Heavy Rain ಹೊಳೆ ಮಧ್ಯೆ ಸಿಲುಕಿಕೊಂಡ ಪಿಕಪ್; ಕಾರ್ಯಾಚರಣೆ
ಹೊಳೆಯಲ್ಲಿ ಹರಿದು ಬಂದ ದಿಢೀರ್ ನೆರೆ ನೀರು
Team Udayavani, Jun 1, 2024, 1:01 AM IST
ಸುಳ್ಯ: ಗುರುವಾರ ಅಪರಾಹ್ನ ಸುಬ್ರಹ್ಮಣ್ಯ, ಕೊಲ್ಲಮೊಗ್ರು ಪರಿಸರದಲ್ಲಿ ಧಾರಾಕಾರ ಮಳೆಯಾಗಿ ದ್ದು, ಈ ವೇಳೆ ಹೊಳೆಯಲ್ಲಿ ದಿಢೀರ್ ನೆರೆ ನೀರು ಹರಿದು ಬಂದು ಪಿಕಪ್ ವಾಹನ ವೊಂದು ನೆರೆ ನೀರಿನಲ್ಲಿ ಅಪಾಯಕ್ಕೆ ಸಿಲುಕಿದ ಘಟನೆ ಸಂಭವಿಸಿದೆ.
ಕೊಲ್ಲಮೊಗ್ರು ಗ್ರಾಮದ ಪನ್ನೆ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಕೋತ್ನಡ್ಕದ ರಾಮಕೃಷ್ಣ ಅವರ ಮನೆಯಿಂದ ಮಹೇಶ್ ಪಿಕಪ್‌ನಲ್ಲಿ ತೆಂಗಿನಕಾಯಿ ಹೇರಿಕೊಂಡು ಹಿಂದಿರುಗುವ ವೇಳೆ ಹೊಳೆ ದಾಟುವ ಸಂದರ್ಭ ದಿಢೀರ್ ನೆರೆ ನೀರು ಹರಿದು ಬಂದು ಹೊಳೆ ಮಧ್ಯದಲ್ಲಿ ಪಿಕಪ್ ವಾಹನ ಸಿಲುಕಿಕೊಂಡಿತು. ಈ ಘಟನೆಯಿಂದ ಪಿಕಪ್‌ನಲ್ಲಿದ್ದ ನೂರಾರು ತೆಂಗಿನಕಾಯಿಗಳು ನೀರು ಪಾಲಾಗಿವೆ ಎಂದು ತಿಳಿದುಬಂದಿದೆ.
ಹೊಳೆ ನಡುವೆ ಸಿಲುಕಿಕೊಂಡು, ಕೊಚ್ಚಿಕೊಂಡು ಹೋಗುವ ಭೀತಿಯಲ್ಲಿದ್ದ ಪಿಕಪ್ ವಾಹನಕ್ಕೆ ಹಗ್ಗ ಕಟ್ಟಿ, ನದಿ ದಡದಲ್ಲಿದ್ದವರು ಸೇರಿ ಎಳೆಯುವ ಕಾರ್ಯಾಚರಣೆ ನಡೆಸಿ ಪಿಕಪ್ ವಾಹನವನ್ನು ಹೊಳೆಯಿಂದ ಹೊರ ತಂದಿದ್ದಾರೆ.
ಧಾರಾಕಾರ ಮಳೆ: ಅಪಾಯಕ್ಕೆ ಸಿಲುಕಿದ ಕಟ್ಟಡಗಳು
ಸುಬ್ರಹ್ಮಣ್ಯ: ಗುರುವಾರ ಸಂಜೆ ಸುರಿದ ಮಳೆಗೆ ಯೇನೆ ಕಲ್ಲು ಪೇಟೆಯ ಬಳಿಯ ಹೊಳೆಯಲ್ಲಿ ಮಳೆ ನೀರಿನ ಹರಿವಿಗೆ ಮಣ್ಣು ಕೊಚ್ಚಿ ಹೋಗಿದ್ದು, ಕೆಲವು ಕಟ್ಟಡಗಳು ಅಪಾಯದಲ್ಲಿವೆ.
ಯೇನೆಕಲ್ಲು ಬಸ್ ನಿಲ್ದಾಣದ ಬಳಿಯಿಂದ ಇಸ್ಮಾಯಿಲ್ ಅವರ ಮನೆಯ ತನಕ, ಮಹಮ್ಮದ್ ಅವರ ಕಟ್ಟಡ, ನಾಳ ಕುಶಾಲಪ್ಪ ಗೌಡರ ಕಟ್ಟಡ, ಗಂಗಾಧರ ಪೈಲಾಜೆಯವರ ಕಟ್ಟಡ, ಇಸ್ಮಾಯಿಲ್ ಅವರ ಮನೆಯ ಹಿಂಭಾಗದ ತನಕ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಕಟ್ಟಡಗಳು ಅಪಾಯದ ಸ್ಥಿತಿಯ ಲ್ಲಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸರಕಾರಿ ಪ್ರೌಢಶಾಲೆಯ ಗೇಟ್ ಬಳಿ ಹರಿಯುವ ಸಣ್ಣ ತೋಡಿನಲ್ಲಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕೋಟಿಗೌಡನ ಮನೆ, ಮಾದನಮನೆ, ಕಡಿಂಬಿಲ ಬೈಲಿನ ಭಾಗಗಳಲ್ಲಿ ನೀರು ತೊಟಕ್ಕೆ ನುಗ್ಗಿ ಜಲಾವೃತಗೊಂಡಿತ್ತು. ಲಿಂಗಪ್ಪ ಗೌಡ ಮಲ್ಲಾರ ಅವರ ಮನೆಯ ಬಳಿಯ ಮೋರಿ ನೀರುಪಾಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.