ದಶಕಗಳ ವಿದ್ಯುತ್ ಸಮಸ್ಯೆಗೆ ಟಿಸಿ ಮದ್ದು!
ಕಾರ್ಕಳ, ಹೆಬ್ರಿ ವಿದ್ಯುತ್ ಪರಿವರ್ತಕ ಅಳವಡಿಸಲು ಅನುದಾನ
Team Udayavani, Sep 29, 2021, 6:23 AM IST
ಸಾಂದರ್ಭಿಕ ಚಿತ್ರ.
ಕಾರ್ಕಳ: ಕಾರ್ಕಳ, ಹೆಬ್ರಿ ತಾಲೂಕುಗಳ ಓವರ್ ಲೋಡ್, ಪವರ್ ಕಟ್, ಜಂಪರ್ ಕಟ್ ಹೀಗೆ ವಿದ್ಯುತ್‌ಗೆ ಸಂಬಂಧಿಸಿ ಹಲವು ಪ್ರಶ್ನೆಗಳಿಗೆ ಪರಿಹಾರ ಸಿಕ್ಕುವ ದಿನ ಹತ್ತಿರವಾಗಿದೆ.
ಕಾರ್ಕಳ ಹಾಗೂ ಹೆಬ್ರಿ ಮೆಸ್ಕಾಂ ಉಪವಿಭಾಗಗಳ ಲೋ ವೋಲ್ಟೇಜ್ ಸಮಸ್ಯೆ ನಿವಾರಣೆ, ಸಮರ್ಪಕ ವಿದ್ಯುತ್ ಪೂರೈಕೆಗಾಗಿ 2 ಉಪ ವಿಭಾಗಗಳಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಸರಕಾರದಿಂದ 6 ಕೋ.ರೂ. ವೆಚ್ಚದ ವಿಶೇಷ ಅನುದಾನ ಮಂಜೂರುಗೊಂಡಿದೆ. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್ ಅನುದಾನ ಬಿಡುಗಡೆಗೊಳಿಸಿದ್ದಾರೆ.
ಕಾರ್ಕಳ ತಾ|: 103 ವಿದ್ಯುತ್ ಪರಿವರ್ತಕ
ಕಾರ್ಕಳ ಉಪ ವಿಭಾಗಕ್ಕೆ 5 ಕೋ.ರೂ. ವೆಚ್ಚದಲ್ಲಿ 25 ಕೆ.ವಿ. ಸಾಮರ್ಥ್ಯದ 33 ಪರಿವರ್ತಕ, 63 ಕೆವಿ ಸಾಮರ್ಥ್ಯದ 70 ಪರಿವರ್ತಕ ಸೇರಿ ದಂತೆ ಒಟ್ಟು 103 ವಿದ್ಯುತ್ ಪರಿವರ್ತಕಗಳನ್ನು ಹೊಸದಾಗಿ ಅಳವಡಿಸಲಾಗುತ್ತಿದೆ. ಕಾರ್ಕಳ ಉಪವಿಭಾಗದ ಬೈಲೂರು ಶಾಖೆಯ ಬೈಲೂರು 2, ಯರ್ಲಪಾಡಿ 1, ಕೌಡೂರು 5, ನೀರೆ -1, ಪಳ್ಳಿ 1, ಕಾರ್ಕಳ ಎ ಶಾಖೆಯ ತೆಳ್ಳಾರು 14, ನಿಟ್ಟೆ 2, ಕಾರ್ಕಳ ಬಿ ಶಾಖೆಯಲ್ಲಿ ಮಿಯ್ಯಾರು 5, ಸಾಣೂರು 2, ಮುಡಾರು 1, ರೆಂಜಾಳ 2, ಇರ್ವತ್ತೂರು 1, ನಿಟ್ಟೆ ಶಾಖೆಯ ನಿಟ್ಟೆ 10, ಕಲ್ಯಾ 5, ಬೋಳ 3, ಕಾಂತಾವರ 6, ಬಜಗೋಳಿ ಶಾಖೆಯ ನಲ್ಲೂರು 7, ಮುಡಾರು 4, ಮಾಳ 4, ಈದು 4, ನೂರಾಳ್‌ಬೆಟ್ಟು 1, ಬೆಳ್ಮಣ್ ಶಾಖೆಯ ಮುಂಡ್ಕೂರು 7, ಬೆಳ್ಮಣ್ 4, ಮುಲ್ಲಡ್ಕ 2, ಸೂಡ 6, ನಂದಳಿಕೆ 2, ಇನ್ನಾ 1 ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗುತ್ತಿದೆ.
