ಸುರಂಗ ದುರಸ್ತಿ ಕಾರ್ಯ ಪೂರ್ಣ : ರೈಲು ಸಂಚಾರ ಪುನಾರಂಭ
Team Udayavani, Sep 17, 2020, 7:20 PM IST
ಕಾರವಾರ: ಕೊಂಕಣ ರೈಲ್ವೆಯ ಕಾರವಾರ ವ್ಯಾಪ್ತಿಯ ಪೆರ್ನೆಮ್ ಸುರಂಗ ಮಾರ್ಗದ ದುರಸ್ತಿ ಪೂರ್ಣಗೊಂಡು ಟ್ರಾಕ್ ಫಿಟ್ ಪ್ರಮಾಣ ಪತ್ರ ನೀಡಲಾಗಿದ್ದು, ಮಂಗಳವಾರ ರಾತ್ರಿಯಿಂದಲೇ ರೈಲು ಸಂಚಾರ ಪ್ರಾರಂಭವಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಎರ್ನಾಕುಲಂ ಜಂಕ್ಷನ್ – ಹಜರತ್ ನಿಜಾಮುದ್ದೀನ್ ವಿಶೇಷ ಎಕ್ಸ್‌ಪ್ರೆಸ್ (02617) ಸೆ.15ರಿಂದಲೇ ತನ್ನ ಎಂದಿನ ಮಾರ್ಗವಾದ ಮಡಗಾಂವ್ – ರೋಹ – ಪನ್ವೇಲ್ – ಕಲ್ಯಾಣ್ ಮೂಲಕ ಸಂಚರಿಸಲಿದೆ. ನಿಜಾಮುದ್ದೀನ್- ಎರ್ನಾಕುಲಂ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ (02618) ಸೆ.15ರಿಂದ ಕಲ್ಯಾಣ್- ಪನ್ವೇಲ್- ರೋಹ- ಮಡಗಾಂವ್- ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದೆ.
ನಿಜಾಮುದ್ದೀನ್ ಎರ್ನಾಕುಲಂ ಜಂಕ್ಷನ್ ದುರಂತೊ ವಿಶೇಷ ಎಕ್ಸ್‌ಪ್ರೆಸ್ (02284) ಸೆ.19ರಿಂದ ತನ್ನ ಮಾಮೂಲಿ ಮಾರ್ಗವಾದ ವಸಾಯ್ ರೋಡ್ – ಪನ್ವೆಲ್ – ರೋಹ – ಮಡಗಾಂವ್ – ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದೆ. ಎರ್ನಾಕುಳಂ ಜಂಕ್ಷನ್ – ನಿಜಾಮುದ್ದೀನ್ ದುರಂತೊ ಎಕ್ಸ್‌ಪ್ರೆಸ್ (02283) ಸೆ.22ರಿಂದ ತನ್ನ ಎಂದಿನ ಮಾರ್ಗವಾದ ಮಂಗಳೂರು ಜಂಕ್ಷನ್ – ಮಡಗಾಂವ್ – ರೋಹ – ಪನ್ವೆಲ್ – ವಸಾಯ್ ರೋಡ್ ಮೂಲಕ ತೆರಳಲಿದೆ.
ನವದೆಹಲಿ- ತಿರುವನಂತಪುರಂ ಸೆಂಟ್ರಲ್- ನವದೆಹಲಿ ರಾಜಧಾನಿ ವಿಶೇಷ ರೈಲು (02432 ಹಾಗೂ 02431) ಸೆ.16ರಿಂದ ಸೇವೆಗಳನ್ನು ಆರಂಭಿಸಲಿದೆ. ಲೋಕಮಾನ್ಯ ತಿಲಕ್ ಟರ್ಮಿನಲ್- ತಿರುವನಂತಪುರಂ- ಲೋಕಮಾನ್ಯ ತಿಲಕ್ ಟರ್ಮಿನಲ್ ವಿಶೇಷ ರೈಲು (06345- 06346) ಸೆ.16ರಿಂದ ಸೇವೆ ಪ್ರಾರಂಭಿಸಿರುವುದಾಗಿ ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.