PM ವಿಶ್ವಕರ್ಮ ಯೋಜನೆ: ಸಾಂಪ್ರದಾಯಿಕ ವೃತ್ತಿನಿರತರಿಗೆ ಕೌಶಲದೊಂದಿಗೆ ಆರ್ಥಿಕ ಬಲ


Team Udayavani, Sep 30, 2023, 12:03 AM IST

PM VISHWAKARMA

ದೇಶದ ಅರ್ಥ ವ್ಯವಸ್ಥೆಗೆ ಬಲ ತುಂಬುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಮಹತ್ವಾಕಾಂಕ್ಷೆ ಹೊಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಕೇಂದ್ರ ಸರಕಾರ ಚಾಲನೆ ನೀಡಿದೆ. ಈ ಯೋಜನೆಯ ಉದ್ದೇಶವೇನು?, ಯೋಜನೆಯ ನೆರವನ್ನು ಯಾರೆಲ್ಲ ಪಡೆಯಬಹುದು?, ಅದರಿಂದ ಏನೇನು ಲಾಭವಿದೆ? ಎಂಬೆಲ್ಲ ಮಾಹಿತಿಗಳು ಇಲ್ಲಿವೆ.

ಏನಿದು ವಿಶ್ವಕರ್ಮ ಯೋಜನೆ

ಹಲವು ವೈವಿಧ್ಯತೆಯನ್ನು ಹೊಂದಿರುವ ದೇಶದ ಪ್ರತೀ ಪ್ರಾಂತದಲ್ಲಿಯೂ ಒಂದೊಂದು ವಿಶೇಷ ಕರಕುಶಲ ಕಲೆಗಳಿವೆ. ದೇಶದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಇಂತಹ 18 ವೃತ್ತಿಗಳವರಿಗೆ ಕೌಶಲ ಮತ್ತು ಆರ್ಥಿಕ ಬಲ ನೀಡಿ ಅವರ ಜೀವನ ಮಟ್ಟವನ್ನು ಸುಧಾರಿಸುವ ಜತೆಜತೆಗೆ ದೇಶದ ಆರ್ಥಿಕಾಭಿ ವೃದ್ಧಿಗೆ ಪೂರಕವಾಗುವ ಯೋಜನೆ ಇದಾಗಿದೆ.

ಹೇಗೆ ಅನುಕೂಲ?
ಈಗ ವೃತ್ತಿ ನಡೆಸುತ್ತಿರುವವರ ಕೌಶಲ ವೃದ್ಧಿಗೆ ಮುಖ್ಯವಾಗಿ ಈ ಯೋಜನೆಯಲ್ಲಿ ಗಮನ ನೀಡಲಾಗುತ್ತದೆ. ಅನಂತರ ಆರ್ಥಿಕ ಬಲ ನೀಡಲಾಗುತ್ತದೆ. ಬೇರೆ ಬೇರೆ ಕಡೆ ತಮ್ಮ ವೃತ್ತಿಯ ಪ್ರದರ್ಶನ, ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಈಗ ಯಾವ ವೃತ್ತಿ ಮಾಡುತ್ತಿದ್ದಾರೆಯೋ ಅವರಿಗೆ ಪ್ರಾರಂಭಿಕವಾಗಿ ಒಂದು ವಾರದ ಅಂದರೆ ಕನಿಷ್ಠ 40 ಗಂಟೆಗಳ ಪ್ರಾಥಮಿಕ ತರಬೇತಿ ನೀಡಿ ಅವರ ಕೌಶಲ ವೃದ್ಧಿಗೆ ನೆರವಾಗುವುದು. ಆಸಕ್ತರು ಎರಡು ವಾರಗಳ ಅಂದರೆ 120 ಗಂಟೆಗಳ ಅವಧಿಯ ತರಬೇತಿ ಪಡೆಯುವುದಕ್ಕೂ ಅವಕಾಶವಿರುತ್ತದೆ. ನೀವು ಉತ್ಪಾದಿಸುವ ವಸ್ತುಗಳಿಗೆ ಕೇಂದ್ರ ಸರಕಾರವೇ ಜಾಹೀರಾತು, ಇ ಮಾರುಕಟ್ಟೆ, ಪ್ರದರ್ಶನ ಮತ್ತು ಬ್ರ್ಯಾಂಡಿಂಗ್‌ಗೆ ವ್ಯವಸ್ಥೆ ಮಾಡುತ್ತದೆ.

