Politics: ಬ್ಲಾಕ್‌ಮೇಲ್‌ ಆರೋಪಕ್ಕೆ ಮಾತಿನ ಸಮರ


Team Udayavani, Sep 3, 2023, 8:06 PM IST

bjp cong election fight

ಪಕ್ಷ ಸೇರ್ಪಡೆ ಸಂಬಂಧ ಬಿಜೆಪಿಯ ಹಲವು ಮುಖಂಡರಿಗೆ ಕಾಂಗ್ರೆಸ್‌ ಬ್ಲಾಕ್‌ಮೇಲ್‌ ಆರೋಪಕ್ಕೆ ಮಾತಿನ ಸಮರ ಮಾಡುತ್ತಿದೆ ಎಂಬ ಬಿಜೆಪಿ ನಾಯಕ, ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ತಿರುಗೇಟು ನೀಡಿರುವ ಸಚಿವ ಎಂ.ಬಿ.ಪಾಟೀಲ “ಬ್ಲಾಕ್‌ಮೇಲ್‌ ಆರೋಪಕ್ಕೆ ಮಾತಿನ ಸಮರಗೆ ಒಳಗಾಗುವಂತಹ ಕೆಲಸವನ್ನು ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಸೇರಿ ಬಿಜೆಪಿ ಯಾಕೆ ಮಾಡಿದೆ’ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ, “ಆಪರೇಷನ್‌ ಹಸ್ತ’ದ ಅಂತೆಕಂತೆ ನಡುವೆಯೂ ಉಭಯ ಪಕ್ಷಗಳ ನಾಯಕರ ಮಾತಿನ ಸಮರವೂ ಬಿರುಸಾಗಿದೆ.

ಕೆಲವರಿಗೆ ಕಾಂಗ್ರೆಸ್‌ ಬ್ಲಾಕ್‌ಮೇಲ್‌ ಮಾಡುತ್ತಿದೆ
ಬೆಂಗಳೂರು: ಕಾಂಗ್ರೆಸ್‌ ಪಕ್ಷ ಕೆಲವರಿಗೆ ಬ್ಲಾಕ್‌ಮೇಲ್‌ ಮಾಡುತ್ತಿದೆ. ಈ ಪ್ರಯತ್ನದಲ್ಲಿ ಕಾಂಗ್ರೆಸ್‌ ವಿಫ‌ಲವಾಗಲಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಭವಿಷ್ಯ ನುಡಿದರು.
ನಟ ಸುದೀಪ್‌ ಹುಟ್ಟುಹಬ್ಬ ಆಚರಣೆೆ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಚಿವ ಬಿ.ಸಿ.ಪಾಟೀಲ್‌, ಮಾಜಿ ಶಾಸಕ ರಾಜೂಗೌಡ ಭೇಟಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿಗೆ ಬಂದವರಿದ್ದಾರೆ. ಆದರೀಗ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಯಾವ ಕಾರಣಕ್ಕೆ ಯಾರ್ಯಾರು, ಯಾರ್ಯಾರನ್ನು ಭೇಟಿ ಮಾಡುತ್ತಾರೆ ಎಂಬುದನ್ನು ರಾಜಕೀಯ ಜೀವನದಲ್ಲಿ ಪ್ರಶ್ನಿಸಲಾಗುವುದಿಲ್ಲ ಎಂದರು.

