ಹೊಸ ಸೌಲಭ್ಯಗಳ ಸಂಗಮದೊಂದಿಗೆ ಕಂಗೊಳಿಸಲಿರುವ ವಾರಾಣಸಿ
ಶಿವಲಿಂಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಕೇಂದ್ರದಲ್ಲಿ 1,200 ಮಂದಿಗೆ ಆಸನದ ವ್ಯವಸ್ಥೆಯಿದೆ.
Team Udayavani, Dec 13, 2021, 11:05 AM IST
ಉತ್ತರ ಪ್ರದೇಶದ ಅಯೋಧ್ಯೆಯಂತೆಯೇ ವಾರಾಣಸಿ ಕೂಡ ಅತ್ಯಂತ ಪವಿತ್ರ ಕ್ಷೇತ್ರ. ಅಯೋಧ್ಯೆಯ ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಮೋದಿಯವರು, ಅದೇ ಪ್ರಾಮುಖ್ಯವನ್ನು ವಾರಾಣಸಿಗೂ ಕೊಟ್ಟಿದ್ದಾರೆ. ತಮ ಪ್ರವಾಸಿ ಗರಿಗೆ, ಅಲ್ಲಿನ ಐತಿ ಹಾಸಿಕ ಮಹತ್ವ, ಪ್ರಸಿದ್ಧ 84 ಘಾಟ್‌ಗಳ ಕುರಿತಾದ ಸಂಪೂರ್ಣ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಮುಂದಾಳತ್ವ ತೆಗೆದುಕೊಳ್ಳಲಾಗಿದೆ.
ಗಮನ ಸೆಳೆದ ರುದ್ರಾಕ್ಷ
ಇತ್ತೀಚೆಗೆ ಪ್ರಧಾನಿಯವರು “ರುದ್ರಾಕ್ಷ’ ಹೆಸರಿನ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಶಿವಲಿಂಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಕೇಂದ್ರದಲ್ಲಿ 1,200 ಮಂದಿಗೆ ಆಸನದ ವ್ಯವಸ್ಥೆಯಿದೆ. ವಿಭಜಿಸಬಹುದಾದ ಮೀಟಿಂಗ್ ರೂಂಗಳು, ಆರ್ಟ್ ಗ್ಯಾಲರಿ ಹೀಗೆ ಹಲವು ಆಧುನಿಕ ತಂತ್ರಜ್ಞಾನವುಳ್ಳ ಸೌಲಭ್ಯಗಳು ಇದರಲ್ಲಿದೆ.
ಮೆಡಿಕಲ್ ಹಬ್ ಆಗಿ ಪರಿವರ್ತನೆ
ವಾರಾಣಸಿ ನಗರವನ್ನು ವೈದ್ಯಕೀಯ ಹಬ್ ಆಗಿಯೂ ಪರಿವರ್ತಿಸಲಾಗಿದೆ. ತುರ್ತು ವೈದ್ಯಕೀಯ ಸೇವೆಗಾಗಿ ಬಿಎಚ್‌ಯು ಟ್ರಾಮಾ ಸೆಂಟರ್ ಉದ್ಘಾಟಿಸಲಾಗಿದೆ. ಟ್ರಾಮಾ ಸೆಂಟರ್‌ಗಳ ತುರ್ತು ಸೇವಾ ಘಟಕದಲ್ಲಿರುವ ಹಾಸಿಗೆಗಳ ಸಂಖ್ಯೆಯನ್ನು 4ರಿಂದ 20ಕ್ಕೆ ಏರಿಸಲಾಗಿದೆ. ಎರಡು ಕ್ಯಾನ್ಸರ್ ಆಸ್ಪತ್ರೆಗಳನ್ನೂ ಇದೇ ನಗರದಲ್ಲಿ ಸ್ಥಾಪಿಸಲಾಗಿದ್ದು, ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ರೋಗಿಗಳಿಗೂ ಚಿಕಿತ್ಸೆ ಕೊಡಲಾಗುತ್ತಿದೆ.
ರಸ್ತೆ ಅಭಿವೃದ್ಧಿಯಲ್ಲೂ ಮುಂದು
ವಾರಾಣಸಿಯಲ್ಲಿ 1,572 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 34 ಕಿ.ಮೀ. ಉದ್ದದ 2 ಪ್ರಮುಖ ರಸ್ತೆಗಳನ್ನು ಪ್ರಧಾನಿಯವರು ಇತ್ತೀಚೆಗೆ ಉದ್ಘಾಟಿಸಿದರು. 16.55 ಕಿ.ಮೀ.ನ ವಾರಾಣಸಿ ರಿಂಗ್ ರೋಡ್‌ನ ಮೊದಲನೇ ಹಂತವನ್ನು 759 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದರೆ, ಬಬಾತು³ರ- ವಾರಾಣಸಿ ಚತುಷ್ಪಥ ಹೆದ್ದಾರಿಯನ್ನು 812 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅದೇ ರೀತಿ ವಾರಾ ಣಸಿ-ಪ್ರಯಾಗ್‌ರಾಜ್ ನಡುವಿನ ಎನ್‌ಎಚ್-19ರಲ್ಲಿ ಷಟ³ಥ ಹೆದ್ದಾ ರಿಯ ಕಾಮಗಾರಿ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.