ಬಿಹಾರ: ಹೆದ್ದಾರಿ, ಇಂಟರ್ನೆಟ್ ಯೋಜನೆಗೆ ಪ್ರಧಾನಿ ಚಾಲನೆ
45,945 ಹಳ್ಳಿಗಳ ಮನೆಗಳಿಗೆ ಇಂಟರ್ನೆಂಟ್ ಸೌಕರ್ಯ ನೀಡುವ ಉದ್ದೇಶದ ಫೈಬರ್ ಇಂಟರ್‌ನೆಟ್ ಯೋಜನೆಗೂ ಚಾಲನೆ
Team Udayavani, Sep 22, 2020, 10:04 AM IST
ನವದೆಹಲಿ: ಬಿಹಾರದಲ್ಲಿ ಅಂದಾಜು 14,258 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಒಂಭತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ನರೇಂದ್ರಮೋದಿಯವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಅದರ ಜೊತೆಗೆ, ಬಿಹಾರದ 45,945 ಹಳ್ಳಿಗಳ ಮನೆಗಳಿಗೆ ಇಂಟರ್ನೆಂಟ್ ಸೌಕರ್ಯ ನೀಡುವ ಉದ್ದೇಶದ ಫೈಬರ್ ಇಂಟರ್‌ನೆಟ್ ಯೋಜನೆಗೂ ಚಾಲನೆ ನೀಡಿದರು.ಈಸಂದರ್ಭದಲ್ಲಿ ಮಾತನಾಡಿದ ಅವರು, “”2014ರಲ್ಲಿ ತಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹೆದ್ದಾರಿಗಳ ನಿರ್ಮಾಣ ವೇಗ ದುಪ್ಪಟ್ಟಾಗಿದ್ದು, ಅವುಗಳಿಗಾಗಿ ಮೀಸಲಿಡಲಾಗುತ್ತಿದ್ದ ಹಣ ಐದು ಪಟ್ಟು ಹೆಚ್ಚಾಗಿದೆ.
ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಮೂಲ ಸೌಕರ್ಯಾಭಿವೃದ್ಧಿಗೆ 110 ಲಕ್ಷ ಕೋಟಿ ರೂ.ಗ ಳನ್ನು ಮೀಸಲಿಡಲು ನಿರ್ಧರಿಸಿದ್ದು, ಅದರಲ್ಲಿ 19 ಲಕ್ಷ ಕೋಟಿ ರೂ.ಗ ಳನ್ನು ಹೆದ್ದಾರಿ ನಿರ್ಮಾಣಕ್ಕಾಗಿಯೇ ಬಳಸಲಾಗುತ್ತದೆ” ಎಂದರು.
ಕೇರಳದ 10 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ತಿರುವನಂತಪುರಂ: ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿ ಪುನಃ ವಾಯುಭಾರ ಕುಸಿತ ಉಂಟಾಗಿರುವ ಕಾರಣ, ಕೇರಳದಲ್ಲಿ ಮುಂದಿನ 2-3 ದಿನಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಪಾಲ ಕ್ಕಾಡ್, ಮಲಪ್ಪುರಂ, ಕಲ್ಲಿಕೋಟೆ, ವಯನಾಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಭಾನುವಾರ-ಸೋಮವಾರ ರಾಜ್ಯಾದ್ಯಂತ ಸರಾಸರಿ 7 ಸೆಂ.ಮೀ. ಮಳೆಯಾಗಿದೆ. ತಿರುವನಂತಪುರದಲ್ಲಿ ಒಬ್ಬರು ಹಾಗೂ ಕಾಸರಗೋಡಿನಲ್ಲಿ ಇಬ್ಬರು ಮಳೆ ಸಂಬಂಧಿತ ಅವ ಘಡದಲ್ಲಿ ಸಾವನ್ನಪ್ಪಿದ್ದಾರೆ. ಕಾಸರಗೋಡಿನಲ್ಲಿ ಎಂಟು ಮನೆಗಳುಕುಸಿದುಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲೂ ವರ್ಷಧಾರೆ:ಮಧ್ಯಪ್ರದೇಶದಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಸಿಯೋನಿ, ಮಾಂಡ್ಲಾ, ಬಾಲಾಘಾಟ್, ಜಿಲ್ಲೆಗ ಳಲ್ಲಿ “ಆರೆಂಜ್ ಅಲರ್ಟ್’ ಘೋಷಿಸ ಲಾಗಿದೆ. ಜಬಲ್ಪುರ್ ಸೇರಿದಂತೆ ಏಳು ಜಿಲ್ಲೆ ಗಳಲ್ಲಿ “ಯೆಲ್ಲೋ ಅಲರ್ಟ್’ ಘೋಷಿಸಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.