ಬಿಹಾರದವರು ತಮಿಳುನಾಡಿಗೆ ಟಾಯ್ಲೆಟ್ ತೊಳೆಯಲು ಬರ್ತಾರೆ-ದಯಾನಿಧಿ ಮಾರನ್ ವಿವಾದಾತ್ಮಕ ಮಾತು
ತೇಜಸ್ವಿ ಯಾದವ್ ಕಟು ಟೀಕೆ - ಇಂಡಿಯಾ ಒಕ್ಕೂಟದಲ್ಲಿ ಮತ್ತೆ ಬಿರುಕು
Team Udayavani, Dec 24, 2023, 10:49 PM IST
ಚೆನ್ನೈ/ಪಟ್ನಾ: ಸನಾತನ ಧರ್ಮವನ್ನು ನಾಶ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿ ವಿವಾದ ಹಸಿರಾಗಿರುವಂತೆಯೇ ಡಿಎಂಕೆ ಸಂಸದ ದಯಾನಿಧಿ ಮಾರನ್ ಬಿಹಾರ, ಉತ್ತರ ಪ್ರದೇಶದವರು ತಮಿಳುನಾಡಿನಲ್ಲಿ ಶೌಚಾಲಯ ತೊಳೆಯಲು ಬರುತ್ತಾರೆ ಎಂದು ಹೇಳಿದ್ದು ಐ.ಎನ್.ಡಿ.ಐ.ಎ.ಮೈತ್ರಿಕೂಟದಲ್ಲಿ ಬಿರುಕಿನ ರೇಖೆಗಳನ್ನು ಸೃಷ್ಟಿಸಿದೆ.
ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾಗಿರುವ ಆರ್‌ಜೆಡಿ ನಾಯಕರಂತೂ ಸಂಸದ ದಯಾನಿಧಿ ಮಾರನ್ ಹೇಳಿಕೆಯಿಂದ ಕ್ರುದ್ಧಗೊಂಡಿದ್ದಾರೆ. ನಿಗದಿತ ಸಮುದಾಯದವರೇ ಇಂಥ ಕೆಲಸ ಮಾಡುತ್ತಿದ್ದಾರೆಯೇ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಗೆ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಚರ್ಚೆಗೆ ಸಿದ್ಧತೆ ನಡೆಯುತ್ತಿರುವಂತೆಯೇ ಹೊಸ ಹೇಳಿಕೆ ತಲ್ಲಣಕ್ಕೆ ಕಾರಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಾಜಿ ಸಚಿವ ದಯಾನಿಧಿ ಮಾರನ್ ಅವರು “ಇಲ್ಲಿನ ಜನರು ಇಂಗ್ಲಿಷ್ ಅಧ್ಯಯನ ಮಾಡಿರುವುದರಿಂದ ಐ.ಟಿ.ಕಂಪನಿಗಳಲ್ಲಿ ಉತ್ತಮ ವೇತನ ಇರುವ ಕೆಲಸ ಪಡೆಯುತ್ತಿದ್ದಾರೆ. ಆದರೆ, ಬಿಹಾರ, ಉತ್ತರ ಪ್ರದೇಶದವರು ಹಿಂದಿ ಹಿಂದಿ ಎನ್ನುತ್ತಿದ್ದಾರೆ. ಹೀಗಾಗಿ, ಆ ಭಾಷೆಯನ್ನು ಕಲಿತ ಬಿಹಾರದವರು ತಮಿಳುನಾಡಿನಲ್ಲಿ ರಸ್ತೆಯಲ್ಲಿ ಕಸ ಗುಡಿಸುತ್ತಾರೆ, ಶೌಚಾಲಯ ತೊಳೆಯುತ್ತಾರೆ. ಜತೆಗೆ ಅವರು ಮನೆ ಕಟ್ಟುವ ಕೆಲಸದಲ್ಲೂ ಕೌಶಲ್ಯ ಪಡೆದಿದ್ದಾರೆ’ ಎಂದು ಹೇಳಿದ್ದರು.
ಡಿಎಂಕೆ ನಾಯಕರು ಇದೊಂದು ಹಳೆಯ ವಿಡಿಯೋ ಎಂದು ಸಮಜಾಯಿಷಿ ನೀಡಿದ್ದರೂ, ಅದು ಪ್ರಯೋಜನವಾಗಿಲ್ಲ. ಬಿಹಾರದಲ್ಲಿ ಐ.ಎನ್.ಡಿ.ಐ.ಎ. ಮೈತ್ರಿಕೂಟದ ಅಂಗಪಕ್ಷ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಾರನ್ ಹೇಳಿಕೆಯಿಂದ ಕ್ರುದ್ಧರಾಗಿದ್ದಾರೆ. “ಅವರ ಹೇಳಿಕೆ ಖಂಡನೀಯ. ಇತರ ರಾಜ್ಯಗಳಲ್ಲಿನ ಪಕ್ಷದ ನಾಯಕರು, ಅವರು ಯಾವುದೇ ಪಕ್ಷಕ್ಕೆ ಸೇರಿದ್ದರೂ, ಈ ರೀತಿ ಮಾತನಾಡಿದ್ದು ಸರಿಯಲ್ಲ. ಇತರರನ್ನು ನಾವು ಗೌರವಿಸುತ್ತೇವೆ. ಅದೇ ಮಾನ್ಯತೆಯನ್ನೂ ನಾವೂ ಬಯಸುತ್ತೇವೆ. ಅವರು ನಿಗದಿತ ಸಮುದಾಯದವರೇ ಇಂಥ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ರುತ್ತಿದ್ದರೆ ಅದಕ್ಕೊಂದು ಅರ್ಥವಿತ್ತು” ಎಂದಿದ್ದಾರೆ.
