PM ಆವಾಸ್ ಯೋಜನೆ: ಬಡವರ ಮೇಲಿನ ಹೊರೆ ಇಳಿಕೆ
Team Udayavani, Dec 23, 2023, 1:17 AM IST
ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ರಾಜ್ಯ ಹಾಗೂ ನೆರೆ ರಾಜ್ಯಗಳ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ನಿರೀಕ್ಷಿಸಲಾಗಿದೆ. ವಾರದ ಹಿಂದೆಯೇ ಪ್ರಮುಖ ರೆಸಾರ್ಟ್, ವಸತಿಗೃಹ, ಕ್ಲಬ್, ಹೋಂ ಸ್ಟೇಗಳಲ್ಲಿ ಮುಂಗಡ ಬುಕ್ಕಿಂಗ್ ಪರಿಣಾಮ ಬಹುತೇಕ ಕೊಠಡಿಗಳು ಭರ್ತಿಯಾಗಿದ್ದು, ಪ್ರವಾಸೋದ್ಯಮ ಗರಿಗೆದರುವಂತೆ ಮಾಡಿದೆ. ಹೊಸ ವರ್ಷಕ್ಕೆ ರೆಸಾರ್ಟ್, ಕ್ಲಬ್‌ಗಳು ಬಗೆ ಬಗೆಯ ಆಫರ್‌ಗಳನ್ನು ನೀಡುವ ಮೂಲಕ ಪ್ರವಾಸಿಗರನ್ನು ಸೆಳೆಯುತ್ತಿವೆ.
ಸ್ವಂತ ಸೂರೊಂದನ್ನು ಹೊಂದುವ ನಗರ ಪ್ರದೇಶಗಳ ಬಡವರ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾದಂತೆ ಕಾಣುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಗರ ಪ್ರದೇಶಗಳ ಕೊಳೆಗೇರಿ ನಿವಾಸಿಗಳಿಗೆ ಮನೆಗಳ ನಿರ್ಮಾಣ ಯೋಜನೆಗೆ ಫಲಾನುಭವಿಗಳ ವಂತಿಗೆಯಾಗಿ ರಾಜ್ಯ ಸರಕಾರ ಒಟ್ಟು 6,170 ಕೋ. ರೂ.ಗಳನ್ನು ಪಾವತಿಸಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಸರಕಾರದ ಈ ಮಹತ್ವದ ನಿರ್ಧಾರರಿಂದಾಗಿ ಬಡವರ ಮೇಲಿನ ಆರ್ಥಿಕ ಹೊರೆ ಇಳಿಕೆಯಾಗಿರುವುದೇ ಅಲ್ಲದೆ ಕಳೆದ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿರುವ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡು ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಮನೆಗಳು ಹಸ್ತಾಂತರಗೊಳ್ಳುವ ನಿರೀಕ್ಷೆ ಮೂಡಿದೆ.
ಪಿಎಂ ಆವಾಸ್ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತೀ ಮನೆಗೆ ತಲಾ ಒಂದೂವರೆ ಲಕ್ಷ ರೂ.ಗಳನ್ನು ಪಾವತಿಸಿದರೆ ಫಲಾನುಭವಿಗಳು 4.50 ಲಕ್ಷ ರೂ.ಗಳನ್ನು ಪಾವತಿಸಬೇಕಾಗಿತ್ತು. ಅದರಂತೆ 9 ವರ್ಷಗಳ ಹಿಂದೆಯೇ ಈ ಯೋಜನೆಗೆ ಚಾಲನೆ ನೀಡಲಾಗಿತ್ತಲ್ಲದೆ 1,80,253 ಮನೆಗಳನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ ಫಲಾನುಭವಿಗಳಿಗೆ 4.50 ಲಕ್ಷ ರೂ. ವಂತಿಗೆ ಪಾವತಿಸುವುದು ಬಲುದೊಡ್ಡ ಹೊರೆಯಾಗಿ ಪರಿಣ ಮಿಸಿ ದ್ದರಿಂದ ಮನೆಗಳ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿತ್ತು. ವಸತಿ ಇಲಾಖೆಯ ಪ್ರಸ್ತಾವನೆಯಂತೆ ರಾಜ್ಯ ಸಚಿವ ಸಂಪುಟ, ಅರ್ಧಕ್ಕೆ ನಿಂತಿರುವ ಮನೆ ಗಳನ್ನು ಪೂರ್ಣಗೊಳಿಸಲು 500 ಕೋ. ರೂ.ಗಳನ್ನು ಮಂಜೂರು ಮಾಡಿದೆ. ಇದರಿಂದ ಫೆಬ್ರವರಿ ವೇಳೆಗೆ ಸುಮಾರು 50,000ದಷ್ಟು ಮನೆಗಳ ಕಾಮ ಗಾರಿ ಪೂರ್ಣಗೊಂಡು ಫಲಾನುಭವಿಗಳಿಗೆ ಹಸ್ತಾಂತರಿಸಲ್ಪಡಲಿದೆ. ಯೋಜನೆಯಡಿ ನಿರ್ಮಾಣಗೊಳ್ಳಬೇಕಿರುವ ಉಳಿದ ಮನೆಗಳ ಕಾಮಗಾರಿಗೆ ಹಂತಹಂತವಾಗಿ ಹಣ ಬಿಡುಗಡೆ ಮಾಡಲು ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ.