ಏನೇನು ಆರ್ಥಿಕ ನೆರವು?
ತರಬೇತಿ ಅವಧಿಯಲ್ಲಿ ದಿನಕ್ಕೆ 500 ರೂ.ಗಳಂತೆ ತರಬೇತಿ ಭತ್ತೆ ನೀಡಲಾಗುತ್ತದೆ. ಅನಂತರ ವೃತ್ತಿಗೆ ಸಂಬಂಧಿಸಿದ ಸುಧಾರಿತ ಸಾಮಗ್ರಿ ಖರೀದಿಗೆ 15,000 ರೂ.ಗಳ ಅನುದಾನ ನೀಡಲಾಗುತ್ತದೆ. ತರಬೇತಿ ಮುಗಿಸಿದ ಬಳಿಕ ಸರಕಾರವು ಮೊದಲ ಹಂತದಲ್ಲಿ ಒಂದು ಲಕ್ಷ ರೂ. ಹಾಗೂ ಅದನ್ನು ಮರುಪಾವತಿಸಿದ ಬಳಿಕ ಎರಡನೇ ಹಂತದಲ್ಲಿ ಎರಡು ಲಕ್ಷ ರೂ. ಸಾಲವನ್ನು ಶೇ. 5ರ ಕಡಿಮೆ ಬಡ್ಡಿಯಲ್ಲಿ ನೀಡುತ್ತದೆ. ಮೊದಲ ಹಂತದ ಸಾಲ ಮರುಪಾವತಿಗೆ 18 ತಿಂಗಳು ಹಾಗೂ ಎರಡನೇ ಹಂತದ ಸಾಲ ಮರುಪಾವತಿಗೆ 30 ತಿಂಗಳ ಕಾಲವಕಾಶವಿರುತ್ತದೆ. ಇನ್ನು ಡಿಜಿಟಲ್‌ ಪಾವತಿಗೂ ಪ್ರೋತ್ಸಾಹ ಇದೆ. ಪ್ರತೀ ಡಿಜಿಟಲ್‌ ವ್ಯವಹಾರಕ್ಕೆ ಒಂದು ರೂ.ನಂತೆ ಸರಕಾರ ನೀಡುತ್ತದೆ. ಈ ಸಾಲ ಪಡೆಯಲು ಯಾವುದೇ ರೀತಿಯ ಜಾಮೀನು ಬೇಕಾಗಿಲ್ಲ. ಯೋಜನೆಗೆ ಅರ್ಹರಾದ ಕೂಡಲೇ ಸ್ಥಳೀಯ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ದೊರಕುತ್ತದೆ.

ಯಾವೆಲ್ಲ ಕುಶಲಕರ್ಮಿಗಳು?
ದೇಶಾದ್ಯಂತದ ಒಟ್ಟು 18 ವೃತ್ತಿಯವರನ್ನು ಈ ಯೋಜನೆಗೆ ಸೇರಿಸಲಾಗಿದೆ. ಬಡಗಿಗಳು, ದೋಣಿ ತಯಾರಕರು, ಕುಲುಮೆ ಕೆಲಸಗಾರರು, ಕಮ್ಮಾರರು, ಬುಟ್ಟಿ-ಚಾಪೆ, ಬಾಸ್ಕೆಟ್‌ ನೇಯ್ಗೆ
ಗಾರರು, ಅಕ್ಕಸಾಲಿಗರು, ಅಗಸರು, ಶಿಲ್ಪಿಗಳು, ಸಾಂಪ್ರದಾಯಿಕ ಗೊಂಬೆ ತಯಾರಕರು, ಕುಂಬಾರರು, ಚಮ್ಮಾರರು, ದರ್ಜಿಗಳು, ಕೇಶ ವಿನ್ಯಾಸಕರು, ಗಾರೆಗಾರರು, ಮಾಲೆ ತಯಾರಕರು, ಮೀನುಗಾರಿಕೆ ಬಲೆ ತಯಾರಕರು.

