![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 24, 2023, 10:11 PM IST
ತಿರುವನಂತಪುರಂ: ಕಣ್ಣು ಅರಿಯದಿದ್ದರೂ, ಕರುಳು ಅರಿಯಬಲ್ಲದು ಎನ್ನುವ ಮಾತಿದೆ! ತಾಯಿಗೆ ಸಮನಾದ ದೇವರಿಲ್ಲ, ಆಕೆಗೆ ಎಲ್ಲವೂ ಅರ್ಥವಾಗಬಲ್ಲದು ಎನ್ನುವ ಈ ಮಾತಿಗೆ ಕೇರಳದ ಕೊಚ್ಚಿ ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಅಧಿಕಾರಿ ನೈಜ ನಿದರ್ಶನವಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ತಾಯಿಯೊಬ್ಬರ 4 ತಿಂಗಳ ಕೂಸಿಗೆ ಈ ಮಹಿಳಾ ಅಧಿಕಾರಿಯೇ ಎದೆಹಾಲುಣಿಸಿ ಮಾತೃಪ್ರೇಮ ಮೆರೆದಿದ್ದಾರೆ.
ಹೌದು, ಪಾಟ್ನಾ ಮೂಲದ ಮಹಿಳೆಯೊಬ್ಬರು ತೀವ್ರ ಅನಾರೋಗ್ಯದಿಂದ ಎರ್ನಾಕುಲಂನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಪತಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾರೆ. ಇದರಿಂದ ಅವರ 4 ಮಕ್ಕಳೂ ಬೀದಿ ಪಾಲಾಗುವ ಪರಿಸ್ಥಿತಿ ಬಂದೊದಗಿದೆ. ಈ ಮಕ್ಕಳನ್ನು ಠಾಣೆಗೆ ಕರೆತಂದು ಮಹಿಳಾ ಪೊಲೀಸರೇ ಆರೈಕೆ ಮಾಡಿದ್ದಾರೆ. ಈ ವೇಳೆ ಅಧಿಕಾರಿ ಎಂ.ಎ. ಆರ್ಯ ಎಂಬವರು ಅಳುತ್ತಿದ್ದ 4 ತಿಂಗಳ ಮಗುವಿಗೆ ಎದೆಹಾಲುಣಿಸಿ, ಆಡಿಸಿ, ನಿದ್ದೆಗೆ ಜಾರಿಸಿದ್ದಾರೆ. ಸ್ವತಃ 9 ತಿಂಗಳ ಮಗುವಿನ ತಾಯಿಯಾಗಿರುವ ಅಧಿಕಾರಿ, ಪರರ ಮಗುವಿನ ಹಸಿವನ್ನು ಅರ್ಥೈಸಿಕೊಂಡು ಮಾತೃಪ್ರೇಮ ತೋರಿರುವುದು ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ. ನಾಲ್ಕು ಮಕ್ಕಳನ್ನೂ ಆರೈಕೆ ಕೇಂದ್ರಗಳಿಗೆ ಕಳುಹಿಸಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.