Politics: ಅಭಿವೃದ್ಧಿಗೆ ಹಾಲಿ-ಮಾಜಿ ಶಾಸಕರ ಸ್ಪಂದನೆ ಸಿಗುತ್ತಿಲ್ಲ- H.ವಿಶ್ವನಾಥ್
Team Udayavani, Dec 21, 2023, 9:40 PM IST
ಹುಣಸೂರು; ಹುಣಸೂರು ತಾಲೂಕು ಚಿಲ್ಕುಂದ ಏತ ನೀರಾವರಿ ಯೋಜನೆಯನ್ನು ವಿಸ್ತರಿಸಿ ಮತ್ತು ನಾಲ್ಕು ಕೆರೆಗಳಿಗೆ ನೀರು ತುಂಬಿಸುವ ಹಾಗೂ ಪೈಪ್‌ಲೈನ್ ಕಾಮಗಾರಿಗೆ ಸರಕಾರ 4 ಕೋಟಿರೂ ಮಂಜೂರು ಮಾಡಿದೆ ಎಂದು ಎಂ.ಎಲ್.ಸಿ. ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.
ಏತ ನೀರಾವರಿ ಯೋಜನೆಯ ಪ್ರಥಮ ಹಂತದಲ್ಲಿ 21 ಕೋಟಿ ರೂ ವೆಚ್ಚದಡಿ ಚಿಲ್ಕುಂದ ಬಾಗದ 15 ಕೆರೆಗಳಿಗೆ ನೀರು ತುಂಬಿಸುವುದಾಗಿತ್ತು. ರೈತರ ಬೇಡಿಕೆಯಂತೆ ಮತ್ತೆ ನಾಲ್ಕು ಕೆರೆಗಳಿಗೆ ನೀರು ತುಂಬಿಸುವ ಹಾಗೂ ಕೆರೆಗಳಿಂದ ರೈತರ ಜಮೀನುಗಳಿಗೆ ಪೈಪ್ ಮೂಲಕ ನೀರು ಹರಿಸುವ ಯೋಜನೆಗೆ ಸಣ್ಣ ನೀರಾವರಿ ಸಚಿವ ಬೋಸ್‌ರಾಜ್ ಮತ್ತೆ 4 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕುಮಾರಸ್ವಾಮಿ ಸಿ.ಎಂ.ಆಗಿದ್ದ ಅವಧಿಯಲ್ಲಿ ಕಟ್ಟೆಮಳಲವಾಡಿ ಅಣೆಕಟ್ಟೆಯಿಂದ ಹೊಡಕೆಕಟ್ಟೆಯ 42 ಕೆರೆಗಳಿಗೆ ನೀರುತುಂಬಿಸುವ ಯೋಜನೆ ಬಜೆಟ್‌ನಲ್ಲಿ ಸೇರಿದ್ದು, ನಂತರ ನೆನೆಗುದಿಗೆ ಬಿದ್ದಿದೆ. ಅದೇರೀತಿ ಸಿದ್ದರಾಮಯ್ಯನವರೇ ಹಿಂದೆ ಸಿ.ಎಂ.ಆಗಿದ್ದಾಗ ನಗರದಲ್ಲಿ ಅರಸು ಭವನ ಹಾಗೂ ಡಿ.ಡಿ.ಅರಸು ಹೈಟೆಕ್ ಆಸ್ಪತ್ರೆ ಮಂಜೂರಾಗಿ ಕಾಮಗಾರಿ ಕುಂಟುತ್ತಾ ಸಾಗಿದ್ದು, ಈ ಕಾಮಗಾರಿಗಳನ್ನು ಮುಗಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದರು.
ಚುನಾವಣೆಯಲ್ಲಿ ರಾಜಕೀಯ, ನಂತರ ಅಭಿವೃದ್ದಿ ಮಂತ್ರ
ತಾಲೂಕಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಶಾಸಕ ಹರೀಶ್‌ಗೌಡ, ಮಾಜಿ ಶಾಸಕ ಮಂಜುನಾಥ್‌ರಿಗೂ ಜವಾಬ್ದಾರಿ ಇದೆ. ನೆನೆಗುದಿಗೆ ಬಿದ್ದಿರುವ ಅಭಿವೃದ್ದಿ ಕುರಿತು ಸಂಬಂಧಿಸಿ ಸಚಿವರು, ಸಿ.ಎಂ.ರೊಂದಿಗೆ ಚರ್ಚಿಸಲು ಮರ‍್ನಾಲ್ಕು ಬಾರಿ ಕರೆಮಾಡಿದ್ದರೂ ಇಬ್ಬರೂ ಸ್ಪಂದಿಸಲಿಲ್ಲ. ಜನರ ಭೇಟಿಗೂ ಸಿಗುತ್ತಿಲ್ಲವೆಂಬ ಆರೋಪವಿದೆ. ಅಭಿವೃದ್ದಿಯಲ್ಲಿ ರಾಜಕೀಯ ಬೇಡ, ತಾಲೂಕಿನ ಋಣ ನನ್ನ ಹಾಗೂ ಜಿ.ಟಿ.ದೇವೇಗೌಡರ ಮೇಲಿದೆ, ಆದರೆ ಹಾಲಿಯೂ ಸಿಗುತ್ತಿಲ್ಲ. ಮಾಜಿಯೂ ಸಹಕರಿಸುತ್ತಿಲ್ಲ ಹೀಗಾದರೆ ಅಭಿವೃದ್ದಿ ಸಾಧ್ಯವೇ ಎಂದು ಶಾಸಕರ ಜವಾಬ್ದಾರಿ ಬಗ್ಗೆ ಎಚ್ಚರಿಸಿದರು.
ಪ್ರತಿ ಗುರುವಾರ ಭೇಟಿ:
ತಾವು ಇನ್ನು ಮುಂದೆ ಪ್ರತಿ ಗುರುವಾರ ಹುಣಸೂರಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವೆನೆಂದು ವಿಶ್ವನಾಥ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್, ಕುನ್ನೇಗೌಡ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.