಜುನ್‌ ಜನ್ಯಾ ಅವರ ಸಂಗೀತ. ಚಿತ್ರಕ್ಕೆ ಅವರು 6 ಹಾಡುಗಳನ್ನು ಕೊಟ್ಟಿದ್ದಾರೆ. ಆ ಎಲ್ಲಾ ಹಾಡುಗಳೂ ಸೂಪರ್‌ ಹಿಟ್‌ ಆಗುತ್ತವೆ ಎಂಬ ನಂಬಿಕೆ ನಮ್ಮದು. ಚಿತ್ರದಲ್ಲಿ ಮೂರು ಮೆಲೋಡಿ, ಡ್ಯಾನ್ಸ್‌ ನಂಬರ್‌, ಇಂಟ್ರಡಕ್ಷನ್‌ ಸಾಂಗ್‌ ಇದೆ. ಇಲ್ಲಿ ಇಂಟ್ರಡಕ್ಷನ್‌ ಸಾಂಗ್‌ ವಿಭಿನ್ನವಾಗಿದೆ. ತಾಯಿ ಮಗ ನಡುವೆ ನಡೆಯೋ ಜುಗಲ್‌ಬಂದಿ ರೀತಿಯಲ್ಲೆ ಹಾಡನ್ನು ಕಟ್ಟಿಕೊಡಲಾಗಿದೆ.

ಹೀರೋ ವಿಕ್ರಮ್‌ ಅವರ ತಾಯಿಯಾಗಿ ತುಳಸಿ ಅವರು ನಟಿಸಿದ್ದಾರೆ. ಅವರಿಲ್ಲಿ ಮಧ್ಯಮ ಕುಟುಂಬದವರಾಗಿ ನಟಿಸಿದ್ದು, ಸದಾ ಆಚಾರ, ವಿಚಾರ, ಸಂಪ್ರದಾಯ ಎಂಬಂತಹ ತಾಯಿ. ಮಗನಿಗೆ ಅರೇಂಜ್‌ ಮ್ಯಾರೇಜ್‌ ಮಾಡಬೇಕೆಂಬ ಆಸೆ ಅವರದಾದರೆ, ಮಗನಿಗೆ ತಾನು ಪ್ರೀತಿಸಿ ಮದುವೆ ಆಗಬೇಕು ಎಂಬ ಉದ್ದೇಶ. ಈಗಿನ ಜನರೇಷನ್‌ ಹುಡುಗನೊಂದಿಗೆ ಬೆರೆತು ಹಾಡುವ ಹಾಡು ಇಲ್ಲಿ ಹೈಲೈಟ್‌ ಎನ್ನುವುದು ಸಹನಾ ಮಾತು. ಗೌರಿ ಎಂಟರ್‌ಟೈನರ್ ಬ್ಯಾನರ್‌ನಲ್ಲಿ ಸೋಮಣ್ಣ (ರಾಮ್ಕೋ) ಚಿತ್ರವನ್ನು ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.