ಪರಂಪರೆ, ಸಂಸ್ಕೃತಿ ಪುನರುತ್ಥಾನ; ನೇರ ಪ್ರಸಾರ ಸಂದರ್ಭ ನಳಿನ್ ಕುಮಾರ್ ಕಟೀಲು
Team Udayavani, Dec 14, 2021, 5:40 AM IST
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯ ಜತೆಗೆ ನಮ್ಮ ಪರಂಪರೆ, ಸಂಸ್ಕೃತಿಯ ಪುನರುತ್ಥಾನ ಕಾರ್ಯದ ಮೂಲಕ ವಿಶ್ವವಂದ್ಯ ಭಾರತ ಗುರಿ ಯನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ವಾರಾಣಸಿಯಲ್ಲಿ ಸೋಮವಾರ ಜರಗಿದ ಕಾಶೀ ನಗರ ಪುನರುತ್ಥಾನ ಲೋಕಾರ್ಪಣೆ ಕಾರ್ಯಕ್ರಮ “ಭವ್ಯಕಾಶಿ -ದಿವ್ಯಕಾಶಿ’ಯ ನೇರಪ್ರಸಾರವನ್ನು ನಗರದ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆವರಣದಲ್ಲಿ ಆಯೋಜಿಸಲಾಗಿದ್ದು, ಅದರ ಉದ್ಘಾಟನ ಕಾರ್ಯಕ್ರಮದಲ್ಲಿ ನಳಿನ್ ಮಾತನಾಡಿದರು.
ಮೋದಿ ಮುಂದಿನ ಗುರಿ ಮಥುರೆಯ ಪುನರುತ್ಥಾನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭ, ಕೇದಾರನಾಥ ಕ್ಷೇತ್ರ ಪುನರ್ ನಿರ್ಮಾಣ, ಶಂಕರಾಚಾರ್ಯರ ಪ್ರತಿಮೆ ಅನಾವರಣ, ಪುಣ್ಯಭೂಮಿ ಕಾಶೀನಗರದ ಪುನರುತ್ಥಾನ, ಸ್ವತ್ಛ ಗಂಗೆ ಸೇರಿದಂತೆ ದೇಶದ ಪರಂಪರೆಯ ಪ್ರತೀಕವಾಗಿರುವ ಶ್ರದ್ಧಾ ಕೇಂದ್ರಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ಆಗಿದೆ. ಮೋದಿ ಅವರ ಮುಂದಿನ ಗುರಿ ಮಥುರೆಯ ಪುನರುತ್ಥಾನ ಎಂದರು.
ದೇಶ ಹೆಮ್ಮೆ ಪಡುವ ವಿಚಾರ
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಶ್ರೀ ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಮಾತ ನಾಡಿ, ಅಧಾ¾ತ್ಮ, ಧರ್ಮ ನಮ್ಮ ದೇಶದ ಜೀವಾಳ. ಅನೇಕ ಆಕ್ರಮಣಗಳನ್ನು ಎದುರಿಸಿಯೂ ಭಾರತ ಎದ್ದು ನಿಂತಿದೆ. ಪ್ರಧಾನಿ ಮೋದಿ ಅವರ ಶ್ರಮದ ಫಲವಾಗಿ ಕಾಶೀ ನಗರ ಪುನರುತ್ಥಾನಗೊಳ್ಳುತ್ತಿದೆ. ಇದು ಎಲ್ಲರಿಗೂ ಹೆಮ್ಮೆಯ ವಿಚಾರ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಮಾತನಾಡಿ, ಭಾರತ ಅಧ್ಯಾತ್ಮ ತಳಹದಿಯ ಮೇಲೆ ನಿಂತಿದೆ. ಅನೇಕ ವಿದೇಶಿಗರ ದಾಳಿಗಳಲ್ಲಿ ನಮ್ಮ ದೇಶದ ಸಂಪತ್ತು ನಾಶವಾಗಿರಬಹುದು. ಆದರೆ ಸಂಸ್ಕೃತಿಯನ್ನು ನಾಶ ಮಾಡಲು
ಸಾಧ್ಯವಾಗಿಲ್ಲ. ಪ್ರಧಾನಿ ಮೋದಿ ಅವರು ದೇಶದ ಜನರ ಆಶೋತ್ತರಗಳನ್ನು ಈಡೇರಿಸುತ್ತಿದ್ದಾರೆ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಕಾರ್ಪೊರೇಟರ್ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.ರೂಪಾ ಡಿ. ಬಂಗೇರ ಸ್ವಾಗತಿಸಿ, ಸುರೇಂದ್ರ ವಂದಿಸಿದರು.
ಇದನ್ನೂ ಓದಿ:ಅರಣ್ಯ ಪ್ರದೇಶದಲ್ಲಿ ಸಾಗುವಳಿ ಸಕ್ರಮ ಮಾಡಲು ಅವಕಾಶವಿಲ್ಲ: ಆರ್.ಅಶೋಕ್
ಲವ್ ಜೆಹಾದ್ ವಿರುದ್ಧ ಕಠಿನ ಕಾಯ್ದೆಗೆ ಆಗ್ರಹ
ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರಕಾರ ಕಾರ್ಯೋನ್ಮುಖವಾಗಿದೆ. ಇದೇ ರೀತಿ ರಾಜ್ಯದಲ್ಲಿ ಲವ್ ಜೆಹಾದ್ ವಿರುದ್ಧ ಕಠಿನ ಕಾಯ್ದೆ ಜಾರಿಗೊಳಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದೇನೆ. ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನಾಧಿಕಾರಿಗಳು ದುರಂತ ಸಾವನ್ನಪ್ಪಿರುವ ಘಟನೆಯನ್ನು ಸಂಭ್ರಮಿಸಿರುವ ವಿಕೃತ ಮನಸ್ಸುಗಳ ವಿರುದ್ಧ ರಾಷ್ಟ್ರ ದ್ರೋಹ ಅಪರಾಧ ಪ್ರಕರಣ ದಾಖಲಿಸಿ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.