ಜೊತೆಯಾಗಿ ಆಟ, ಜೊತೆಗೂಡಿ ಕೆಲಸ
ಬಾರೋ ಸಾಧಕರ ಕೇರಿಗೆ
Team Udayavani, Apr 14, 2020, 11:28 AM IST
ರಾಲ್ಫ್ ಬಂಚೆ ಅಮೆರಿಕದ ಮುತ್ಸದ್ದಿ, ಶಿಕ್ಷಣ ತಜ್ಞ, ಸಂಘಟಕ. 1950ರಲ್ಲಿ ನೊಬೆಲ್ ಶಾಂತಿ ಪಾರಿತೋಷಕ ಪಡೆದವನು. ಅಮೆರಿಕದ ಕೃಷ್ಣವರ್ಣೀಯ ಸಾಧಕರಲ್ಲಿ
ಅಗ್ರಗಣ್ಯ. ವಿಶ್ವಸಂಸ್ಥೆಯ ಸ್ಥಾಪಕರಲ್ಲಿ ಪ್ರಮುಖ. ರಾಲ್ಫ್ ನ ತಂದೆ ಕಡುಬಡವ. ಮಗನಿಗೆ ಒಂದು ಗೊಂಬೆ ತಂದು ಕೊಡಲೂ ಅವನ ಬಳಿ ಕಾಸಿರಲಿಲ್ಲ. ಅದೊಮ್ಮೆ, ತಂದೆ ತಂದುಕೊಟ್ಟ ಒಂದೇ ಆಟಿಕೆಗಾಗಿ ರಾಲ್ಫ್ ಮತ್ತು ಅವನ ಸೋದರ ಕಿತ್ತಾಡಿಕೊಂಡರು. ನನಗೆ! ನನಗೆ! ಎಂಬ ಕಿರುಚಾಟದಲ್ಲಿ ಮನೆ ರಣರಂಗವಾಯಿತು.
ರಾಲ್ಫ್ ನ ತಂದೆ ಮಕ್ಕಳಿಬ್ಬರಿಗೂ ಒಂದು ಕರಾರು ಹಾಕಿದರು. ಈ ಆಟಿಕೆಯನ್ನು ಇಬ್ಬರೂ ಒಂದೊಂದು ವಾರದಂತೆ ಸರತಿಯಲ್ಲಿ ತೆಗೆದುಕೊಳ್ಳಿ. ಒಂದು ವಾರ ನೀನು; ಅದರ ಮರುವಾರ ಅವನು. ಆಟಿಕೆ ಜೊತೆ ಆಡುವ ಸಮಯ ಮುಗಿದವರು, ಮುಂದಿನ ಒಂದು ವಾರ ಅದನ್ನು ಮುಟ್ಟುವ ಹಾಗಿಲ್ಲ. ಹಾಗೇ ಇನ್ನೊಂದು ಮಾತು: ಆಟಿಕೆ ಜೊತೆ ಆಡುವ ಅವಕಾಶ ಯಾರಿಗೆ ಬಂದಿದೆಯೋ ಅವರು, ಆ ಒಂದು ವಾರ ಕಾಡಿಂದ ಸೌದೆ ತರುವ ಕೆಲಸವನ್ನೂ ಮಾಡಬೇಕು. ಹುಡುಗರಿಗೆ ಈ ಒಪ್ಪಂದ ಹಿಡಿಸಿತು. ಮೊದಲ ವಾರ ಬಂಚೆ ಆಟಿಕೆಯ ಜೊತೆ ಬಿಟ್ಟೂಬಿಡದೆ ಆಡಿದ. ಸಂಜೆಯ ಹೊತ್ತು ಕಾಡಿಂದ ಸೌದೆಯನ್ನೂ ತಂದುಹಾಕಿದ. ಅದರ ಮರುವಾರ ಅವನ ಸೋದರನಿಗೆ ದಕ್ಕಿತು. ಆಟಿಕೆಯ ಜೊತೆ ಸಮಯ ಕಳೆಯುವ ಅವಕಾಶ ಮತ್ತು ಕಾಡಿಂದ ಸೌದೆ ತರುವ ಕೆಲಸ.
ಹೀಗೆ ಎರಡೆರಡು ಪಾಳಿ ಆಗುವಷ್ಟರಲ್ಲಿ ಹುಡುಗರಿಬ್ಬರಿಗೂ ಈ ವ್ಯವಸ್ಥೆಯಲ್ಲಿ ಬೇಸರ ಬಂತು. ಆಡುವುದಕ್ಕೆ ಆಟಿಕೆಯೇನೋ ಸಿಗುತ್ತದೆ, ಆದರೆ ಒಬ್ಬರೇ ಆಡುವುದರಲ್ಲಿ ಏನು ಮಜಾ? ಹಾಗೆಯೇ ಒಬ್ಬರೇ ಕಾಡಿಂದ ಸೌದೆ ತರುವುದಕ್ಕಿಂತ ಇಬ್ಬರು ಕೆಲಸ ಹಂಚಿಕೊಂಡರೆ ಚೆನ್ನಾಗಿರುತ್ತಲ್ಲವೆ? ಅಂದುಕೊಂಡು, ಹಳೆಯ ಒಪ್ಪಂದ ಮುರಿದು, ಹೊಸದನ್ನು ತಾವಾಗೇ ಮಾಡಿಕೊಂಡರು: ಆಟಿಕೆಯನ್ನು ಇಬ್ಬರೂ ಜೊತೆಯಾಗೇ ಬಳಸುತ್ತಾ, ಸೌದೆ ತರಲು ಒಟ್ಟಿಗೇ ಹೋಗತೊಡಗಿದರು. ಜೀವನದ ಮಹತ್ವದ ಪಾಠವೊಂದನ್ನು ಕಲಿಸಿದ ಸಾರ್ಥಕ್ಯದಲ್ಲಿ, ತಂದೆ ದೂರದಲ್ಲಿ ನಿಂತು ನಗುತ್ತಿದ್ದ.
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.