ಸಾಮಾಜಿಕ ನ್ಯಾಯ: ಡಿಎಂಕೆ ನಾಯಕರು ಮಾತೆತ್ತಿದ್ದರೆ ಸಾಮಾಜಿಕ ನ್ಯಾಯದ ಮಾತಾಡು ತ್ತಿದ್ದಾರೆ. ಆರ್‌ಜೆಡಿ ಕೂಡ ಅದೇ ನಿಲುವನ್ನು ಹೊಂದಿ ದೆ. ಹೀಗಾಗಿ, ಆ ಪಕ್ಷದ ನಾಯಕರ ಹೇಳಿಕೆ ಸ್ವೀಕಾರಾ ರ್ಹವಲ್ಲ ಎಂದರು ಬಿಹಾರ ಡಿಸಿಎಂ ತೇಜಸ್ವಿ.
ಹೇಳಿಕೆಗೆ ಬಿಜೆಪಿಯೂ ಟೀಕೆ: ಡಿಎಂಕೆ ನಾಯಕನ ಹೇಳಿಕೆಗೆ ಬಿಹಾರದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂಡಿಯಾ ಒಕ್ಕೂಟದ ಮಿತ್ರ ಪಕ್ಷ ಜೆಡಿಯು ಬಿಹಾರದಲ್ಲಿ ಅಧಿಕಾರದಲ್ಲಿದೆ. ಹೀಗಾಗಿ, ರಾಜ್ಯದ ದುಃಸ್ಥಿತಿಯಲ್ಲಿ ಇರುವುದರಿಂದ ಬಿಹಾರ ದವರು ಇತರ ರಾಜ್ಯಕ್ಕೆ ಕೆಲಸಕ್ಕಾಗಿ ಹೋಗುವ ಸ್ಥಿತಿ ಇದೆ. ಹಿಂದುಸ್ತಾನ ಒಂದೇ ಯಾರು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು, ಬಿಹಾರದ ವರನ್ನು ಅವಮಾನಿಸದಿರಿ’ ಎಂದು ಮಾಜಿ ಸಚಿವ ರವಿಶಂಕರ ಪ್ರಸಾದ್ ತಿರುಗೇಟು ನೀಡಿದ್ದಾರೆ.
ಬಿಜೆಪಿಯನಾಯಕ ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿ ಡಿಎಂಕೆ ನಾಯಕರಿಗೆ ವಿವಾದ ಎಬ್ಬಿ ಸುವುದೇ ಹವ್ಯಾಸ. ಆರಂಭದಲ್ಲಿ ಸನಾತನ ಧರ್ಮ ಬಗ್ಗೆ ಮಾತನಾಡಿದರು. ಇದರ ಹೊರತಾಗಿ ಯೂ ಕೈ ನಾಯಕರು ಏಕೆ ಮೌನವಾಗಿದ್ದಾರೆ ಎಂದಿದ್ದಾರೆ.
ಡಿಎಂಕೆ, ಆರ್‌ಜೆಡಿ ಸಾಮಾಜಿಕ ನ್ಯಾಯದ ಮಾತಾಡುತ್ತಿವೆ. ಅಂಥ ಪಕ್ಷದ ನಾಯಕರಿಂದ ಇಂಥ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಅದನ್ನು ನಾವು ಖಂಡಿಸುತ್ತೇವೆ.
ತೇಜಸ್ವಿ ಯಾದವ್, ಬಿಹಾರ ಡಿಸಿಎಂ
ಬಿಹಾರದಲ್ಲಿನ ದುಃಸ್ಥಿತಿಯಿಂದಾಗಿ ನಮ್ಮ ರಾಜ್ಯದವರು ಬೇರೆ ಸ್ಥಳಕ್ಕೆ ಕೆಲಸಕ್ಕೆ ಹೋಗಬೇಕಾದ ಸ್ಥಿತಿ ಇದೆ. ಹಾಗೆಂದು ನಮ್ಮವರನ್ನು ಅವಮಾನ ಮಾಡುವುದು ಬೇಡ.
ರವಿಶಂಕರ್ ಪ್ರಸಾದ, ಮಾಜಿ ಸಚಿವ
ನಮ್ಮ ಪಕ್ಷ ಸಮಾನ ಸಮಾಜ ವ್ಯವಸ್ಥೆಗೆ ಬೆಂಬಲ ನೀಡುತ್ತದೆ. ತಮಿಳುನಾಡು ಹೆಚ್ಚು, ಮತ್ತೂಂದು ರಾಜ್ಯ ಕನಿಷ್ಠ ಎಂಬ ಭಾವನೆ ನಮ್ಮದಲ್ಲ. ಮಾರನ್ ಆ ರೀತಿ ಮಾತಾಡುವವರೇ ಅಲ್ಲ. ಬಿಜೆಪಿಯವರು ಹಳೆಯ ಹೇಳಿಕೆಯನ್ನು ಜಾಲತಾಣಗಳಲ್ಲಿ ವೈರಲ್ ಮಾಡಿ ಅಪಪ್ರಚಾರ ಮಾಡಿದ್ದಾರೆ.
ಜೆ.ಸಿ.ರವೀಂದ್ರನ್, ಡಿಎಂಕೆ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.