Udupi: ಹಿರಿಯಡಕ ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಾಳಿ
Team Udayavani, Dec 9, 2024, 10:27 PM IST
ಉಡುಪಿ: ಹಿರಿಯಡಕ ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ಡಿ. 9ರಂದು ಸಂಜೆ ದಿಢೀರ್ ದಾಳಿ ನಡೆಸಿ ಕಾರಾಗೃಹದ ವಿವಿಧ ವಿಭಾಗಗಳಲ್ಲಿ ವ್ಯಾಪಕ ತಪಾಸಣೆ ನಡೆಸಿದರು.
ಎಡಿಶನಲ್ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಜೈಲಿನ ಎಲ್ಲ ವಿಭಾಗಗಳ ಪ್ರತಿಯೊಂದು ಕೊಠಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಗಾಂಜಾ, ಸಿಗರೇಟು, ತಂಬಾಕು, ಮೊಬೈಲ್ ಬಳಕೆ ಬಗ್ಗೆ ಪರಿಶೀಲಿಸಲಾಯಿತು. ಪರಿಶೀಲನೆ ವೇಳೆ ಪೊಲೀಸರಿಗೆ ಅಕ್ರಮ ಚಟುವಟಕೆಗೆ ಸಂಬಂಧಿಸಿ ನಿಷೇಧಿತ ಯಾವುದೇ ವಸ್ತುಗಳು ಲಭಿಸಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ರಾಜ್ಯದ ಕೆಲವು ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳ ಬಳಸುತ್ತಿರುವ ಬಗ್ಗೆ ಆರೋಪಗಳು ಬಂದು ಅಲ್ಲಲ್ಲಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ದಾಳಿಯಲ್ಲಿ ಡಿವೈಎಸ್ಪಿ ಪ್ರಭು ಡಿ.ಟಿ., ಮಲ್ಪೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್, ಮಣಿಪಾಲ ಠಾಣೆಯ ಎಸ್‌ಐ ದೇವರಾಜ್, ಹಿರಿಯಡಕ ಠಾಣೆಯ ಎಸ್‌ಐ ಕಸ್ತೂರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.