ಕೋಳಿ, ಮೊಟ್ಟೆ ಬೆಲೆ ಇಳಿಕೆ; ಮೀನಿಗೆ ಏರಿಕೆ
Team Udayavani, Jul 9, 2020, 6:20 AM IST
ಮಹಾನಗರ: ಕೋಳಿ -ಮಾಂಸ ಮತ್ತು ಮೊಟ್ಟೆಯ ಬೆಲೆ ಇಳಿಕೆಯಾಗಿದ್ದು, ಮೀನಿನ ದರದಲ್ಲಿ ಏರಿಕೆಯಾಗಿದೆ.
ಸುಮಾರು ಮೂರು ತಿಂಗಳ ಅನಂತರ ಕೋಳಿ ಮಾಂಸದ (ಲೈವ್ ಚಿಕನ್)ಬೆಲೆ ಕೆ.ಜಿ. ಯೊಂದಕ್ಕೆ ಸುಮಾರು 50 ರೂ. ಇಳಿಕೆಯಾಗಿದೆ. ಮೊಟ್ಟೆಯ ದರ ಕೂಡ ಅಪರೂಪವೆಂಬಂತೆ 1 ರೂ. ಕಡಿಮೆಯಾಗಿದೆ.
ಮಂಗಳೂರಿನ ಮಾರುಕಟ್ಟೆಗಳಲ್ಲಿ ಕೋಳಿ ಮಾಂಸ (ಲೈವ್ ಚಿಕನ್) ಕೆ.ಜಿ.ಗೆ 130-140 ರೂ., ಕೋಳಿ ಮಾಂಸ ಕೆ.ಜಿ.ಗೆ 200-220 ಇದೆ.
ಕೋವಿಡ್ ಆರಂಭದ ದಿನಗಳಲ್ಲಿ ಕೋಳಿ ಮಾಂಸದ ಬೆಲೆ ಭಾರೀ ಇಳಿಕೆಯಾಗಿತ್ತು. ಆದರೆ ಅನಂತರ ಒಂದೇ ಸಮನೆ ಏರಿಕೆಯಾಗಿತ್ತು. ಆ ಬಳಿಕ ಲಾಕ್ಡೌನ್ ಹಿನ್ನೆಲೆಯಲ್ಲಿ ಕೋಳಿ ಫಾರಂಗಳಿಗೆ ಫೀಡ್ (ಕೋಳಿಗಳ ಆಹಾರ) ಪೂರೈಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ಕೋಳಿ ಉತ್ಪಾದನೆ ಕಡಿಮೆಯಾಗಿ ಬೆಲೆ ಮತ್ತಷ್ಟು ಹೆಚ್ಚಳವಾಗಿತ್ತು. ಇದೀಗ ಫೀಡ್ ಪೂರೈಕೆ ಯಥಾಸ್ಥಿತಿಗೆ ಬಂದಿರುವುದರಿಂದ ಕೋಳಿ ಉತ್ಪಾದನೆಯೂ ಸಹಜ ಸ್ಥಿತಿಗೆ ಬಂದಿದೆ.
ಹಾಗಾಗಿ ಬೆಲೆ ಕೂಡ ಸಾಮಾನ್ಯವಾಗಿದೆ. ಗ್ರಾಹಕರು, ಕೋಳಿ ಸಾಕಣೆದಾರರು ಹಾಗೂ ಮಾರಾಟಗಾರರಿಗೆ ಕೂಡ ನಷ್ಟವಾಗುತ್ತಿಲ್ಲ ಎಂದು ಮಂಗಳೂರಿನ ಕೋಳಿ ಮಾರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೀನು ದರ ಏರಿಕೆ
ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತಿದೆ. ಆದರೆ ಮೀನಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಮೀನಿನ ದರ ಕೂಡ ಏರಿಕೆಯಾಗಿದೆ. ಮಂಗಳೂರಿನಲ್ಲಿ ಬುಧವಾರ ಬಂಗುಡೆ ಕೆ.ಜಿ.ಯೊಂದರ ಬೆಲೆ 350ರಿಂದ 400 ರೂ. ಇತ್ತು. ನಂಗ್ (ಸಣ್ಣದು) ಕೆ.ಜಿ.ಗೆ 350, ಕಾನೆ 800 ರೂ. ಇತ್ತು. ಮೀನು ಲಭ್ಯತೆ ಕಡಿಮೆ ಇರುವಾಗ, ಬೆಲೆ ಹೆಚ್ಚಿರುವಾಗ ಕೋಳಿ ಮಾಂಸ ಹಾಗೂ ಮೊಟ್ಟೆಯ ಬೆಲೆ ಕಡಿಮೆಯಾಗಿರುವುದು ಮಾಂಸಾಹಾರಿಗಳಿಗೆ ಸಮಾಧಾನ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.