ಗಣಿ ಇಲಾಖೆಗೂ ಪೊಲೀಸ್ ಮಾದರಿ ಸಮವಸ್ತ್ರ
Team Udayavani, Dec 18, 2019, 3:07 AM IST
ಕೊಪ್ಪಳ: ರಾಜ್ಯದಲ್ಲಿ ಅಕ್ರಮ ಮರಳು ಸಾಗಾಟ ನಿಯಂತ್ರಣಕ್ಕೆ ಮರಳು ನೀತಿ ಮಾರ್ಪಾಡು ಸೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪೊಲೀಸ್ ಮಾದರಿ ವಿಶೇಷ ಸಮವಸ್ತ್ರ ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಗಣಿ ಇಲಾಖೆ ಒಂದೇ ಅಕ್ರಮ ಮರಳು ದಂಧೆ ನಿಯಂತ್ರಿಸಲು ಅಸಾಧ್ಯವೆಂದು ನಿರ್ಧರಿಸಿ ಅಧಿಕಾರವನ್ನು ಇತರೆ ಇಲಾಖೆಗಳಿಗೂ ಹಂಚಿಕೆ ಮಾಡಿತ್ತು.
ಕಾಯ್ದೆಯಲ್ಲಿ ಕೆಲವು ಬದಲಾವಣೆ ತಂದು ಲೋಕೋಪಯೋಗಿ, ಪೊಲೀಸ್, ಅರಣ್ಯ, ತಾಪಂ, ತಹಶೀಲ್ದಾರ್, ಕಂದಾಯ ನಿರೀಕ್ಷಕರು ಸೇರಿ ಗ್ರಾಮ ಲೆಕ್ಕಾಧಿಕಾರಿಗೂ ವಿಶೇಷ ಅಧಿಕಾರ ನೀಡಿ ಅಕ್ರಮ ಮರಳು ದಂಧೆ ಮಾಹಿತಿ ದೊರೆತರೆ ನೇರವಾಗಿ ದಾಳಿ ಮಾಡಿ ಪ್ರಕರಣ ದಾಖಲಿಸಲು ಅಧಿ ಕಾರ ನೀಡಲಾಗಿತ್ತು. ಆದರೆ ಕೆಲ ಇಲಾಖೆಗಳು ಇದರಲ್ಲಿ ಆಸಕ್ತಿ ವಹಿಸದ ಹಿನ್ನೆಲೆಯಲ್ಲಿ ಗಣಿ ಇಲಾಖೆಗೆ ಅಕ್ರಮ ನಿಯಂತ್ರಣಕ್ಕೆ ಮತ್ತೆ ದೊಡ್ಡ ತಲೆ ನೋವಾಗಿದೆ. ಹೀಗಾಗಿ ಇಲಾಖೆಯಲ್ಲಿಯೇ ಕೆಲ ಮಾರ್ಪಾಡಿಗೆ ಸರ್ಕಾರ ಸಿದ್ಧತೆ ನಡೆಸಿದೆ.
ಭಯ ಮೂಡಿಸಲು: ಪ್ರಸ್ತುತ ಬಿಜೆಪಿ ಸರ್ಕಾರ ಮರಳು ನೀತಿಗೆ ಮತ್ತೆ ಹೊಸ ರೂಪ ನೀಡಲು ಮುಂದಾಗಿದ್ದು, ವಿವಿಧ ರಾಜ್ಯಕ್ಕೆ ತೆರಳಿ ಅಲ್ಲಿನ ಮರಳು ನೀತಿ ಕುರಿತು ಅಧ್ಯಯನ ನಡೆಸಿದೆ. ತೆಲಂಗಾಣ ಮಾದರಿ ಮರಳು ನೀತಿ ಜಾರಿಗೂ ಚಿಂತನೆ ನಡೆಸಿದೆ. ಇದರೊಟ್ಟಿಗೆ ಇಲಾಖೆ ಅಧಿ ಕಾರಿ ವರ್ಗಕ್ಕೂ ಸಮವಸ್ತ್ರ ಜಾರಿಗೆ ಸಿದ್ಧತೆ ನಡೆಸಿದೆ. ಇಲಾಖೆ ಅಧಿ ಕಾರಿಗಳು ದಾಳಿ ನಡೆಸಿದಾಗ ಗುರುತು ಮಾಡುವುದೇ ತುಂಬಾ ಸಮಸ್ಯೆ. ಹೀಗಾಗಿ ಇವರಿಗೆ ವಿಶೇಷ ಸಮವಸ್ತ್ರವಿದ್ದರೆ ಎಲ್ಲಾ ಅನುಕೂಲವಾಗಲಿದೆ. ಇನ್ನು ಗಣಿ ಇಲಾಖೆ ಅಧಿಕಾರಿಗಳಿಗೂ ಹೆದರದ ದಂಧೆಕೋರರಿದ್ದು ಅವರಿಗೆ ಭಯ ಮೂಡಿಸಲು ಗಣಿ ಇಲಾಖೆಗೆ ಪೊಲೀಸ್ ಮಾದರಿ ಸಮವಸ್ತ್ರ ಜಾರಿಗೆ ತರಲು ತಯಾರಿ ನಡೆಸಿದೆ.