ಪರಸ್ಪರ ಪರಿಚಯ ಇರುತ್ತದೆ. ಸ್ನೇಹಿತರಾಗಿರುತ್ತೇವೆ. ಸರ್ಕಾರ ಎಂದ ಮೇಲೆ ಸಿಎಂ, ಮಂತ್ರಿ, ಉಪಮಂತ್ರಿಗಳ ಭೇಟಿ ಸಹಜ. ಇದಕ್ಕೆಲ್ಲಾ ವಿಶೇಷ ಅರ್ಥ ಕಲ್ಪಿಸಲಾಗುವುದಿಲ್ಲ. ಕಾಂಗ್ರೆಸ್‌ ಮುಳುಗುವ ಪಕ್ಷ. ಅದಕ್ಕೇನು ಭವಿಷ್ಯ ಇದೆಯೇ? ರಾಹುಲ್‌, ಸೋನಿಯಾ, ಪ್ರಿಯಾಂಕರಂತಹ ನಾಯಕತ್ವದಿಂದ ಕುಟುಂಬಕ್ಕೆ ಸೀಮಿತವಾದ ಪಕ್ಷ ಅದು. ಪ್ರತಿಭೆ, ಶಕ್ತಿ, ಉದ್ದೇಶ ಇಲ್ಲದ ಪಕ್ಷ. ಎಲ್ಲ ಜಾತಿ-ಜನಾಂಗವನ್ನು ಪ್ರತಿನಿಧಿಸುವ ಪಕ್ಷ ಅದಲ್ಲ. ಹೀಗಾಗಿ ಭವಿಷ್ಯವಿಲ್ಲ.

ಆದರೆ, ಕಾಂಗ್ರೆಸ್‌ ಸರ್ಕಾರ ಕೆಲವರಿಗೆ ಬ್ಲಾಕ್‌ವೆುàಲ್‌ ಪ್ರಯತ್ನ ಮಾಡುತ್ತಿದೆ. ವಿಫ‌ಲವೂ ಆಗುತ್ತದೆ. 2014ರಲ್ಲೂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದರು. ಅವರನ್ನಾಗಲೀ, ಕಾಂಗ್ರೆಸಿಗರನ್ನಾಗಲೀ ನೋಡಿ ಜನ ಮತ ಹಾಕುತ್ತಾರೆಯೇ ? 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿತ್ತು. ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರೆ? ಶೇ.55 ರಷ್ಟು ಮತ ಬಿಜೆಪಿಗೆ ಸಿಕ್ಕಿತ್ತು. ಒಂದು ಸ್ಥಾನ ಮಾತ್ರ ಅವರು ಗೆದ್ದಿದ್ದರು. ಆ ಒಂದನ್ನೂ ಈ ಬಾರಿ ಉಳಿಸಲ್ಲ. 28ಕ್ಕೆ 28 ಸ್ಥಾನವನ್ನೂ ಹೊಡೆಯುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ಬಿಎಸ್‌ವೈ ನೇತೃತ್ವದಲ್ಲೇ ಚುನಾವಣೆ: ರಾಜೂಗೌಡ
ಮಾಜಿ ಶಾಸಕ ರಾಜೂಗೌಡ ಮಾತನಾಡಿ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗಿನಿಂದಲೇ ಬಿಜೆಪಿಯ ಅಧಃಪತನ ಶುರುವಾಯಿತು. ಅಂದಿನಿಂದ ಮೇಲೆ ಎದ್ದೇ ಇಲ್ಲ. ಈಗಲೂ ಅವರು ಸೋತಿರುವ ನಮಗೆಲ್ಲಾ ವಾರಕ್ಕೊಮ್ಮೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಾರೆ. ನಮ್ಮ ಸಮಸ್ಯೆ ಆಲಿಸುತ್ತಾರೆ. ಅದು ಅವರ ನಾಯಕತ್ವ ಗುಣ. ಆದರೆ, ಪಕ್ಷ ಅವರನ್ನು ಕಡೆಗಣಿಸಿದೆ. ಅವರ ನೇತೃತ್ವ, ನಾಯಕತ್ವದಲ್ಲೇ ಮುಂದಿನ ಚುನಾವಣೆಗಳನ್ನು ಎದುರಿಸುತ್ತೇವೆ ಎಂದರು.

