ನಗರಸಭೆ ಕರಡು ಮೀಸಲಾತಿ ಪ್ರಕಟ : ದೊಡ್ಡಬಳ್ಳಾಪುರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
Team Udayavani, Jan 24, 2021, 12:29 PM IST
ದೊಡ್ಡಬಳ್ಳಾಪುರ: ನ್ಯಾಯಾಲಯದ ಆದೇಶದಂತೆ ಜ.21 ರಂದು ರಾಜ್ಯ ಪತ್ರದಲ್ಲಿ ನಗರಸಭೆ ವಾರ್ಡ್‌ಗಳ ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಒಂದೆರೆಡು ವಾರ್ಡ್ ಮೀಸಲಾತಿ ಪುನರಾವರ್ತನೆ ಆಗಿದೆ ಎಂಬ ದೂರುಗಳ ನಡುವೆ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ನಿಯಮದ ಅನ್ವಯ ಮೀಸಲಾತಿ ಮಾಡಿಲ್ಲವೆಂಬ ಕಾರಣ ಹಾಗೂ ವಾರ್ಡ್ ಗಳ ಗಡಿ ಗುರುತಿಸುವಿಕೆ ಗೊಂದಲದ ಕುರಿತು ಸ್ಥಳೀಯರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಅವದಿ ಮುಗಿದು ಎರಡು ವರ್ಷ ಕಳೆದರೂ ನಗರಸಭೆಗೆ ಇನ್ನೂ ಚುನಾವಣೆ ನಡೆದಿಲ್ಲ.
ಆಕ್ಷೇಪಣೆಗೆ ಅವಕಾಶ: ಪ್ರಸ್ತುತ ನ್ಯಾಯಾಲಯದ ಆದೇಶದಂತೆ ಮೀಸಲಾತಿ ಕರಡು ಪಟ್ಟಿ ಬಿಡುಗಡೆ ಮಾಡಲಾಗಿದೆ.
ಆಕ್ಷೇಪಣೆ 7 ದಿನಗಳ ಒಳಗಾಗಿ ಕಾರಣಗಳನ್ನು ಒಳಗೊಂಡಂತೆ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕರಡು ಮೀಸಲಾತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪಕ್ರಟಿಸಲಾದ್ದು, 7 ದಿನಗಳ ನಂತರ ಈ ಅಧಿಸೂಚನೆ ಪರಿಗಣನೆಗೆ ಒಳಪಡಲಿದೆ. ವಾರ್ಡ್‌ಗಳ ಗಡಿ ಗುರುತಿಸುವಿಕೆ ಗೊಂದಲದ ಕುರಿತು ಇದೇ ತಿಂಗಳ 27 ರಂದು ನ್ಯಾಯಾಲಯದ ಮುಂದೆ
ಪ್ರಕರಣ ಬರಲಿದ್ದು, ಅಂದಿನ ಆದೇಶವನ್ನು ಕಾದುನೋಡಬೇಕಿದೆ.
ವಾರ್ಡ್‌ವಾರು ಮೀಸಲಾತಿ ಪಟ್ಟಿ:
1.ಆಶ್ರಯ ಬಡಾವಣೆ: ಬಿಸಿಎಂ – ಎ (ಮಹಿಳೆ), 2.ಬಸವೇಶ್ವರ ನಗರ: ಸಾಮಾನ್ಯ. 3.ಮುತ್ಸಂದ್ರ: ಬಿಸಿಎಂ – ಬಿ (ಮಹಿಳೆ), 4.ವಿನಾಯಕನಗರ: ಸಾಮಾನ್ಯ. 5.ಸಿದ್ದೇನಾಯಕನಹಳ್ಳಿ: ಸಾಮಾನ್ಯ (ಮಹಿಳೆ). 6.ಮುತ್ತೂರು: ಪರಿಶಿಷ್ಟ ಪಂಗಡ. 7.ಶ್ರೀನಗರ: ಹಿಂದುಳಿದ ವರ್ಗ – ಬಿ. 8.ಖಾಸ್ ಬಾಗ್, ದರ್ಗಾಪುರ: ಹಿಂದುಳಿದ ವರ್ಗ – ಎ. 9.ಸಂಜಯನಗರ: ಸಾಮಾನ್ಯ, 10.ವಿದ್ಯಾನಗರ: ಹಿಂದುಳಿದ ವರ್ಗ – ಎ (ಮಹಿಳೆ), 11.ಕರೇನಹಳ್ಳಿ-1: ಸಾಮಾನ್ಯ, 12.ಕನಕದಾಸನಗರ: ಪ.ಜಾತಿ, 13.ಭುವನೇಶ್ವರಿ ನಗರ: ಹಿಂದುಳಿದ ವರ್ಗ – ಎ. 14.ನೇಯ್ಗೆಬೀದಿ: ಸಾಮಾನ್ಯ (ಮಹಿಳೆ), 15.ತೂಬಗೆರೆಪೇಟೆ: ಹಿಂದುಳಿದ ವರ್ಗ – ಎ (ಮಹಿಳೆ),
16.ಗಾಂಧಿನಗರ: ಸಾಮಾನ್ಯ, 17.ಕುಚ್ಚಪ್ಪನಪೇಟೆ: ಸಾಮಾನ್ಯ, 18.ವೀರಭದ್ರನಪಾಳ್ಯ-ಕಲ್ಲುಪೇಟೆ: ಪ.ಜಾತಿ, 19.ದೇವರಾಜನಗರ: ಹಿಂದುಳಿದ ವರ್ಗ – ಎ, 20.ತ್ಯಾಗರಾಜನಗರ: ಸಾಮಾನ್ಯ (ಮಹಿಳೆ), 21.ಹೇಮಾವತಿಪೇಟೆ: ಸಾಮಾನ್ಯ, 22.ಚಿಕ್ಕಪೇಟೆ:
ಹಿಂದುಳಿದ ವರ್ಗ – ಎ (ಮಹಿಳೆ). 23.ಗಾಣಿಗರಪೇಟೆ: ಸಾಮಾನ್ಯ, 24.ಎಲೇಪೇಟೆ: ಹಿಂದುಳಿದ ವರ್ಗ – ಎ, 25.ಮಾರುತಿನಗರ: ಸಾಮಾನ್ಯ (ಮಹಿಳೆ), 26.ರೋಜಿಪುರ,ಗಂಗಾಧರಪುರ: ಸಾಮಾನ್ಯ, 27.ಸೋಮೇಶ್ವರ ಬಡಾವಣೆ: ಸಾಮಾನ್ಯ (ಮಹಿಳೆ),
28.ಕಛೇರಿಪಾಳ್ಯ: ಪ.ಜಾತಿ(ಮಹಿಳೆ), 29.ಶಾಂತಿನಗರ: ಸಾಮಾನ್ಯ (ಮಹಿಳೆ), 30.ಇಸ್ಲಾಂಪುರ: ಸಾಮಾನ್ಯ (ಮಹಿಳೆ), 31.ಕರೇನಹಳ್ಳಿ-2: ಸಾಮಾನ್ಯ (ಮಹಿಳೆ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.