ಫಲ್ಗುಣಿ ನದಿ ಸಮುದ್ರ ಸೇರುವ ಪ್ರದೇಶ: ಮೀನುಗಾರರಿಗೆ “ಬೋಟ್ ಪಳೆಯುಳಿಕೆ’ ಡೇಂಜರ್!
Team Udayavani, Mar 11, 2022, 5:50 AM IST
ಯಾರಿಗೆ ಸಮಸ್ಯೆ?
ಅಳಿವೆಬಾಗಿಲು ಮುಖೇನ ಕಡಲಿಗೆ ಮೀನುಗಾರಿಕಾ ಬೋಟ್‌ಗಳ ಸಂಚಾರ ಹಾಗೂ ಮೀನುಗಾರಿಕೆ ಬಂದರ್‌ನಿಂದ ಬೆಂಗ್ರೆ ಹಾಗೂ ಹಳೆಯ ಬಂದರ್‌ನಿಂದ ಕಸ್ಬಾ ಬೆಂಗ್ರೆಗೆ ಸಂಚರಿಸುವ ಫೆರ್ರಿ (ಪ್ರಯಾಣಿಕ ಬೋಟು)ಸಂಚಾರಕ್ಕೂ ಸಂಚಕಾರ ತಂದಿದೆ.
ಸಮಸ್ಯೆ ಏನು?
ಫಲ್ಗುಣಿ ನದಿಯು ಸಮುದ್ರ ಸೇರುವ ಅಳಿವೆಬಾಗಿಲು ವ್ಯಾಪ್ತಿಯಲ್ಲಿ ಈ ಹಿಂದೆ ಕೆಲವು ಬೋಟ್‌ಗಳು ಮುಳುಗಿದ್ದು, ಅದರ ಪಳೆಯುಳಿಕೆಯನ್ನು ಇನ್ನೂ ತೆರವು ಮಾಡದ ಕಾರಣದಿಂದ ಬೋಟ್‌ಗಳ ಸುಗಮ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.
ಕೆಲವು ವರ್ಷಗಳಲ್ಲಿ ಈ ಭಾಗದಲ್ಲಿ ಬೋಟ್ ಅವಘಡ ನಡೆದು ಉಳಿದ ಅವುಗಳ ಅವಶೇಷ ವನ್ನು ತೆರವು ಮಾಡುವ ಕಾರ್ಯಕ್ಕೆ ಮೀನು ಗಾರಿಕೆ ಇಲಾಖೆ ಹಾಗೂ ಬೋಟ್ ಮಾಲಕರು ಮನಸ್ಸು ಮಾಡಿಲ್ಲ.
ಅವಶೇಷ ಮುಳುಗಿದರೆ ಸಮಸ್ಯೆ
ಮುಳುಗಿರುವ ಬೋಟ್‌ನ ಕೆಲವು ಭಾಗ ನೀರಿನಲ್ಲಿ ಕಾಣಿಸುತ್ತಿರುವ ಪರಿಣಾಮ ಫೆರ್ರಿ ಬೋಟ್, ಮೀನುಗಾರಿಕೆ ಬೋಟ್‌ನವರು ಈ ಸ್ಥಳವನ್ನು ತಪ್ಪಿಸಿಕೊಂಡು ಸಂಚರಿಸುತ್ತಿದ್ದಾರೆ. ಆದರೆ ಬೋಟ್ ಅವಶೇಷ ನೀರಿನಲ್ಲಿ ಇನ್ನಷ್ಟು ಆಳಕ್ಕೆ ಹೋದರೆ ಬೋಟ್‌ಗಳ ಸಂಚಾರಕ್ಕೆ ಬಹುದೊಡ್ಡ ಸಮಸ್ಯೆ ಎದುರಾಗಬಹುದು. ಇದನ್ನು ಮೀನುಗಾರಿಕೆ ಇಲಾಖೆ ಗಂಭೀರವಾಗಿ ಪರಿಗಣಿಸುವಂತೆ ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ.
ಎಚ್ಚರ ತಪ್ಪಿದರೆ ಅಪಾಯ!
ಅಳಿವೆಬಾಗಿಲಿನಲ್ಲಿಯೂ ಇಂತಹುದೇ ಸಮಸ್ಯೆ ಇದೆ. ವಿಶೇಷವೆಂದರೆ ಇಲ್ಲಿ ಈ ಹಿಂದೆ ಅಪಘಾತಕ್ಕೀಡಾದ ಬೋಟ್‌ನ ಅವಶೇಷ ನೀರೊಳಗೆ ಸೇರಿದೆ. ರಾತ್ರಿ ವೇಳೆ ಯಲ್ಲಂತು ಬೋಟ್‌ಗಳು ಇಲ್ಲಿ ಸಂಚರಿಸುವುದರಿಂದ ಮುಳುಗಿರುವ ಬೋಟ್ ಗೊತ್ತೇ ಆಗುವುದಿಲ್ಲ. ಹೀಗಾಗಿ ಅತ್ಯಂತ ಎಚ್ಚರಿಕೆ ವಹಿಸಿಕೊಂಡು ಬೋಟ್ ಚಲಾಯಿಸಲಾಗುತ್ತಿದೆ.
ಬೋಟ್‌ಗಳನ್ನು ತೆರವುಗೊಳಿಸದಿರಲು ಕಾರಣ?
ಕಡಲಿನಲ್ಲಿ ಭಾಗಶಃ ಮುಳುಗಡೆಯಾದ ಅಥವಾ ಅಪಾಯದಲ್ಲಿದ್ದ ಕೆಲವು ಬೋಟನ್ನು ಇತರ ಬೋಟ್‌ನವರು ಎಳೆದುಕೊಂಡು ಅಳಿವೆಬಾಗಿಲು ಮೂಲಕ ತೀರಕ್ಕೆ ತಂದ ಸಂದರ್ಭ ನೀರಲ್ಲೇ ಅವಶೇಷ ಬಾಕಿಯಾದ ಪ್ರಸಂಗವೂ ನಡೆದಿದೆ. ಮುಳುಗಡೆಯಾದ ಬೋಟ್ ತೆರವು ಮಾಡುವುದು ಮೀನುಗಾರಿಕೆ ಇಲಾಖೆಯ ಪ್ರಕಾರ ಬೋಟ್ ಮಾಲಕರ ಕರ್ತವ್ಯ. ಬೋಟುಗಳಿಗೆ ಹಾನಿಯಾದರೆ ಅದರ ನಿರ್ವಹಣೆಗಾಗಿ ವಿಮೆ ಮಾಡಲಾಗುತ್ತದೆ. ಆದರೆ ಕೆಲವೊಂದು ಕಾರಣಗಳನ್ನು ನೀಡಿ ವಿಮಾದಾರರು-ಬೋಟು ಮಾಲಕರ ಮಧ್ಯೆ ಸಮಸ್ಯೆ ಉಂಟಾಗುತ್ತಲೇ ಇರುತ್ತದೆ. ಹೀಗಾಗಿ ಹಣ ದೊರೆಯದೆ ಬೋಟು ಮಾಲಕರಿಗೆ ಮುಳುಗಡೆಯಾಗುವ ಬೋಟನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.