ಕ್ಯಾನ್ಸರ್‌ ಗಡ್ಡೆ ಏನೂ ಆಗಿಲ್ಲ. ಯಾವ ಆಪರೇಶನ್‌ ಪ್ರಶ್ನೆಯೂ ಇಲ್ಲ. ಆತ್ಮೀಯ ಸೋದರ, ಹಿರಿಯಣ್ಣ ಸುದೀಪ್‌ ಹುಟ್ಟು ಹಬ್ಬ ಇತ್ತು. ಚುನಾವಣೆ ನಂತರ ಎಷ್ಟೋ ದಿನಗಳ ಬಳಿಕ ಬಿ.ಸಿ.ಪಾಟೀಲರು ಸಿಕ್ಕಿದ್ದರು. ಚರ್ಚಿಸುತ್ತಾ ಕುಳಿತಿದ್ದೆವು. ಅದೇ ಸಮಯಕ್ಕೆ ಡಿ.ಕೆ. ಶಿವಕುಮಾರ್‌ ಸಹ ಬಂದರು. ಎಲ್ಲರೂ ಆತ್ಮೀಯರೆ, ವೈರಿಗಳಲ್ಲ.
ರಾಜೂಗೌಡ, ಮಾಜಿ ಶಾಸಕ

ನಟ ಸುದೀಪ್‌ ಹುಟ್ಟು ಹಬ್ಬ ಇತ್ತು. ನಾನೂ ಹೋಗಿದ್ದೆ. ಅವರೂ ಬಂದಿದ್ದರು. ಡಿ.ಕೆ.ಶಿವಕುಮಾರ್‌ ಬಂದರೆಂದು ಬೇರೆ ಕಡೆಗೆ ಎದ್ದು ಹೋಗಲು ಸಾಧ್ಯವೇ? ಹಳೆಯ ಸ್ನೇಹಿತರು. ಪರಿಚಯ ಇತ್ತು ಮಾತನಾಡಿದೆವು. ನನಗೆ ಯಾವ ಆಫ‌ರೂ ಇಲ್ಲ. ಹೋಗೋದೂ ಇಲ್ಲ. ಭೇಟಿಗೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅದೊಂದು ಆಕಸ್ಮಿಕ ಭೇಟಿ.
ಬಿ.ಸಿ. ಪಾಟೀಲ್‌, ಮಾಜಿ ಸಚಿವ

ಬಿಜೆಪಿಗರು ಕಾಂಗ್ರೆಸ್‌ಗೆ ಬರೋದು ಸ್ವಾಭಾವಿಕ ಪ್ರಕ್ರಿಯೆ: ಎಂಬಿಪಿ
ಬೆಂಗಳೂರು: ಬಿಜೆಪಿ ಮುಳುಗುತ್ತಿರುವ ಹಡಗು ಅಲ್ಲ; ಮುಳುಗಿದ ಹಡಗು. ಸ್ವಾಭಾವಿಕವಾಗಿ, ಅದರಲ್ಲಿದ್ದ ಎಲ್ಲ ಸಮುದಾಯಗಳ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್‌ ಕಡೆಗೆ ಮುಖಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಈಗ ಮುಳುಗಿದ ಹಡಗಾಗಿದೆ. ಹಾಗಾಗಿ, ಅದರಲ್ಲಿದ್ದ ಲಿಂಗಾಯತರು, ಒಕ್ಕಲಿಗರು, ದಲಿತರು ಸೇರಿ ಎಲ್ಲ ವರ್ಗಗಳ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಇದೊಂದು ಸ್ವಾಭಾವಿಕ ಪ್ರಕ್ರಿಯೆ’ ಎಂದು ಹೇಳಿದರು. ಯಾರ್ಯಾರು ಸಂಪರ್ಕದಲ್ಲಿದ್ದಾರೆ ಎಂದು ಕೇಳಿದಾಗ, “ಬಹಳಷ್ಟು ಜನ ಪಕ್ಷದ ನಾಯಕರುಗಳ ಜತೆ ಸಂಪರ್ಕದಲ್ಲಿದ್ದಾರೆ. ಯಾರ್ಯಾರು ಅಂತ ಈ ಹಂತದಲ್ಲಿ ಹೇಳಲಾಗದು. ಅದು ಸರಿ ಕೂಡ ಅಲ್ಲ’ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ಹಿಂದೆಸರಿದ ನಂತರ ಲಿಂಗಾಯತ ಸಮುದಾಯ ಕಾಂಗ್ರೆಸ್‌ನಲ್ಲಿ ನೆಲೆ ಕಂಡುಕೊಳ್ಳುತ್ತಿದೆಯೇ ಎಂದು ಕೇಳಿದಾಗ, ಇದು ಈಚೆಗೆ ನಡೆದ ವಿಧಾನಸಭಾ ಚುನಾವಣೆ ಫ‌ಲಿತಾಂಶದಲ್ಲಿಯೇ ಸಾಬೀತಾಗಿದೆ. ಕಾಂಗ್ರೆಸ್‌ 36 ಲಿಂಗಾಯತ ಶಾಸಕರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಲ್ಲಿ 67 ಜನ ಲಿಂಗಾಯತರಿಗೆ ಟಿಕೆಟ್‌ ನೀಡಲಾಗಿತ್ತು. ಆದರೆ, ಅದರಲ್ಲಿ 13-15 ಜನ ಮಾತ್ರ ಆಯ್ಕೆಯಾಗಿದ್ದಾರೆ. ಈ ಬಲವಾದ “ಶಿಫ್ಟ್’ ಸ್ಪಷ್ಟವಾಗಿ ಸೂಚಿಸುತ್ತದೆ. ಮುಂಬೈ ಕರ್ನಾಟಕ ಬಹುತೇಕ ಕಾಂಗ್ರೆಸ್‌ಮಯ ಆಗಿದೆ ಎಂದರು.