ಹೆಬ್ರಿ ತಾ|: 26 ವಿದ್ಯುತ್ ಪರಿವರ್ತಕ
ಹೆಬ್ರಿ ಉಪ ವಿಭಾಗಕ್ಕೆ 1 ಕೋ. ರೂ. ವೆಚ್ಚದಲ್ಲಿ 25 ಕೆ.ವಿ. ಸಾಮರ್ಥ್ಯದ 07 ಪರಿವರ್ತಕ, 63 ಕೆ.ವಿ. ಸಾಮರ್ಥ್ಯದ 19 ಪರಿವರ್ತಕ ಸೇರಿದಂತೆ ಒಟ್ಟು 26 ವಿದ್ಯುತ್ ಪರಿವರ್ತಕಗಳನ್ನು ಹೊಸದಾಗಿ ಅಳವಡಿಸಲಾಗುತ್ತಿದೆ. ಹೆಬ್ರಿ ಉಪ ವಿಭಾಗದ ಹೆಬ್ರಿ ಶಾಖೆಯ ನಾಡಾ³ಲು 3, ಮುದ್ರಾಡಿ 4, ಹೆಬ್ರಿ 3, ಚಾರಾ 3, ಶಿವಪುರ 3 ಮತ್ತು ಅಜೆಕಾರು ಶಾಖೆಯ ಮರ್ಣೆ 5, ಕಡ್ತಲ 3, ಶಿರ್ಲಾಲು 1, ವರಂಗ 1 ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:Breaking news | ನಾಡ ಹಬ್ಬ ಮೈಸೂರು ದಸರಾ ಉದ್ಘಾಟಕರ ಹೆಸರು ಘೋಷಣೆ
ಅಭಿವೃದ್ಧಿಯಲ್ಲಿ ದಾಪುಗಾಲಿಡುತ್ತಿರುವ ಕಾರ್ಕಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಾಮರ್ಥ್ಯಕ್ಕೆ ಅನುಗುಣವಾಗಿ ಪರಿವರ್ತಕಗಳ ಕೊರತೆಯಿಂದ ನಿರಂತರ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಿತ್ತು. ಹೊಸ ಟಿಸಿಗಳ ಜೋಡಣೆ, ಹಳೆ ಟಿಸಿಗಳ ಬದಲಾವಣೆ ಜತೆಗೆ ಹಳೆ ತಂತಿಗಳ ಬದಲಾವಣೆ ದಶಕಗಳಿಂದ ಹಳ್ಳ ಹಿಡಿದಿತ್ತು. ಇದರಿಂದಾಗಿ ಜನರು ಸಮ ಸ್ಯೆ ಅನುಭವಿಸುವಂತಾಗಿತ್ತು. ಹೊಸ ಟ್ರಾನ್ಸ್‌ಫಾರ್ಮರ್ ಬೇಡಿಕೆಯನ್ನು ಸಚಿವರಾಗುವ ಮೊದಲೆ ಸರಕಾರಕ್ಕೆ ಸಲ್ಲಿಸಲಾಗಿತ್ತು. ಇಂಧನ ಸಚಿವರಾದ ಬಳಿಕ ಈಗ ಈಡೇರಿದೆ.