ಪೊಲೀಸ್ ಮಾದರಿಯೇ ಏಕೆ?: ಸಚಿವ ಸಿ.ಸಿ.ಪಾಟೀಲ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೊಣೆ ಹೊತ್ತಿದ್ದಾರೆ. ಸಮವಸ್ತ್ರದ ಕುರಿತು ಇಲಾಖೆ ಉನ್ನತ ಮಟ್ಟದ ಅಧಿಕಾರಿ ವರ್ಗದ ಜತೆ ಚರ್ಚೆ ನಡೆಸಿದ್ದು, ಇದರ ಸಾಧಕ-ಬಾಧಕಗಳ ಕುರಿತು ಪರಾಮರ್ಶೆ ನಡೆಯುತ್ತಿವೆ. ಈ ಹಿಂದೆಯೂ ಸಮವಸ್ತ್ರ ಜಾರಿ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದ್ದರೂ ಅಷ್ಟೇನು ಚರ್ಚೆಗೆ ಬಂದಿರಲಿಲ್ಲ. ಆಗ ಗಣಿ ಅಧಿ ಕಾರಿಗೆ ದಾಳಿ ನಡೆಸುವ ವೇಳೆ ಭದ್ರತೆಗೆ ಗನ್ ಕೊಡಬೇಕೆನ್ನುವ ಪ್ರಸ್ತಾವನೆಯೂ ಇತ್ತು. ಮತ್ತೆ ಈಗ ವಿಷಯ ಮುನ್ನೆಲೆಗೆ ಬಂದಿದೆ. ಪೊಲೀಸ್ ಸಮವಸ್ತ್ರ ನೋಡಿದಾಕ್ಷಣ ಜನರಲ್ಲಿ ಅಪರಾಧ ಮಾಡದಂತ ಭಾವನೆ ಬರುತ್ತವೆ. ಹೀಗಾಗಿ ಗಣಿ ಅಧಿಕಾರಿಗೂ ಪೊಲೀಸ್ ಮಾದರಿ ಸಮವಸ್ತ್ರ ಜಾರಿಯ ಚರ್ಚೆ ನಡೆದಿವೆ.
ಇಲಾಖೆ ಅ ಧಿಕಾರಿಗಳಿಗೆ ಪೊಲೀಸ್ ಮಾದರಿ ಸಮವಸ್ತ್ರ ಜಾರಿ ತರುವ ಚಿಂತನೆ ನಡೆದಿದೆ. ಇದರಿಂದ ಅಧಿ ಕಾರಿ ವರ್ಗದಲ್ಲೂ ಒಂದು ರೀತಿಯಲ್ಲಿ ಶಿಸ್ತು, ಸಮಯ ಪ್ರಜ್ಞೆ ಬರುತ್ತದೆ. ಸಾರ್ವಜನಿಕರಲ್ಲೂ ಇವರನ್ನು ಬೇಗನೆ ಗುರುತು ಹಿಡಿಯಲು ಸಾಧ್ಯವಾಗಲಿದೆ. ಈಗಾಗಲೇ ಅಧಿ ಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ.
-ಸಿ.ಸಿ.ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ
* ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.