US: ಪೊಲೀಸರ ಪೈರಿಂಗ್: ಕಪ್ಪು ಮಹಿಳೆ ಸಾವು
ಅಮೆರಿಕದ ಓಹಿಯೋ ನಗರದಲ್ಲಿ ಘಟನೆ: ಆ.24ರ ಘಟನೆ ತಡವಾಗಿ ಬೆಳಕಿಗೆ
Team Udayavani, Sep 3, 2023, 8:29 PM IST
ಓಹಿಯೋ: ಕಳ್ಳತನದ ಆರೋಪದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಕಪ್ಪು ಬಣ್ಣದ 21 ವರ್ಷದ ಗರ್ಭಿಣಿ ಬಲಿಯಾಗಿರುವ ಘಟನೆ ಅಮೆರಿಕದ ಓಹಿಯೋ ನಗರದಲ್ಲಿ ನಡೆದಿದೆ. ಟಕಿಯಾ ಮೃತ ಮಹಿಳೆಯಾಗಿದ್ದಾರೆ. ಆ.24ರಂದು ಈ ಘಟನೆ ನಡೆದಿದ್ದು, ಓಹಿಯೋ ಪೊಲೀಸರು ಬಿಡುಗಡೆಗೊಳಿಸಿದ ಬಾಡಿಕ್ಯಾಮ್ ವಿಡಿಯೋದಿಂದ ಇದೀಗ ಬೆಳಕಿಗೆ ಬಂದಿದೆ.
ಟಕಿಯಾ ತಮ್ಮ ಕಾರು ಚಲಾಯಿಸುತ್ತಿದ್ದರು. ಆಕೆಯ ಕಾರನ್ನು ತಡೆದ ಇಬ್ಬರು ಪೊಲೀಸ್ ಅಧಿಕಾರಿಗಳು, ಸಮೀಪದ ಪ್ರದೇಶದಲ್ಲಿ ನಡೆದ ಕಳ್ಳತನದ ಆರೋಪ ಹೊರಿಸಿದ್ದರು. ಆದರೆ, ಅವರು ಆರೋಪ ನಿರಾಕರಿಸಿ ಕಾರಿನಿಂದ ಕೆಳಕ್ಕೆ ಇಳಿಯಲು ನಿರಾಕರಿಸಿದ್ದಾರೆ. ಪೊಲೀಸರು ಬಲವಂತ ಮಾಡಿದರೂ, ಟಕಿಯಾ ಕಾರು ಚಲಾಯಿಸಿಕೊಂಡು ಹೋಗಲು ಯತ್ನಿಸಿದಾಗ ಒಬ್ಬ ಪೊಲೀಸ್ ಅಧಿಕಾರಿ, ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಆಕೆ ಬದುಕುಳಿಯಲಿಲ್ಲ.
ಟಕಿಯಾ ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದು, ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದರು. “ಈ ಘಟನೆಯನ್ನು ಪೊಲೀಸರು ತಡೆಯಬಹುದಿತ್ತು. ಇದು ಅಧಿಕಾರದ ದುರುಪಯೋಗ’ ಎಂದು ಟಕಿಯಾ ಕುಟುಂಬಸ್ಥರು ದೂರಿದ್ದಾರೆ. 2020ರ ಮೇ 25ರಂದು ಶ್ವೇತ ವರ್ಣದ ಪೊಲೀಸ್ ಅಧಿಕಾರಿಯೊಬ್ಬ 46 ವರ್ಷದ ಕಪ್ಪು ವರ್ಣಿಯ ಜಾರ್ಜ್ ಪ್ಲಾಯ್ಡ ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ. ಇದರ ವಿರುದ್ಧ ಅಮೆರಿಕದಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.