ಅರ್ಹತೆಗಳೇನು?
ಸರಕಾರ ನಿಗದಿಪಡಿಸಿರುವ ಪಾರಂಪರಿಕ ಕೆಲಸ ಕಾರ್ಯ ಮಾಡು ತ್ತಿರುವ ಭಾರತೀಯರೆಲ್ಲರೂ ಅರ್ಹರು. ಮುಖ್ಯವಾಗಿ ಅವರಿಗೆ ವೃತ್ತಿ ಅನುಭವ ಇರಬೇಕು. 18 ವರ್ಷ ದಾಟಿದ್ದು, ಇತರ ಯೋಜನೆಗಳಾದ ಪಿಎಂಇಜಿಪಿ, ಪಿಎಂ ಸ್ವನಿಧಿ, ಮುದ್ರಾ ಯೋಜನೆಯ ಫ‌ಲಾನುಭವಿ ಆಗಿರಬಾರದು. ಒಂದು ಕುಟುಂಬದ ಓರ್ವ ಮಾತ್ರ ಯೋಜನೆಗೆ ಅರ್ಹ. ಸರಕಾರಿ ನೌಕರರು ಯೋಜನೆಗೆ ಅರ್ಹರಲ್ಲ.

ಅರ್ಹತೆಗಳೇನು?
ಸರಕಾರ ನಿಗದಿಪಡಿಸಿರುವ ಪಾರಂಪರಿಕ ಕೆಲಸ ಕಾರ್ಯ ಮಾಡು ತ್ತಿರುವ ಭಾರತೀಯರೆಲ್ಲರೂ ಅರ್ಹರು. ಮುಖ್ಯವಾಗಿ ಅವರಿಗೆ ವೃತ್ತಿ ಅನುಭವ ಇರಬೇಕು. 18 ವರ್ಷ ದಾಟಿದ್ದು, ಇತರ ಯೋಜನೆಗಳಾದ ಪಿಎಂಇಜಿಪಿ, ಪಿಎಂ ಸ್ವನಿಧಿ, ಮುದ್ರಾ ಯೋಜನೆಯ ಫ‌ಲಾನುಭವಿ ಆಗಿರಬಾರದು. ಒಂದು ಕುಟುಂಬದ ಓರ್ವ ಮಾತ್ರ ಯೋಜನೆಗೆ ಅರ್ಹ. ಸರಕಾರಿ ನೌಕರರು ಯೋಜನೆಗೆ ಅರ್ಹರಲ್ಲ.

ಅರ್ಜಿ ಸಲ್ಲಿಕೆ ಹೇಗೆ?
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಆಧಾರ್‌ ಕಾರ್ಡ್‌, ಓಟರ್‌ ಕಾರ್ಡ್‌, ವೃತ್ತಿಗೆ ಸಂಬಂಧಿಸಿದ ದಾಖಲೆ, ಮೊಬೈಲ್‌ ಸಂಪರ್ಕ, ಬ್ಯಾಂಕ್‌ ಅಕೌಂಟ್‌, ರೇಶನ್‌ ಕಾರ್ಡ್‌, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ). ಇವಿಷ್ಟನ್ನು ಸಿದ್ಧವಾಗಿರಿಸಿಕೊಂಡು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (https://pmvishwakarma.gov.in/ ) ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ನೀಡಿರುವ ಮಾಹಿತಿಯಂತೆ ಮುಂದುವರಿಯಬೇಕು. ಮೊಬೈಲ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ಸ್ಥಳೀಯವಾಗಿರುವ ಕಾಮನ್‌ ಸರ್ವಿಸ್‌ ಸೆಂಟರ್‌ (ಸಿಎಸ್‌ಸಿ)ಗಳಿಗೆ ಭೇಟಿ ನೀಡಿ ಅಲ್ಲಿಯೂ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್‌ಗೆ ಭೇಟಿ ನೀಡಿ ಮೊಬೈಲ್‌ ನಂಬರ್‌ ಮತ್ತು ಆಧಾರ್‌ ಕಾರ್ಡ್‌ ನಂಬರ್‌ ದಾಖಲಿಸಬೇಕು. ಅನಂತರ ಒಟಿಪಿ ಮೂಲಕ ಅದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಅನಂತರ ನೋಂದಣಿ ಅರ್ಜಿ ಸ್ಕ್ರೀನ್‌ನಲ್ಲಿ ತೆರೆಯುತ್ತದೆ. ಅಂತರ ಮೂಲ ಮಾಹಿತಿಗಳನ್ನು ದಾಖಲಿಸಿ ಸಬ್‌ಮಿಟ್‌ ಮಾಡಬೇಕು. ಈ ಹಂತದಲ್ಲಿ ಡಿಜಿಟಲ್‌ ಐಡಿ ಕಾರ್ಡ್‌ ತಯಾರಾಗುತ್ತದೆ. ಇದನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಬೇಕು. ಇದಾದ ಬಳಿಕ ನೀವು ಯಾವ ವೃತ್ತಿಯ ಅಡಿ ನೋಂದಣಿಯಾಗುವಿರಿ ಎಂಬುದನ್ನು ಆರಿಸಿಕೊಂಡು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು. ಈ ಅರ್ಜಿಯನ್ನು ಗ್ರಾಮ ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಿ ನೀವು ಯೋಜನೆಯ ಫ‌ಲಾನುಭವಿಗಳಾಗಲು ಅರ್ಹರಾಗಿರುವಿರಾ ಎಂದು ಖಚಿತಪಡಿಸಲಾಗುತ್ತದೆ.

