ಕಾಳುಮೆಣಸು ಏರಿಕೆಯ ನಾಗಲೋಟ: ಧಾರಣೆ ಇನ್ನಷ್ಟು ಹೆಚ್ಚಳ ಸಾಧ್ಯತೆ
Team Udayavani, Aug 6, 2023, 12:46 AM IST
ಪುತ್ತೂರು: ಕಾಳುಮೆಣಸು ಧಾರಣೆಯಲ್ಲಿ ದಿನೇದಿನೆ ಹೆಚ್ಚಳವಾಗು ತಿದ್ದು ಕೆಲವು ದಿನಗಳ ಲ್ಲಿಯೇ ಇನ್ನಷ್ಟು ಏರಿಕೆ ಸಾಧ್ಯತೆಯ ಬಗ್ಗೆ ಮಾರುಕಟ್ಟೆ ಸುಳಿವು ನೀಡಿದೆ.
ಆ. 5ರಂದು ಹೊರ ಮಾರುಕಟ್ಟೆ ಯಲ್ಲಿ ಕೆ.ಜಿ.ಗೆ 640ರಿಂದ 665 ರೂ. ತನಕವೂ ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ 610 ರೂ. ತನಕ ಇತ್ತು. ಹೊರ ಮಾರುಕಟ್ಟೆ ಮತ್ತು ಸಹಕಾರ ಸಂಘಗಳು ಧಾರಣೆ ಏರಿಕೆಯಲ್ಲಿ ಪೈಪೋಟಿ ಆರಂಭಿಸಿವೆ. ಆದರೂ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ.
ಆಗಸ್ಟ್‌ನಲ್ಲಿ ಏರಿಕೆ ಮುಂದುವರಿಕೆ
ಈ ಹಿಂದಿನ ಮೂರು ವರ್ಷಗಳಲ್ಲಿ 500 ರೂ. ಗಡಿ ದಾಟದ ಧಾರಣೆ ಈ ವರ್ಷದ ಜುಲೈಯಲ್ಲಿ 600 ರೂ. ಸನಿಹಕ್ಕೆ ಬಂದಿತ್ತು. ಆಗಸ್ಟ್ ಮೊದಲ ವಾರದಲ್ಲಿ 630ರಿಂದ 650 ರೂ. ಸನಿಹಕ್ಕೆ ತಲುಪಿದೆ. ಲಭ್ಯ ಮಾಹಿತಿ ಪ್ರಕಾರ ಸದ್ಯದಲ್ಲೇ 650 ರೂ. ದಾಟಿ ಮುಂದುವರಿಯುವ ಸಾಧ್ಯತೆ ಇದೆ. ಬೆಳೆಗಾರರು ಮಾರಾಟ ಮಾಡದೆ ಕಾದು ನೋಡುವ ತಂತ್ರಗಾರಿಕೆ ಅನುಸರಿಸಿದ್ದಾರೆ.
ಹಲವು ಕಾರಣ
ಕಾಳುಮೆಣಸು ದಾಸ್ತಾನು ಇರುವ ರೈತರು ಚೌತಿಯ ತನಕ ತಾಳ್ಮೆ ವಹಿಸುವುದು ಉತ್ತಮ ಅನ್ನುವುದು ಕೆಲವರ ಅಭಿಪ್ರಾಯ. ಚೌತಿಯ ಬಳಿಕ ಅಂತಾರಾಷ್ಟ್ರೀಯ ಸರಬರಾಜು ನವೆಂಬರ್ 2ನೇ ವಾರದ ತನಕ ತೆರೆದಿರುತ್ತದೆ. ಈ ಸಮಯದಲ್ಲಿ ಕಾಳುಮೆಣಸು ಧಾರಣೆಯಲ್ಲಿ ಹೆಚ್ಚಳವಾಗುತ್ತದೆ ಅನ್ನುವುದು ಇದಕ್ಕೆ ಕಾರಣ. ಇನ್ನೊಂದು ಮೂಲದ ಪ್ರಕಾರ ಅಂತಾರಾಷ್ಟ್ರೀಯ ಸಂಬಾರ ಜೀನಸು ಮಾರುಕಟ್ಟೆಗೆ 18ರಿಂದ 22 ದಿವಸದಲ್ಲಿ ಕಾಳುಮೆಣಸು ತಲುಪುವ ಕಾರಣ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು ಅನ್ನುತ್ತಿದೆ. ಈ ಎರಡು ಅಭಿಪ್ರಾಯಗಳ ಆಧಾರದಲ್ಲಿ ಕಾಳುಮೆಣಸು ಧಾರಣೆ ಹೆಚ್ಚಳವಾಗುವ ಸುಳಿವು ದೊರೆತಿದೆ.
ಆಮದು ಇಲ್ಲ
ವಿದೇಶದಿಂದ ಬರುತ್ತಿದ್ದ ಕಾಳುಮೆಣಸು ನಿಯಂತ್ರಣಕ್ಕೆ ಬಂದಿರುವ ಕಾರಣ ಭಾರತದಲ್ಲಿ ಕೊರತೆಯಾಗಿದೆ. ದೇಶಿಯ ಕಾಳು ಮೆಣಸಿಗೆ ಪೈಪೋಟಿ ನೀಡುತ್ತಿದ್ದ ವಿಯೆಟ್ನಾಂ, ಶ್ರೀಲಂಕಾ ದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದಾಸ್ತಾನು ಇರುವುದು ಕೂಡ ಧಾರಣೆ ಹೆಚ್ಚಳಕ್ಕೆ ಮುಖ್ಯ ಕಾರಣ. ದೇಶೀಯವಾಗಿಯು ಉತ್ಪಾದನೆ ಕುಸಿದಿರುವುದರಿಂದ ಕಾಳುಮೆಣಸು ಆಧಾರಿತ ಉತ್ಪಾದನ ವಲಯಕ್ಕೆ ಕೊರತೆಯ ಬಿಸಿ ತಟ್ಟಿದೆ.
ಹೊಸ ಅಡಿಕೆ ದರ ಏರಿಕೆ
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಏರಿಕೆ ಕಂಡಿದೆ. ಜು. 24ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 440 ರೂ., ಕ್ಯಾಂಪ್ಕೋದಲ್ಲಿ 432 ರೂ. ಇತ್ತು. ಆ. 5ರಂದು ಕ್ಯಾಂಪ್ಕೋದಲ್ಲಿ 450 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 460 ರೂ. ತನಕವು ಖರೀದಿಯಾಗಿತ್ತು.
ಕಾಳುಮೆಣಸು ಕೊರತೆ, ವಿದೇಶದಿಂದ ಆಮದು ನಿಯಂತ್ರಣದ ಕಾರಣದಿಂದ ಧಾರಣೆ ಏರಿಕೆ ಕಂಡಿದೆ. ಧಾರಣೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ.
– ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷ, ಕ್ಯಾಂಪ್ಕೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.