![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 4, 2020, 4:57 AM IST
ಕೋವಿಡ್ 19ನಿಂದ ಇಡೀ ಜಗತ್ತೇ ತತ್ತರಿಸಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದರಲ್ಲಿ ಸಿನಿಮಾ ಮಂದಿ ಕೂಡಾ ಸೇರಿದ್ದಾರೆ. ಕನ್ನಡ ಚಿತ್ರರಂಗದ ನಟ-ನಟಿಯರು ಕೂಡಾ ಕೊರೊನಾ ಸಂಕಷಟಕ್ಕೆ ನಿರಂತರವಾಗಿ ತಮ್ಮಕೈಲಾದ ಸಹಾಯ ಮಾಡುತ್ತಿದ್ದಾರೆ. ಇದರಲ್ಲಿ ನಟಿ ಪ್ರಣೀತಾ ಕೂಡಾ ಸೇರಿದ್ದಾರೆ. ಕೋವಿಡ್ 19 ಸಂಕಷ್ಟ ಆರಂಭವಾದ ದಿನದಿಂದಲೂ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿರುವ ಪ್ರಣೀತಾ ಈಗ ಆಟೋ ಚಾಲಕರಿಗೆ ಸಹಾಯ ಮಾಡಿದ್ದಾರೆ.
ನೂರಕ್ಕೂ ಹೆಚ್ಚು ಆಟೋಗಳಿಗೆ ಫೈಬರ್ ಶೀಟ್ ಹಾಕಿಸಿ, ಚಾಲಕ ಹಾಗೂ ಪ್ರಯಾಣಿಕರ ಮಧ್ಯೆ ಅಂತರ ಕಾಯ್ದುಕೊಳ್ಳಲು ಸಹಾಯ ಮಾಡಿದ್ದಾರೆ. ಜೊತೆಗೆ ಸಾವಿರಕ್ಕೂ ಹೆಚ್ಚು ಆಟೋಗಳಿಗೆ ಈ ತರಹದ ಫೈಬರ್ ಶೀಟ್ ಹಾಕಿಸುವ ಗುರಿ ಹೊಂದಿದ್ದಾರೆ. ಇನ್ನು ಕೊರೊನಾಕೋವಿಡ್ 19 ಲಾಕ್‍ಡೌನ್‍ನಿಂದಾಗಿ ಅನೇಕ ಬಡವರು, ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿದೆ. ಕೆಲಸವಿಲ್ಲದೆ ಅನೇಕ ಕುಟುಂಬಗಳು ಕಂಗಾಲಾಗಿವೆ. ಇಂಥವರ ನೆರವಿಗೆ ಮುಂದಾಗಿರುವ ಪ್ರಣೀತಾ, ಅವರಿಗಾಗಿ ಊಟದ ವ್ಯವಸ್ಥೆ ಮತ್ತು ಅಗತ್ಯವಿರುವ ದಿನಸಿ ಸಾಮಾನುಗಳನ್ನು ಒದಗಿಸಲು ಅನೇಕ ಸಂಘ-ಸಂಸ್ಥೆಗಳ ಜೊತೆಗೆ ಕೈ ಜೋಡಿಸಿದ್ದಾರೆ.
ಬಡವರು, ಕೂಲಿ ಕಾರ್ಮಿಕರಿಗೆ ಸಹಾಯವಾಗಲು ಕೆಲವು ಸಂಸ್ಥೆಗಳ ಜೊತೆ ಸೇರಿ ಕಾರ್ಯಕ್ರಮ ರೂಪಿಸಿ, ಬಿ.ಪಿ.ಎಲ್ ಕಾರ್ಡ್ ದಾರರಾಗಿರುವ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳನ್ನು ಆಯ್ಕೆ ಮಾಡಿಕೊಂಡು ಅವರ ಕುಟುಂಬಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಜೊತೆಗೆ 2 ಸಾವಿರ ಹಣವನ್ನು ಅವರ ಅಕೌಂಟ್ ಗೆ ಹಾಕಿದ್ದಾರೆ. ಇನ್ನು ಪ್ರಣೀತಾ ಮನೆಯಲ್ಲಿ ಅವರ ಪೋಷಕರು ಕೂಡ ವೈದ್ಯರಾಗಿರುವುದರಿಂದ, ಕೋವಿಡ್ 19 ಎಫೆಕ್ಟ್ ಹೇಗಿದೆ ಎನ್ನುವುದನ್ನ ಅವರು ಹತ್ತಿರದಿಂದ ನೋಡುತ್ತಿದ್ದಾರಂತೆ. ಸದ್ಯ ಎಲ್ಲರ ಲೈಫ್ ಗೂ ಕೋವಿಡ್ 19 ಬ್ರೇಕ್ ಹಾಕಿದಂತಿದೆ ಎನ್ನುವ ಪ್ರಣೀತಾ, ಆದಷ್ಟು ಬೇಗ ಎಲ್ಲವೂ ಸಹಜ ಸ್ಥಿತಿಗೆ ಬರಲಿ, ಎಲ್ಲರೂ ಇದರಿಂದ ಹೊರಗೆ ಬರಲಿ ಎನ್ನುತ್ತಾರೆ.
ಇದರ ಜೊತೆಗೆ ಪ್ರಣೀತಾ ಒಂದಷ್ಟು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಂತೆ. ಈ ಬಗ್ಗೆ ಅವರೇ ಹೇಳುವಂತೆ, ಈಗ ಮನೆಯಲ್ಲಿ ತುಂಬ ಸಮಯ ಸಿಗುತ್ತಿರುವುದರಿಂದ, ಜಿಮ್, ವರ್ಕೌಟ್, ಡ್ಯಾನ್ಸ್ ಪ್ರಾಕ್ಟೀಸ್ ಎಲ್ಲವೂ ಮನೆಯಲ್ಲೇ ನಡೆಯುತ್ತಿದೆ. ಈಗ ಮನೆಯಲ್ಲಿ ನಾನೇ ಅಡುಗೆ ಮಾಡುತ್ತಿದ್ದೇನೆ. ಒಳ್ಳೆಯ ಸಿನಿಮಾಗಳನ್ನ ನೋಡುತ್ತಿದ್ದೇನೆ. ಒಂದಷ್ಟು ಪುಸ್ತಕಗಳನ್ನು ಓದುತ್ತಿದ್ದೇನೆ. ಮನೆಯಲ್ಲೇ ಇದ್ದರೂ ಎಂಗೇಜ್ ಆಗಿರುತ್ತೇನೆ ಎನ್ನುವುದು ಪ್ರಣೀತಾ ಮಾತು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.