ಬ್ಲಾಕ್‌ಮೇಲ್‌ಗೆ ಒಳಗಾಗುವಂತಹ ಕೆಲಸ ಯಾಕೆ ಮಾಡಿದೆ?
ಬ್ಲಾಕ್‌ಮೇಲ್‌ ಒಳಗಾಗುವಂತಹ ಕೆಲಸವನ್ನು ಮಾಜಿ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಸೇರಿ ಬಿಜೆಪಿ ಯಾಕೆ ಮಾಡಿದೆ ಎಂದು ಸಚಿವ ಎಂ.ಬಿ. ಪಾಟೀಲ ತೀಕ್ಷ್ಣವಾಗಿ ಕೇಳಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, “ಬ್ಲಾಕ್‌ವೆುಲ್‌ ಮಾಡುತ್ತಿದ್ದಾರೆ ಎಂದಾದರೆ, ಅಂತಹ ಕೆಲಸ ಮಾಡಿದ್ದಾರೆ ಎಂದಾಯ್ತು ಅಲ್ಲವೇ? ಏನಾದರೂ ಲೂಟಿ ಹೊಡೆದಿದ್ದಾರಾ? ಅವರ (ಅಶ್ವತ್ಥ ನಾರಾಯಣಗೆ) ಹೇಳಿಕೆಗಳಿಂದಲೇ ಬ್ಲಾಕ್‌ವೆುಲ್‌ಗೆ ಒಳಗಾಗುವಂತಹ ಕೆಲಸ ಮಾಡಿದ್ದು ಸಾಬೀತಾಗುತ್ತಿದೆ ಎಂದು ಖಾರವಾಗಿ ಹೇಳಿದರು.

ಟಾಪ್ ನ್ಯೂಸ್

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R Ashok (2)

BJP; ವಿಪಕ್ಷ ನಾಯಕ ಆರ್‌. ಅಶೋಕ್‌ ನಡೆಗೆ ಕಾಂಗ್ರೆಸ್‌ ಖಂಡನೆ

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

1-weewqe

Road roller ಅಡಿಯಲ್ಲಿ ಸಿಲುಕಿ ಇಬ್ಬರು ದಾರುಣ ಸಾ*ವು

yatnal

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.