ಟಾಪ್ ನ್ಯೂಸ್

DVG-1

Davanagere: ನಾಪತ್ತೆಯಾಗಿದ್ದ ವ್ಯಕ್ತಿ ಅಣಜಿ ಕೆರೆ ಬಳಿ ಅಸ್ಥಿಪಂಜರವಾಗಿ ಪತ್ತೆ!

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Many leaders left BJP and joined JMM

Jharkhand: ಬಿಜೆಪಿ ತೊರೆದು ಜೆಎಂಎಂ ಸೇರಿದ ಹಲವು ನಾಯಕರು!

Mandya; Kidnapper bites his hand and escapes; A cinematic kind of case

Mandya; ಕಿಡ್ನ್ಯಾಪರ್‌ ಕೈಗೆ ಕಚ್ಚಿ ತಪ್ಪಿಸಿಕೊಂಡ ಬಾಲಕ; ಸಿನಿಮೀಯ ರೀತಿಯ ಪ್ರಕರಣ

Vijayapura: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು, ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

Vijayapura: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು, ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

S.-Lad

By Poll: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ ಪಕ್ಷಕ್ಕೆ ಬಂದ್ರೆ ಸ್ವಾಗತಿಸುವೆ: ಸಂತೋಷ್ ಲಾಡ್‌

ಸತೀಶ್‌ ಜಾರಕಿಹೊಳಿ

Belagavi: ಸಿಪಿವೈ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಜ್ಬುಲ್ಲಾ ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು, ಅಪಾರ ಚಿನ್ನ ಪತ್ತೆ! ಇಸ್ರೇಲ್

Hezbollah ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು,ಚಿನ್ನ ಪತ್ತೆ! ಇಸ್ರೇಲ್

1-kittut

23 October 1824; ಕಿತ್ತೂರಿನ ಮೊದಲ ವಿಜಯೋತ್ಸವಕ್ಕೆ 200 ವರ್ಷ

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

Threats: ವಿಮಾನಗಳಿಗೆ ಹುಸಿ ಬಾಂ*ಬ್‌ ಬೆದರಿಕೆ; ಆರ್ಥಿಕ ಭಯೋತ್ಪಾದನೆ!?

Threats: ವಿಮಾನಗಳಿಗೆ ಹುಸಿ ಬಾಂ*ಬ್‌ ಬೆದರಿಕೆ; ಆರ್ಥಿಕ ಭಯೋತ್ಪಾದನೆ!?

Indian Railways: ಈ ವರ್ಷಾಂತ್ಯಕ್ಕೆ ಬರಲಿದೆ…ಹೈಡ್ರೋಜನ್‌ ರೈಲು!

Indian Railways: ಈ ವರ್ಷಾಂತ್ಯಕ್ಕೆ ಬರಲಿದೆ…ಹೈಡ್ರೋಜನ್‌ ರೈಲು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

kas-a

Kasaragod ಅಪರಾಧ ಸುದ್ದಿಗಳು

PKL 11: Hattrick defeat for Bengaluru Bulls

PKL 11: ಬುಲ್ಸ್‌ ಗೆ ಹ್ಯಾಟ್ರಿಕ್‌ ಸೋಲು

DVG-1

Davanagere: ನಾಪತ್ತೆಯಾಗಿದ್ದ ವ್ಯಕ್ತಿ ಅಣಜಿ ಕೆರೆ ಬಳಿ ಅಸ್ಥಿಪಂಜರವಾಗಿ ಪತ್ತೆ!

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Agriculture Minister Shivraj Chouhan to the budget announcement implementation committee

ಬಜೆಟ್‌ ಘೋಷಣೆ ಅನುಷ್ಠಾನ ಸಮಿತಿಗೆ ಕೃಷಿ ಸಚಿವ ಶಿವರಾಜ್‌ ಚೌಹಾಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.