90 ಸಾವಿರ ಯುನಿಟ್
ವಿದ್ಯುತ್ ಸರಬರಾಜು
ಮೆಸ್ಕಾಂ ಕಂಪೆನಿಯಾಗಿ ಪರಿವರ್ತನೆ ಆಗುವ ಮೊದಲು ಸರಕಾರದ ನೇರ ಅಧೀನದ ಇಲಾಖೆಯಾಗಿತ್ತು. ಆಗ ಕೆಇಬಿ ಹೆಸರಿನಲ್ಲಿತ್ತು. ಮೆಸ್ಕಾಂ ಆಗಿ ಪರಿವರ್ತನೆಗೊಳಿಸಿದ ಬಳಿಕ ಎಲ್ಲವನ್ನು ಕಂಪೆನಿಯೇ ನಿರ್ವಹಿಸುತ್ತಿದೆ. ಲಾಭ ನಷ್ಟ ಎಲ್ಲವನ್ನೂ ಕಂಪೆನಿಯೇ ನೋಡಿಕೊಳ್ಳಬೇಕಿದೆ. ವಿದ್ಯುತ್ ಪರಿವರ್ತಕ ಖರೀದಿ, ಮೇಲ್ದರ್ಜೆಗೇರಿಸಿ ಹೀಗೆ ಸುಧಾರಣೆಗೆ ಸರಕಾರ ಕಂಪೆನಿ ಆದಾಗಿನಿಂದ ಅನುದಾನವನ್ನೇ ನೀಡಿರಲಿಲ್ಲ. ಆದರೇ ಈಗ ಅನುದಾನ ಹರಿದು ಬಂದಿರುವುದರಿಂದ ಕ್ಷೇತ್ರದ ಜನತೆಯಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸಗಳು ವ್ಯಕ್ತಗೊಂಡಿವೆ. ತಾಲೂಕಿನಲ್ಲಿ 68 ಸಾವಿರಕ್ಕೂ ಅಧಿಕ ವಿದ್ಯುತ್ ಗ್ರಾಹಕರಿದ್ದಾರೆ. 90 ಲಕ್ಷ ಯುನಿಟ್ ವಿದ್ಯುತ್ ಸರಬರಾಜು ಆಗುತ್ತಿದೆ. ವಿದ್ಯುತ್ ಪರಿವರ್ತಕಗಳು 1,750 ಇದೆ. ಎಲ್‌ಟಿ ವಿದ್ಯುತ್ ಮಾರ್ಗದ ತಂತಿ 3,200 ಕಿ.ಮೀ. ಇದೆ. ಮೂರು ಸಬ್‌ಸ್ಟೇಶನ್‌ಗಳು ಕಾರ್ಯಾಚರಿಸುತ್ತಿವೆ. ಈಗ 130 ಟಿಸಿ ಸೇರ್ಪಡೆಯಾಗುತ್ತಿದೆ.
ಲೋ ವೋಲ್ಟೇಜ್ ಸಮಸ್ಯೆ ನಿವಾರಣೆ
ಕಾರ್ಕಳ ಮತ್ತು ಹೆಬ್ರಿ ಉಭಯ ತಾ|ಗಳಲ್ಲಿ ವಿದ್ಯುತ್ ಲೋ ವೋಲ್ಟೇಜ್ ದೀರ್ಘ ಕಾಲದ ಸಮಸ್ಯೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ನಾಗರಿಕರಿಗೆ, ಕೃಷಿಕರಿಗೆ ಅನಾನುಕೂಲವಾಗುತ್ತಿತ್ತು. ಈ ದೃಷ್ಟಿಯಿಂದ ಹೆಚ್ಚುವರಿ ಟಿಸಿ ಬೇಡಿಕೆಯನ್ನು ಈಡೇರಿಸುವ ಕೆಲಸವಾಗಿದೆ. ಎರಡೂ ತಾ|ಗಳಲ್ಲಿ ಲೋ ವೋಲ್ಟೇಜ್ ಸಮಸ್ಯೆ ಇದರಿಂದ ನಿವಾರಣೆ ಕಾಣಲಿದೆ.
-ವಿ.ಸುನಿಲ್‌ಕುಮಾರ್,ಇಂಧನ ಸಚಿವರು
ಸುದಿನ ವರದಿ
ಲೋ ವೋಲ್ಟೇಜ್, ಲೋಡ್ ಶೆಡ್ಡಿಂಗ್‌ನಿಂದ ಗೃಹ ಬಳಕೆ, ಕೃಷಿ ಚಟುವಟಿಕೆ ಎಲ್ಲದಕ್ಕೂ ಅಡಚಣೆಯಾಗುತ್ತಿತ್ತು. ಟಿಸಿಗಳು ಒತ್ತಡಕ್ಕೆ ಸಿಲುಕಿ ದೋಷಗಳು ಕಾಣಿಸಿಕೊಂಡು ವಿದ್ಯು ತ್‌ಸರಬರಾಜಿನಲ್ಲಿ ವ್ಯತ್ಯಯಗಳು ಆಗುತ್ತಿತ್ತು. ಈ ಸಮಸ್ಯೆ ಬೇಸಗೆ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿ ಜನರನ್ನು ಕಾಡುತ್ತಿತ್ತು. ಸಾಮರ್ಥ್ಯಕ್ಕೆ ತಕ್ಕಂತೆ ಟಿಸಿಗಳಿಲ್ಲದೆ ಒತ್ತಡಕ್ಕೆ ಪರಿವರ್ತಕಗಳು ಬೆದರುತ್ತಿವೆ ಎನ್ನುವ ಶಿರೋನಾಮೆಯಡಿ ಫೆ. 5ರಂದು ವಿಶೇಷ ವರದಿಯೊಂದನ್ನು ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.