ಪೆರ್ಡೂರು ಜಾತ್ರೆ ಹಿನ್ನೆಲೆ: ರಸ್ತೆ ಮಾರ್ಗ ಬದಲಿ: ಜಿಲ್ಲಾಧಿಕಾರಿ
Team Udayavani, Mar 16, 2024, 7:40 AM IST
ಉಡುಪಿ: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಮಾ. 16ರಂದು ಸಂಜೆ 4ರಿಂದ ರಾತ್ರಿ 10ರ ವರೆಗೆ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ ಹೊರಡಿಸಲಾಗಿದೆ.
ರಾ.ಹೆ. 169 (ಎ)ರಲ್ಲಿ ಉಡುಪಿ ಯಿಂದ ಹೆಬ್ರಿ, ಆಗುಂಬೆ ಕಡೆಗೆ ಹೋಗುವ ವಾಹನಗಳಿಗೆ ಹಿರಿಯಡಕ ಜಂಕ್ಷನ್‌ನಲ್ಲಿ ಮಾರ್ಗ ಬದಲಾಯಿಸಿ ಕೋಟ್ನಾಕಟ್ಟೆ- ಹರಿಖಂಡಿಗೆ- ಬೈರಂಪಳ್ಳಿ- ಪೆರ್ಡೂರು ಮೇಲ್ಪೇಟೆ ಮಾರ್ಗವಾಗಿ ಅಥವಾ ಹಿರಿಯಡಕ ಬಜೆ, ಕುಕ್ಕೆಹಳ್ಳಿ, ಪೇತ್ರಿ ಮಾರ್ಗವಾಗಿ ಹೆಬ್ರಿ ಆಗುಂಬೆಗೆ ಸಂಚರಿಸಬೇಕು.
ರಾ.ಹೆ.169(ಎ) ರಲ್ಲಿ ಆಗುಂಬೆ-ಹೆಬ್ರಿಯಿಂದ ಉಡುಪಿ ಕಡೆಗೆ ಬರುವ ವಾಹನಗಳಿಗೆ ಪೆರ್ಡೂರು ಮೇಲ್ಪೇಟೆ- ಬೈರಂಪಳ್ಳಿ ಹರಿಖಂಡಿಗೆ-ಕೋಟ್ನಕಟ್ಟೆ- ಹಿರಿಯಡಕ ಜಂಕ್ಷನ್ ಮಾರ್ಗವಾಗಿ ಉಡುಪಿಗೆ ಸಂಚರಿಸಬೇಕು. ರಾ.ಹೆ. 169(ಎ) ರಲ್ಲಿ ಹೆಬ್ರಿಯಿಂದ ಪೆರ್ಡೂರು ಮಾರ್ಗವಾಗಿ ಪೇತ್ರಿ-ಬ್ರಹ್ಮಾವರ ಕಡೆಗೆ ಹೋಗುವ ವಾಹನಗಳು ಪೆರ್ಡೂರು ಮೇಲ್ಪೇಟೆಯ ಬಳಿ ಅಲಂಗಾರು ರಸ್ತೆಯ ಮಾರ್ಗವಾಗಿ ಕರ್ಜೆ, ಪೇತ್ರಿ, ಬ್ರಹ್ಮಾವರಕ್ಕೆ ಸಂಚರಿಸಬೇಕು.
ಪೆರ್ಡೂರು ಕೆಳಪೇಟೆಯಿಂದ ಮೇಲ್ಪೇಟೆಯ ಬಸ್ ನಿಲ್ದಾಣದವರೆಗೆ ವಾಹನ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.