ಈಗಾಗಲೇ ಕೆಲವು ಫಲಾನುಭವಿಗಳು ಈ ಹಿಂದೆ ನಿಗದಿಪಡಿಸಿದಂತೆ ತಮ್ಮ ಪಾಲಿನ 4.50 ಲ. ರೂ. ವಂತಿಗೆಯನ್ನು ಪಾವತಿಸಿದ್ದು, ಈ ಹೆಚ್ಚುವರಿ ಮೊತ್ತವನ್ನು ಅವರಿಗೆ ಹಿಂದಿರುಗಿಸುವ ಕಾರ್ಯವನ್ನು ವಸತಿ ಇಲಾಖೆ ಆದ್ಯತೆಯ ಮೇಲೆ ಮಾಡಬೇಕು. ಇಲ್ಲವಾದಲ್ಲಿ ಇದು ತಾರತಮ್ಯಕ್ಕೆ ಕಾರಣವಾದೀತು. ಇನ್ನು ಕೇಂದ್ರ ಸರಕಾರ ಶೇ.18ರಷ್ಟು ಜಿಎಸ್‌ಟಿ ವಿನಾಯಿತಿಯನ್ನು ನೀಡಿದ್ದೇ ಆದಲ್ಲಿ ಯೋಜನೆಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಹಾಯಕವಾಗಲಿದೆ.
ಇನ್ನು ಈ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಒಂದಿಷ್ಟು ಗೊಂದಲ, ಅಕ್ರಮಗಳು ನಡೆದಿರುವ ಬಗೆಗೆ ಈ ಹಿಂದೆಯೇ ಆರೋಪಗಳು ಕೇಳಿಬಂದಿದ್ದು ಈ ಬಗ್ಗೆ ರಾಜ್ಯ ಸರಕಾರ ಪುನರ್ ಪರಿಶೀಲನೆ ನಡೆಸಿ ಅರ್ಹರಿಗಷ್ಟೇ ಈ ಮನೆಗಳು ಹಂಚಿಕೆಯಾಗುವುದನ್ನು ಖಾತರಿಪಡಿಸಬೇಕು. ಫಲಾನುಭವಿಗಳ ಸುರಕ್ಷೆಯ ದೃಷ್ಟಿಯಿಂದ ಮತ್ತು ಮನೆ ನಿರ್ಮಾಣ ಕಾಮಗಾರಿ ಕಳೆದ ಹಲವಾರು ವರ್ಷಗಳಿಂದ ಅರ್ಧಂಬರ್ಧ ಸ್ಥಿತಿಯಲ್ಲಿರುವುದರಿಂದ ಇಡೀ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದ ಬಳಿಕವೇ ಕಾಮಗಾರಿಯನ್ನು ಪುನರಾರಂಭಿಸಬೇಕು. ಮನೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವುದರ ಜತೆಯಲ್ಲಿ ಈ ಮನೆಗಳು ನಿರ್ಮಾಣಗೊಂಡಿರುವ ಪ್ರದೇಶಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಸರಕಾರ ಹೆಚ್ಚಿನ ಆಸ್ಥೆ ವಹಿಸಬೇಕು. ಹೀಗಾದಲ್ಲಿ ಮಾತ್ರವೇ ಸರಕಾರದ ಜನಪರ ಯೋಜನೆ ಸಾರ್ಥಕಗೊಳ್ಳಲು ಸಾಧ್ಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.