ಅಬ್ಬಬ್ಬಾ ಏನು ಟೇಸ್ಟ್ ಈ ಪೊಟಾಟೋ ಟ್ವಿಸ್ಟ್…ಸುಲಭ ರೆಸಿಪಿ ನೀವೂ ಒಮ್ಮೆ ಟ್ರೈ ಮಾಡಿ…
ಆಲೂಗಡ್ಡೆ ಸ್ಟಿಕ್ ಮೇಲೆ ಮಿಶ್ರಣ ಮಾಡಿಟ್ಟುಕೊಂಡಿದ್ದ ಮಸಾಲೆಯನ್ನು ಹಾಕಿರಿ.
ಶ್ರೀರಾಮ್ ನಾಯಕ್, Feb 10, 2023, 6:10 PM IST
ಆಲೂಗಡ್ಡೆ ನಮ್ಮ ದಿನಬಳಕೆಯ ಒಂದು ತರಕಾರಿಯಾಗಿದ್ದು, ಇದು ಕೆಲವರಿಗೆ ಇಷ್ಟವಾಗುತ್ತದೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ ನಿಜವಾಗಿ ಹೇಳಬೇಕೆಂದರೆ ಆಲೂಗಡ್ಡೆಯಲ್ಲಿ ನಾರಿನಂಶ ಮತ್ತು ಪೊಟ್ಯಾಷಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ನಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚು ಮಾಡಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ.
ಭಾರತದಲ್ಲಿ ಹೆಚ್ಚು ಮಂದಿ ಆಲೂಗಡ್ಡೆಯನ್ನು ಇಷ್ಟಡುತ್ತಾರೆ. ಸಾಂಬಾರ್, ಪಲ್ಯ, ಪೋಡಿ, ಚಿಪ್ಸ್ …ಹೀಗೆ ಹಲವಾರು ವಿಧಗಳಲ್ಲಿ ಆಲೂಗಡ್ಡೆಯನ್ನು ಉಪಯೋಗಿಸುತ್ತಾರೆ.
ಸಂಜೆ ವೇಳೆಗೆ ಬಿಸಿ-ಬಿಸಿ ಟೀ ಕಾಫಿ ಜೊತೆ ರುಚಿ-ರುಚಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಪಕೋಡಾ, ಗೋಬಿ ಮಂಚೂರಿಯನ್, ಚಾಟ್ಸ್ ಐಟಂ ತಿಂದು ಬೋರ್ ಆಗಿದ್ರೆ ಈ ಸಂಜೆ ಪೊಟಾಟೋ ಟ್ವಿಸ್ಟ್ ಮಾಡಿ ಟೇಸ್ಟ್ ನೋಡಿ.
ಪೊಟಾಟೋ ಟ್ವಿಸ್ಟ್ ಈಗ ಎಲ್ಲಾ ಕಡೆ ಟ್ರೆಂಡ್ ಆಗಿ ಹೋಗಿದೆ ಜಾತ್ರೆ, ಮಾಲ್ ಎಲ್ಲೇ ಹೋದರು ಪೊಟಾಟೋ ಟ್ವಿಸ್ಟ್ ಸ್ಟಾಲ್ ಕಾಣಸಿಗುತ್ತದೆ ಮಕ್ಕಳು ಮಾತ್ರವಲ್ಲದೆ ದೊಡ್ಡವರು ಇಷ್ಟ ಪಡುತ್ತಾರೆ.
ರುಚಿಯೊಂದೇ ಅಲ್ಲ ಇದನ್ನು ಮಾಡೋದು ತುಂಬಾನೇ ಸುಲಭ. ಹಾಗಾದ್ರೆ ಇನ್ನೇಕೆ ತಡ, ಬೇಕಾಗಿರುವ ಸಾಮಗ್ರಿಗಳ ಪಟ್ಟಿ ಮಾಡಿಕೊಂಡು ಪೊಟಾಟೋ ಟ್ವಿಸ್ಟ್ ಮಾಡುವ ಬನ್ನಿ….
ಪೊಟಾಟೋ ಟ್ವಿಸ್ಟ್
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ-3, ಮೈದಾ ಹಿಟ್ಟು-1/4ಕಪ್, ಕಾರ್ನ್ ಫ್ಲೋರ್-1/4 ಕಪ್, ಮೆಣಸಿನ ಪುಡಿ-3ಚಮಚ, ಚಾಟ್ ಮಸಾಲ-2ಚಮಚ, ಟೊಮೆಟೋ ಕೆಚಪ್, ಮಯೋನೈಸ್, ಕರಿಯಲು ಎಣ್ಣೆ, ಸ್ಟಿಕ್ಸ್-3, ರುಚಿಗೆ ತಕ್ಕಷ್ಟು ಉಪ್ಪು, ಪೊಟಾಟೋ ಟ್ವಿಸ್ಟ್‌ರ್(ಯಂತ್ರ).
ತಯಾರಿಸುವ ವಿಧಾನ
-ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ನಂತರ ಒಂದು ಬಟ್ಟೆಯಿಂದ ಒರೆಸಿಕೊಳ್ಳಿ.
-ನಂತರ ಆಲೂಗಡ್ಡೆಯನ್ನು ಸ್ಟಿಕ್ ಒಳಗೆ ಸಿಲುಕಿಸಿ ಆಲೂಗಡ್ಡೆಯನ್ನು ಟ್ವಿಸ್ಟ್ ರ್ ಯಂತ್ರದ ಮೂಲಕ ತಿರುಗಿಸಿರಿ.
-ತದನಂತರ ಒಂದು ಬೌಲ್ ಗೆ ಮೈದಾ, ಕಾರ್ನ್ ಫ್ಲೋರ್, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
-ಮಸಾಲೆಯೂ ತುಂಬಾ ತೆಳು ಮಾಡಿಕೊಳ್ಳದೇ ಹದ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಿ.
-ಈಗ ವೃತ್ತಾಕಾರದಲ್ಲಿ ಕಟ್ ಮಾಡಿಟ್ಟ ಆಲೂಗಡ್ಡೆ ಸ್ಟಿಕ್ ಮೇಲೆ ಮಿಶ್ರಣ ಮಾಡಿಟ್ಟುಕೊಂಡಿದ್ದ ಮಸಾಲೆಯನ್ನು ಹಾಕಿರಿ.
-ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದಮೇಲೆ ಮಾಡಿಟ್ಟ ಆಲೂಗಡ್ಡೆ ಮಿಶ್ರಣವನ್ನು ಹಾಕಿ ಕಂದು ಬಣ್ಣ ಬರುವವರೆಗೆ ಬೇಯಿಸಬೇಕು.
-ಕೊನೆಗೆ ಬೇಯಿಸಿಕೊಂಡಿದ್ದ ಆಲೂಗಡ್ಡೆಯ ಮೇಲೆ ಸ್ವಲ್ಪ ಚಾಟ್ ಮಸಾಲ ಮತ್ತು ಮೆಣಸಿನ ಪುಡಿಯನ್ನು ಉದುರಿಸಿ ನಂತರ ಟೊಮೆಟೋ ಕೆಚಪ್ ಮತ್ತು ಮಯೋನೈಸ್ ಹಾಕಿದರೆ ಸ್ವಾದಿಷ್ಟಕರವಾದ ಪೊಟಾಟೋ ಟ್ವಿಸ್ಟ್ ಸವಿಯಲು ಸಿದ್ಧ.
-ಶ್ರೀರಾಮ್ ಜಿ .ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.